ಅಜ್ಜರಕಾಡು: ಯುವಶಕ್ತಿ ಕರ್ನಾಟಕ ಇದರ ವತಿಯಿಂದ ಅಕ್ಟೋಬರ್ 2 ರಂದು ಬೆಳ್ಳಿಗೆ 7 ರಿಂದ ಅಜ್ಜಾರಕಾಡು ಸರಕಾರಿ ಆಸ್ಪತ್ರೆಯನ್ನು ಮೇಲ್ದರ್ಜೆಗೆ ಏರಿಸಲು ಸರಕಾರಕ್ಕೆ ಒತ್ತಾಯಿಸಿ ಅಜ್ಜರಕಾಡು ಸರಕಾರಿ ಆಸ್ಪತ್ರೆಯನ್ನು ಸೂಪರ್ ಸ್ಪೆಷಾಲಿಟಿ ಸರಕಾರಿ ಜಿಲ್ಲಾ ಆಸ್ಪತ್ರೆಯನ್ನಾಗಿ ಮಾಡಬೇಕು ಎಂಬ ನಿಟ್ಟಿನಲ್ಲಿ ಉಪವಾಸ ಸತ್ಯಾಗ್ರಹ ಆರಂಭಗೊಂಡಿದ್ದು ಇದು ಪ್ರಾರಂಭವಾಗಿದ್ದು ಮುಂದಿನ ದಿನಗಳಲ್ಲಿ ಆಸ್ಪತ್ರೆಯನ್ನು ಮೇಲ್ದರ್ಜೆಗೆ ಏರಿಸಲು ನಿರ್ಲಕ್ಷ ವಹಿಸಿದ್ದಲ್ಲಿ ಉಗ್ರ ಹೋರಾಟದ ಹಾದಿ ಹಿಡಿಯ ಬೇಕಾಗುವುದು ಎಂದು ಯುವ ಶಕ್ತಿ ಕರ್ನಾಟಕ ಸಮಿತಿಯವರು ತಿಳಿಸಿರುತ್ತಾರೆ. ಉಪವಾಸ ಸತ್ಯಾಗ್ರಹಕ್ಕೆ ಅನುಮತಿ ಪಡೆಯಲು ಮನವಿ ಮಾಡಿದಾಗ ಕೊರೊನಾ ನೆಪವೊಡ್ಡಿ ಅನುಮತಿಯನ್ನು ನೀಡಲು ಸಾಧ್ಯವಿಲ್ಲ ಎಂದು ನಿರಾಕರಿಸಲಾಗಿದೆ.
ಆದರೆ ಇಂದು ನಾವು ಉಪವಾಸ ಸತ್ಯಾಗ್ರಹ ಮಾಡುವ ಕೂದಲೇಲೆಯಾ ಆಂತರದಲ್ಲಿ ಸರಕಾರದಿಂದ ಕಾರ್ಯಕ್ರಮ ಕೂಡ ಆಯೋಜಿಸಿದ್ದು ಅಲ್ಲಿ ಶಾಮೀಯಾನ ಹಾಗೂ ಧ್ವನಿ ವರ್ದಕ ಬಳಸಿರೋದನ್ನು ಯುವಶಕ್ತಿ ಕಾರ್ನಟಕ ಇದರ ರಾಜ್ಯ ಉಪಾದ್ಯಕ್ಷರಾದ ಬೆಳ್ಕಳೆ ಶರತ್ ಶೆಟ್ಟಿ ಇವರು ತೀವ್ರವಾಗಿ ಖಂಡಿಸಿ ಅಜ್ಜರಕಾಡು ಸರಕಾರಿ ಆಸ್ಪತ್ರೆಯನ್ನು ಮೇಲ್ದರ್ಜೆಗೆ ಎರಿಸುವ ಹೋರಾಟವನ್ನು ಹತ್ತಿಕ್ಕಲು ಪ್ರಯತ್ನ ನಡೆಸುವ ಇದರ ಹಿಂದೆ ಇರುವ ಕಾಣದ ಶಕ್ತಿ ಯಾವುದು ಎಂದು ಬೆಳ್ಕಳೆ ಶೆಟ್ಟಿ ಯವರು ಪ್ರಶ್ನಿಸಿದ್ದಾರೆ.
ಯುವಶಕ್ತಿ ಕಾರ್ನಟಕ ಇದರ ರಾಜ್ಯಾಧ್ಯಕ್ಷ ಪ್ರಮೋದ್ ಉಚ್ಚಿಲ್ ರವರ ನೇತೃತ್ವದಲ್ಲಿ ನಡೆಯುವ ಉಪವಾಸ ಸತ್ಯಾಗ್ರಹದಲ್ಲಿ ಉಪಾದ್ಯಕ್ಷರಾದ ಬೆಳ್ಕಳೆ ಶರತ್ ಶೆಟ್ಟಿ, ಹಬೀಬ್ ಉಡುಪಿ, ಸಜ್ಜನ್ ಶೆಟ್ಟಿ, ಅಜಯ್ ಕಪ್ಪೆಟ್ಟು, ಹಮ್ಮದ್, ಶಾಹೀದ್ ರಝಾ
ಖ್ಯಾತ ವೈದ್ಯರಾದ ಪಿ. ವಿ ಭಂಡಾರಿ ಕರಾವಳಿ ಯೂತ್ ಕ್ಲಾಬ್ ಇದರ ಜಿಲ್ಲಾಧ್ಯಕ್ಷರಾದ ಆಶೋಕ್ ಹಾಗೂ ಸದಸ್ಯರ ಉಪಸ್ಥಿತಿ ಇದ್ದರು.