ಕೊರೊನಾ ಸೋಂಕಿತರಿಗೆ ಪ್ರಾಮಾಣಿಕವಾಗಿ ಸೂಕ್ತ ಚಿಕಿತ್ಸೆ ದೊರೆಯಬೇಕು.ಜನಪ್ರತಿನಿಧಿಗಳು ಮಾದ್ಯಮದವರ, ಜನರ ಬಳಿ ಒಂದು ಭರವಸೆ ಹೇಳಿದರೆ ಇನ್ನೊಂದಡೆ ಜನಪ್ರತಿನಿಧಿಗಳ ನಡೆ ಬೇರೆಯೇ ಇದೆ.
ಎಲ್ಲಾ ಧರ್ಮಿಯರಲ್ಲೂ ಒಂದೇ ಮಾತು ಕೊನೆಕ್ಷಣದಲ್ಲಿ ಸಾವನ್ನು ಗೌರವದಿಂದ ಮಾಡಿಸಬೇಕು ಅಂತ ಹೇಳಿದೆ.ಕೊರೊನಾದಿಂದ ಸಾವಿಗೀಡಾಡವರನ್ನ ಆಗೌರವದಿಂದ ನಡೆಸುತ್ತಿರುವುದು ದೊಡ್ಡದುರಂತವೇ ಸರಿ.
ಮಂಗಳೂರನ್ನೇ ಆಶ್ರಯಿಸಿದ ಅದೆಷ್ಟೋ ಮಂದಿ ಉದ್ಯೋಗಿಗಳಿಗೆ ಲಾಕ್ ಡೌನ್ ನಿಂದ ಮುಕ್ತಿ ಸಿಗುತ್ತಿಲ್ಲ.ತಲಪಾಡಿ ಗಡಿ ಸಂಚಾರಕ್ಕೆ ಇನ್ನೂ ಮುಕ್ತವಾಗಿಲ್ಲ. ಉಭಯ ರಾಜ್ಯಗಳು ಯಾಕೋ ಉದಾಸೀನ ನಿಲುವು ಹೊಂದಿದಂತೆ ಕಾಣುತ್ತೇ.
ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಕೊರೊನಾ ದಾಳಿ.ಸಾಮಾಜಿಕ ಅಂತರ,ಮಾಸ್ಕ್ ,ಸೆನಿಟೈಸರ್ ಇಲ್ಲದ ಬದುಕು ನಿರೀಕ್ಷಿಸಲು ಆಸಾಧ್ಯ.