ಪ್ರತಿಭಟನೆ ನಡೆಸತ್ತಿರುವ ಕುಸ್ತಿ ವೀರರ ಜೊತೆಗೆ ರಾತ್ರಿ ಕೇಂದ್ರ ಕ್ರೀಡಾ ಮಂತ್ರಿ ಅನುರಾಗ್ ಠಾಕೂರ್ ಸರಣಿ ಮಾತುಕತೆ ನಡೆಸಿದರು. ಕುಸ್ತಿ ಪಟುಗಳಿಗೆ ಲೈಂಗಿಕ ಕಿರುಕುಳ ನೀಡುತ್ತಿರುವ ಬಿಜೆಪಿ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ ಅಧ್ಯಕ್ಷತೆಯ ರೆಸ್ಲಿಂಗ್ ಫೆಡರೇಶನ್ ಆಫ್ ಇಂಡಿಯಾ ವಿಸರ್ಜನೆ ಮಾಡುವಂತೆ ಪ್ರತಿಭಟನಾ ನಿರತರು ಪಟ್ಟು ಹಿಡಿದುದರಿಂದ ಮಾತುಕತೆ ನಿಂತು ಹೋಯಿತು.
ಮಹಿಳಾ ಆಯೋಗವು ಕೇಂದ್ರ ಕ್ರೀಡಾ ಸಚಿವಾಲಯಕ್ಕೆ ನೋಟೀಸು ನೀಡಿದೆ. ಕ್ರೀಡಾ ಸಚಿವಾಲಯವು ಮೂರು ದಿನದೊಳಗೆ ಉತ್ತರಿಸುವಂತೆ ರೆಸ್ಲಿಂಗ್ ಫೆಡರೇಶನ್ ಆಫ್ ಇಂಡಿಯಾಕ್ಕೆ ನೋಟೀಸು ನೀಡಿದ್ದಾರೆ.
ಕುಸ್ತಿ ವೀರರ ಪ್ರತಿಭಟನೆಯು ಮೂರನೆಯ ದಿನಕ್ಕೆ ಕಾಲಿಟ್ಟಿದೆ.