News by: Rons Bantwal
ಮುಂಬಯಿ (ಆರ್ ಬಿಐ), ಜ.31: ಮಹಾರಾಷ್ಟ್ರದಾದ್ಯಂತ ಹೋಟೆಲ್‍ಗಳು ಮತ್ತು ರೆಸ್ಟೋರೆಂಟ್‍ಗಳ ಮೇಲಿನ ನಿರ್ಬಂಧಗಳನ್ನು ಸಡಿಲಿಸಲು ಫೆಡರೇಶನ್ ಆಫ್ ಹೊಟೇಲ್ ಆ್ಯಂಡ್ ರೆಸ್ಟೋರೆಂಟ್ ಅಸೋಸಿಯೇಶನ್ಸ್ ನಿಯೋಗವು ಅಧ್ಯಕ್ಷ ಡಾ| ವಿರಾರ್ ಶಂಕರ್ ಬಿ.ಶೆಟ್ಟಿ ಮುಂದಾಳುತ್ವದಲ್ಲಿ ಮಹಾರಾಷ್ಟ್ರ ರಾಜ್ಯದ ಪರಿಹಾರ ಮತ್ತು ಪುನರ್ವಸತಿ ಸಚಿವ ವಿಜಯ್ ನಾಮದೇವ್ ವಡೆತ್ತಿವಾರ್ ಅವರನ್ನು ಭೇಟಿಯಾಯಿತು. ನರಿಮಾನ್ ಪಾಯಿಂಟ್ ಇಲ್ಲಿನ ಸಚಿವರ ಅಧಿಕೃತ ಬಂಗಲೋಗೆ ಭೇಟಿ ನೀಡಿದ ನಿಯೋಗವು ಸಚಿವರಲ್ಲಿ ಹೋಟೆಲು ಉದ್ಯಮವು ಎದುರಿಸುತ್ತಿರುವ ಸಮಸ್ಯೆಗಳನ್ನು ಮನವರಿಸಿದರು.
ಮಹಾರಾಷ್ಟ್ರದಾದ್ಯಂತದ ಹೋಟೆಲ್ ಉದ್ಯಮಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಶೀಘ್ರಗತಿಯಲ್ಲಿ ತಾವು ಪರಿಹರಿಸುವರೇ ವಿರಾರ್ ಶಂಕರ್ ಶೆಟ್ಟಿ ಕೋರಿದರು. 2022-2023ರ ಅಬಕಾರಿ ಶುಲ್ಕವನ್ನು ಕನಿಷ್ಠ ಈ ವರ್ಷಕ್ಕಾದರೂ ಮನ್ನಾ ಮಾಡಬೇಕು. ಜಿಎಸ್‍ಟಿಯನ್ನು 2% ಮಟ್ಟಕ್ಕೆ ಇಳಿಸಬೇಕು, ಪ್ರಸ್ತುತ ಅದು 5% ಆಗಿದೆ. ಹೋಟೆಲ್‍ನ ವಿದ್ಯುತ್ ಬಿಲ್‍ಗಳಲ್ಲಿ ಪರಿಹಾರ ನೀಡಬೇಕು. ಮದ್ಯವನ್ನು ಸೇವಿಸಲು ಮದ್ಯದ ಪರವಾನಿಗೆಯನ್ನು ರದ್ದುಗೊಳಿಸಬೇಕು ಈ ವ್ಯವಸ್ಥೆಯು ಈಗ ದೇಶದ ಉಳಿದ ಭಾಗಗಳಲ್ಲಿದೆ. ಪರ್ಮಿಟ್ ರೂಮ್ ವ್ಯವಹಾರದ ಮೇಲೆ ಪರಿಣಾಮ ಬೀರುವ ಅಕ್ರಮ ಮದ್ಯವನ್ನು ಇಡೀ ಮಹಾರಾಷ್ಟ್ರದ ರಸ್ತೆ ಬದಿಯ ಡಾಬಾಗಳಲ್ಲಿ ಮಾರಾಟ ಮಾಡಲು ರಾಜ್ಯ ಸರ್ಕಾರವು ಅನುಮತಿಸಬಾರದು. ಸಾಂಕ್ರಾಮಿಕ ಅವಧಿಯಲ್ಲಿ ಪರ್ಮಿಟ್ ರೂಮ್‍ಗಳಿಂದ ವ್ಯಾಟ್ ಸಂಗ್ರಹಿಸುವ ಬದಲು ಡಿಸ್ಟಿಲರಿ ಮತ್ತು ಬ್ರೂವರಿಯಿಂದ ಸಂಗ್ರಹಿಸಬೇಕು. ರಾಜ್ಯ ಸರ್ಕಾರವು ಪಾರ್ಸೆಲ್ ಆಧಾರದ ಮೇಲೆ ಮದ್ಯವನ್ನು ಮಾರಾಟ ಮಾಡಲು ಪರ್ಮಿಟ್ ರೂಂಗೆ ಅನುಮತಿ ನೀಡಿದ್ದು, ವ್ಯಾಟ್ ಸಂಗ್ರಹಿಸುವುದು ಉಚಿತವಲ್ಲ. ವೃತ್ತಿ ತೆರಿಗೆಯನ್ನು ರದ್ದುಗೊಳಿಸಬೇಕು, ಇದು ಸಾಂಕ್ರಾಮಿಕ ರೋಗದಿಂದ ಅಪಾರ ನಷ್ಟದಲ್ಲಿರುವ ಹೋಟೆಲ್ ಉದ್ಯಮಕ್ಕೆ ಪರಿಹಾರವನ್ನು ನೀಡುತ್ತದೆ.
ನಿಯೋಗದಲ್ಲಿ ಫೆಡರೇಶನ್‍ನ ಹಿರಿಯ ಉಪಾಧ್ಯಕ್ಷ ಶ್ಯಾಮ ಎಸ್.ಶೆಟ್ಟಿ, ಗೌರವ ಪ್ರಧಾನ ಕಾರ್ಯದರ್ಶಿ ದುರ್ಗಾಪ್ರಸಾದ್ ಸಿ.ಸಾಲಿಯಾನ್, ಸಲಹಾ ಸಮಿತಿ ಕಾರ್ಯಾಧ್ಯಕ್ಷ ಕಳತ್ತೂರು ವಿಶ್ವನಾಥ ಶೆಟ್ಟಿ ಉಪಸ್ಥಿತರಿದ್ದರು.
ಈ ವಾರದ ವೇಳೆಗೆ ಮೊದಲ ಹಂತದಲ್ಲಿ ಮುಂಬಯಿ ಮತ್ತು ಸುತ್ತಮುತ್ತಲಿನ ಜಿಲ್ಲೆಗಳು ಸಡಿಲಗೊಳ್ಳಲಿವೆ ಮತ್ತು ಮುಂದಿನ ವಾರಗಳಲ್ಲಿ ಪುಣೆ, ನಾಗ್ಪುರ ಮತ್ತು ಇತರ ಜಿಲ್ಲೆಗಳನ್ನು ಸಡಿಲಗೊಳಿಸಲಾಗುವುದು ಮತ್ತು ಕೊನೆಯ ಹಂತದಲ್ಲಿ ಇಡೀ ಮಹಾರಾಷ್ಟ್ರವು ಓಮಿಕ್ರಾನ್‍ನಿಂದ ವಿಧಿಸಲಾದ ನಿರ್ಬಂಧಗಳಿಂದ ಮುಕ್ತವಾಗಲಿದೆ ಎಂದು ಸಚಿವರು ಭರವಸೆ ನೀಡಿದರು.