ಅಮೆರಿಕದ ಟೆನ್ನಿಸ್ ಪಟು ಕೋಕೋ ಗೌಫ್ ಅಮೆರಿಕದ ಓಪನ್ ಟೆನ್ನಿಸ್‌ನಲ್ಲಿ ಮಹಿಳಾ ಸಿಂಗಲ್ಸ್ ಗೆದ್ದು ಸಾಧನೆ ಬರೆದರು. ಅದೇ ವೇಳೆ ಪುರುಷರ ಸಿಂಗಲ್ಸ್ ಗೆದ್ದ ಜಾಕೋವಿಕ್ ಸಹ ಇತಿಹಾಸ ರಚಿಸಿದರು.
ಕೋಕೋ ಗೌಫ್ ಫೈನಲಿನಲ್ಲಿ ಬೆಲಾರಸ್‌ನ ಅರಿಯಾನಾ ಸೆಬಲೆಂಕಾರನ್ನು ಸೋಲಿಸಿದರು. 19ರ ಗೌಫ್ ಅವರು 1999ರಲ್ಲಿ ಸೆರೆನಾ ವಿಲಿಯಮ್ಸ್ ಬಳಿಕ ಅಮೆರಿಕನ್ ಓಪನ್ ಗೆದ್ದ ಹದಿಹರೆಯದವರು ಎಂಬ ದಾಖಲೆ ಬರೆದರು. ಇದು ಗೌಫ್ ಅವರ ಮೊದಲ ಗ್ರಾನ್‌ಸ್ಲಾಮ್ ಆಗಿದೆ.
ಇನ್ನೊಂದು ಕಡೆ ಪುರುಷರ ಸಿಂಗಲ್ಸ್‌ನಲ್ಲಿ ನೊವಾಕ್ ಜಾಕೋವಿಕ್ ಅವರು ಡೇನಿಯಲ್ ಮೆದ್ವೆದೆವ್‌ರನ್ನು ಸೋಲಿಸಿ ಚಾಂಪಿಯನ್ ಆದರು. ಇದು ಜಾಕೋವಿಕ್‌ರ ದಾಖಲೆಯ ಗ್ರಾನ್‌ಸ್ಲಾಮ್ ಆಗಿದೆ. ಪುರುಷರಲ್ಲಿ ಯಾರೂ 24 ಗೆದ್ದಿಲ್ಲ. ಮಹಿಳೆಯರಲ್ಲಿ ಒಬ್ಬರು ಕಳೆದ ಶತಮಾನದಲ್ಲಿ ಈ ಸಾಧನೆ ಮಾಡಿದ್ದರು.
ಮಹಿಳೆಯರ ಡಬಲ್ಸ್ ಪ್ರಶಸ್ತಿಯನ್ನು ಜಿ. ದಾಬ್ರೋಸ್ಕಿ ಮತ್ತು ಇ. ರೌಟ್ಸಿಪ್ಫೆ ಗೆದ್ದರು.