ಕೃಷಿಕರ ತೋಟದಲ್ಲಿ ಬೆಳೆದ ಬಾಳೆಕಾಯಿ ನೈಸರ್ಗಿಕವಾಗಿ ಹಣ್ಣಾಗಲು ಕನಿಷ್ಟ ಒಂದುವಾರ ಬೇಕೆಬೇಕು. ಹೆಚ್ಚಾಗಿ ಹೆಚ್ಚು ಹಣ್ಣಾದ ಬಾಳೆಕಾಯಿ ಕೆಲ ದಿನಗಳಲ್ಲಿ ಕಪ್ಪು ಬಣ್ಣಕ್ಕೆ ತಿರುಗುವುದನ್ನು ಗಮನಿಸಿದ್ದೇವೆ. ಅಲ್ಲದೆ ಹೆಚ್ಚು ರುಚಿಕರವಾಗಿರುತ್ತದೆ. ಆದರೆ ಇತ್ತೀಚೆಗೆ ಅಂಗಡಿಗಳಲ್ಲಿ ದೊರೆಯುವ ಬಾಳೆ ಹಣ್ಣು ಹಚ್ಚ ಹಸಿರಾಗಿ ಮತ್ತು ಮೃದುವಾಗಿಯೇ ಇರುತ್ತದೆ. ಮನೆಗೆ ತಂದು ಎರಡುಗಂಟೆಯೋ ಅಥವಾ ಮೂರುಗಂಟೆ ಇಟ್ಟರೆ ಸಾಕು ಅಲ್ಲೇ ಕೊಳೆಯಲು ಶುರುವಾಗುತ್ತದೆ. ಹಣ್ಣುಗಳು ಸಪ್ಪೆ ಸಪ್ಪೆ!
ನಾನು ಮೊನ್ನೆ ಖರೀದಿಸಿದ ಬಾಳೆ ಹಣ್ಣು ಕೆಲ ಗಂಟೆಗಳಲ್ಲಿ ಕೊಳೆತು ಹೋಗಿದೆ. ವಿಪರ್ಯಾಸವೆಂದರೆ ಈಗ ರಾಸಾಯನಿಕ ಮಿಶ್ರಣ ಮಾಡಿ, ಸದ್ದಿಲ್ಲದೇ ಬಾಳೆಹಣ್ಣನ್ನು ಬಣ್ಣಕ್ಕೆ ತಿರುಗಿಸಿ ಮಾರಾಟ ಮಾಡಲಾಗುತ್ತಿದೆ ಎಂಬ ಸುದ್ದಿ ಇದೆ.ಹಾಗಾಗಿ ಬಣ್ಣದ ಬಾಳೆಹಣ್ಣುಗಳನ್ನು ನೋಡಿ ಬಾಯಿಬಿಟ್ಟರೆ ಆರೋಗ್ಯಕ್ಕೆ ಮಾರಕವಾಗುವ ರಾಸಾಯನಿಕ ಹೊಟ್ಟೆ ಸೇರುವುದು ಗ್ಯಾರಂಟಿ.
ಕೃಷಿಕರಿಂದ ಖರೀದಿಸಿದ ಬಾಳೆ ಹಣ್ಣಗಳು ನೇರವಾಗಿ ವ್ಯಾಪಾರಿಗಳ ಗೋದಾಮಿಗೆ ಹೋಗುತ್ತವೆ. ಕೆಲವೇ ದಿನಗಳಲ್ಲಿ ಕಾಯಿ ರೂಪದಲ್ಲಿರುವ ಬಾಳೆಯನ್ನು ಹಣ್ಣಾಗಿ ಪರಿವರ್ತನೆ ಮಾಡಲಾಗುತ್ತಿದೆ. ಗ್ರಾಹಕರನ್ನು ಆಕರ್ಷಿಸಲು ರಾಸಾಯನಿಕ ಮಿಶ್ರಣ ತಂತ್ರವನ್ನು ವ್ಯಾಪಾರಿಗಳು ಬಳಸುತ್ತಿದ್ದಾರೆ.
ಮಾಹಿತಿಯಂತೆ ಎಥಿಫಾನ್ ಟ್ಯಾಗ್ಪಾನ್ ಎಂಬ ವಿಷಕಾರಿ ಔಷಧ ಬಳಕೆ ಮಾಡಿದರೆ 10 ದಿನದಲ್ಲಿ ಹಣ್ಣಾಗುವ ಬಾಳೆಯನ್ನು 4-5 ದಿನದಲ್ಲಿ ಹಣ್ಣಾಗುತ್ತದೆ. ಗೋದಾಮಿನಲ್ಲಿ ಬಾಳೆಯನ್ನು ಟ್ಯಾಗ್ಪಾನ್ ವಿಷಕಾರಿ ರಾಸಾಯನಿಕ ಬ್ಯಾರಲ್ ನೀರಿನಲ್ಲಿ ಹಾಕಲಾಗುತ್ತಿದೆ. ಬಾಳೆಗೊನೆಯನ್ನು ಆ ನೀರಿನಲ್ಲಿ ಹಾಕಿ ನಂತರ ತಂಪು ಕೊಠಡಿಯಲ್ಲಿ ಇಡಲಾಗುತ್ತದೆ. 12 ರಿಂದ 24 ಗಂಟೆ ತಂಪಾಗಿಸಿದರೆ 2 ದಿನದಲ್ಲಿ ಹಣ್ಣಾಗುತ್ತದೆ! ಈ ಕೆಮಿಕಲ್ ಎಷ್ಟೊಂದು ವಿಷಕಾರಿ ಎಂದರೆ ಬಳಸುವ ಅಥವಾ ಮುಟ್ಟಬೇಕಾದ ವ್ಯಕ್ತಿಗಳು ಕೈಗಳಿಗೆ ಹ್ಯಾಂಡ್ ಕವರ್, ಮುಖಕ್ಕೆ ಮಾಸ್ಕ್ ಹಾಕಬೇಕು. ಇಷ್ಟೊಂದು ವಿಷಕಾರಿ ರಾಸಾಯನಿಕವನ್ನು ನೇರವಾಗಿ ಬಾಳೆಹಣ್ಣಿಗೆ ಮಿಶ್ರಣ ಮಾಡಲಾಗುತ್ತಿರುವುದು ನಿಜಕ್ಕೂ ದುರಂತ!!!
Article Courtesy V.K. Kadaba