ವರದಿ ರಾಯಿ ರಾಜ ಕುಮಾರ

ಮೂಡುಬಿದಿರೆ: ಮೂಡುಬಿದಿರೆ ಮಿಥುನ್ ರೈ ಅಭಿಮಾನಿ ಬಳಗ, ಬ್ಲಡ್ ಡೋನರ್ಸ್ ಹೆಲ್ಪ್ ಲೈನ್, ಆಳ್ವಾಸ್ ರೋಟರಿ ಬ್ಲಡ್ ಬ್ಯಾಂಕ್ ಸಹಯೋಗದೊಂದಿಗೆ ಮಿಥುನ್ ರೈ ಹುಟ್ಟುಹಬ್ಬದ ಪ್ರಯುಕ್ತ ರಕ್ತದಾನ, ಆರೋಗ್ಯ ಮಾಹಿತಿ, ಹಾಗೂ ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರಿಗೆ ಉಚಿತ ಆರೋಗ್ಯ ಕಾರ್ಡ್ ವಿತರಣಾ ಸಮಾರಂಭ ಅಕ್ಟೋಬರ್ 4 ರಂದು ರಿಂಗ್ ರೋಡ್ ಪ್ರೀತಂ ಗಾರ್ಡನ್ ಹಾಲ್ನಲ್ಲಿ ಜರಗಿತು. 

ಆಳ್ವಾಸ್ ಆಸ್ಪತ್ರೆಯ ಡಾ. ಹನಾ ಆಳ್ವ ಆರೋಗ್ಯ ಮಾಹಿತಿಯನ್ನು ನೀಡಿದರು. ವ್ಯಾಯಾಮ ಹಾಗೂ ಶಾರೀರಿಕ ಚಟುವಟಿಕೆಗಳ ಕೊರತೆಯಿಂದ ಹುಡುಗಿಯರಲ್ಲಿ ಹಾರ್ಮೋನ್ ವ್ಯತ್ಯಾಸಗಳಾಗಿ ಅನಾರೋಗ್ಯದ ತೊಂದರೆಗಳು ಉಂಟಾಗುತ್ತವೆ. ಆದುದರಿಂದ ಸಾಕಷ್ಟು ಶಾರೀರಿಕ ಚಟುವಟಿಕೆಗಳಲ್ಲಿ ಹುಡುಗಿಯರು ತೊಡಗಿಕೊಳ್ಳಬೇಕು ಎಂದು ತಿಳಿಸಿದರು. ಅದೇ ರೀತಿ ಆರೋಗ್ಯ ಜೀವ ವಿಮೆಯ ಅಗತ್ಯವನ್ನು ಕೂಡ ಮನದಟ್ಟು ಮಾಡಿದರು.

ಆಳ್ವಾಸ್ ಶಿಕ್ಷಣ ಸಂಸ್ಥೆಯ ಟ್ರಸ್ಟ್ ವಿವೇಕ ಆಳ್ವ, ವೃತ್ತ ನಿರೀಕ್ಷಕ ಸಂದೇಶ್ ಪಿ ಜಿ, ಎ ಸಿ ಎಫ್ ಶ್ರೀಧರ್, ಮೂಡಾ ಅಧ್ಯಕ್ಷ ಹರ್ಷವರ್ಧನ್ ಪಡಿವಾಳ್, ಗ್ಯಾರೆಂಟಿ ಸಮಿತಿಯ ಅಧ್ಯಕ್ಷ ಅರುಣ್ ಕುಮಾರ್ ಶೆಟ್ಟಿ, ಪ್ರಿಯದರ್ಶಿನಿ ಸೊಸೈಟಿಯ ಅಧ್ಯಕ್ಷ ವಸಂತ್ ಬೆರ್ನಾಡ್, ಪುರಸಭಾ ಸದಸ್ಯರುಗಳಾದ ಜೋಸ್ಸಿ ಮಿನೇಜಸ್, ಪುರಂದರ ದೇವಾಡಿಗ, ಸುರೇಶ್ ಪ್ರಭು, ಕೊರಗಪ್ಪ, ಇಕ್ಬಾಲ್ ಕರೀಂ,ಮತ್ತು ರಾಜೇಶ್ ಕಡಲ ಕೆರೆ, ಇತ್ಯಾದಿಯರು ಶುಭ ಹಾರೈಸಿದರು.