ಮೂಡುಬಿದಿರೆ: ಶ್ರೀ ದಿಗಂಬರ ಜೈನ ಮಠ ಮೂಡುಬಿದಿರೆ ಪರಮಪೂಜ್ಯ ಜಗದ್ಗುರು ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಟ್ಟಾಚಾರ್ಯ ಪಂಡಿತಚಾರ್ಯವರ್ಯ ಮಹಾ ಸ್ವಾಮೀಜಿಯವರು ದಿನಾಂಕ 11.10.25 ರಿಂದ 14.10.25 ರವರೆಗೆ ಮ.ಪ್ರ ಉಜ್ಜಯಿನಿ, ರಾಜಸ್ಥಾನ್, ಗುಜರಾತ್ ಧಾರ್ಮಿಕ ಪ್ರವಾಸ ಇಂದು ಬರೂಚ್, ಗುಜರಾತ್‌ನಲ್ಲಿ ಸ್ವಸ್ತಿಶ್ರೀ ಅರಹಂತಕೀರ್ತಿ ನೂತನ ಭಟ್ಟಾರಕ ಸ್ವಾಮೀಜಿ ಪೀಠಾರೋಹಣ ಕಾರ್ಯಕ್ರಮದಲ್ಲಿ ಭಾಗಿಯಾಗಿ, ಗುಜರಾತ್ ಗಿರಿನಾರ ಸಿದ್ಧ ಕ್ಷೇತ್ರದಲ್ಲಿ ಲಿಪಿಬದ್ಧಗೊಂಡ ಏಕೈಕ ಜೈನ ಆಗಮ ಷಟ್‌ಖಂಡಾಗಮ ಜೈನ ಕಾಶಿ ಮೂಡುಬಿದಿರೆಯಲ್ಲಿ ಸುರಕ್ಷಿತವಾಗಿದ್ದು, ಸುಮಾರು ಎರಡು ಸಾವಿರ ವರ್ಷಗಳಿಂದ ಕ್ಷೇತ್ರದ ಸಂಬಂಧ ಇದೆ. ಭಟ್ಟಾರಕ ಪೀಠಗಳು ಧರ್ಮಜಾಗೃತಿ, ಪ್ರಾಚೀನ ಕ್ಷೇತ್ರಗಳ ಜೀರ್ಣೋದ್ದಾರ, ಧರ್ಮಸಾಮರಸ್ಯ, ಶಾಂತಿ, ಸೌಹಾರ್ದತೆಯನ್ನು ಕಾಪಾಡುವ ಕೆಲಸ ಮುಂದುವರಿಸಲಿ ಎಂದರು.

ಬೆಳಿಗ್ಗೆ 5.30 ರಿಂದ 9.00 ರವರೆಗೆ 14.10.25 ರಂದು ಭಗವಾನ್ ಮುನಿಸುವ್ರತ ಸ್ವಾಮಿ ಬಸದಿಯಲ್ಲಿ ಎಲ್ಲಾ ಧಾರ್ಮಿಕ ಕಾರ್ಯಕ್ರಮ, ಪಟ್ಟಾಭಿಷೇಕ ವಿಧಿವಿಧಾನ ಮೂಡುಬಿದಿರೆ, ಶ್ರವಣಬೆಳಗೊಳ, ಅರಹಂತಗಿರಿ ಸ್ವಾಮೀಜಿ, ತಮಿಳುನಾಡು ಸಿದ್ಧಾಂತಕೀರ್ತಿ, ಮಂಡ್ಯ, ಕಂಬದಹಳ್ಳಿ ಭಟ್ಟಾರಕರ ಉಪಸ್ಥಿತಿಯಲ್ಲಿ ಅಭಿಷೇಕ, ಪೂಜೆ, ಧಾರ್ಮಿಕ ಸಭಾ ಕಾರ್ಯಕ್ರಮ ಜರುಗಿತು. ಬಳಿಕ ಎಲ್ಲಾ ಭಟ್ಟಾರಕ ಸ್ವಾಮೀಜಿಗಳು ನೂತನ ಸ್ವಾಮೀಜಿಗಳಿಗೆ ಶಾಸ್ತ್ರ, ಶಾಲು, ಜಪಸರ, ಸ್ಮರಣಿಕೆ ನೀಡಿ ಗೌರವಾರ್ಪಣೆ ಸಲ್ಲಿಸಿದರು.

ಕೋಟಾ ರಾಜಸ್ಥಾನ್ ಉದ್ಯಮಿ ಲೋಕೇಶ್ ಜೈನ್, ಬಕುಲ್ ಶಾ, ನಿರಂಜನ್ ಶಾ (ಬರೂಚ್), ದಿಲೀಪ್ ಶಾ ಮೊದಲಾದವರು ಉಪಸ್ಥಿತರಿದ್ದರು.