ಮಂಗಳೂರು:- ಸಾರ್ವಜನಿಕ ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕ ಮತ್ತು ಮಂಗಳೂರು ಸರಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಸಿಪ್ರಿಯಾನ್ ಮೊಂತೇರೊ ಇವರು ಮಂಡಿಸಿದ `ಪ್ರೌಢ ಶಾಲೆಗಳಲ್ಲಿ ಅನುಷ್ಟಾನಗೊಂಡಿರುವ ಐಸಿಟಿ (ಹಂತ 1 ಮತ್ತು ಹಂತ 2) ಮೌಲ್ಯಮಾಪನಾತ್ಮಕ ಅಧ್ಯಯನ' ಮಹಾ ಪ್ರಬಂಧಕ್ಕೆ ಮಂಗಳೂರು ವಿಶ್ವವಿದ್ಯಾನಿಲಯವು ಪಿಎಚ್‌ಡಿ ಪದವಿ ನೀಡಿ ಗೌರವಿಸಿದೆ. ಸಂತ ಆನ್ಸ್ ಶಿಕ್ಷಣ ಮಹಾವಿದ್ಯಾಲಯದ ನಿವೃತ್ತ ಸಹ ಪ್ರಾಧ್ಯಾಪಕರಾದ ಡಾ. ಶಶಿಕಲಾ ಎ. ಇವರು ಮಾರ್ಗದರ್ಶನ ನೀಡಿದ್ದರು.

1994 ಬ್ಯಾಚಿನ ಕೆ.ಇ.ಎಸ್. ಅಧಿಕಾರಿಯಾಗಿರುವ ಮೊಂತೇರೊ, ಉಡುಪಿಯ ಶಿಕ್ಷಣಾಧಿಕಾರಿಯಾಗಿ, ಕಾರ್ಕಳ ಮತ್ತು ಮೂಡಬಿದ್ರೆ ತಾಲೂಕುಗಳಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಯಾಗಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಉಪನಿರ್ದೇಶಕರು (ಅಭಿವೃದ್ಧಿ) ಮತ್ತು ಡಯಟ್ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿರುತ್ತಾರೆ.