ಪಡುಬಸದಿ ವಾರ್ಷಿಕೋತ್ಸವ 24 ಮೇ, 2024 ಶುಕ್ರವಾರ ಪ.ಪೂಜ್ಯ ಜಗದ್ಗುರು ’ಸ್ವಸ್ತಿಶ್ರೀ ಡಾ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯ ಪಟ್ಟಾಚಾರ್ಯವರ್ಯ ಮಹಾಸ್ವಾಮಿಜೀ ನೇತೃತ್ವ, ಪಾವನ ಸಾನ್ನಿಧ್ಯದಲ್ಲಿ ಜರುಗಿತು.

ಬೆಳಿಗ್ಗೆ ತೋರೋಣ ಮಹೂರ್ತ, ವಿಮಾನ ಶುದ್ದಿ ಮಧ್ಯಾಹ್ನ ಶ್ರೀ ಜಿನ ಮುಖವಸ್ತ್ರ ಉದ್ಘಾಟನೆಯೊಂದಿಗೆ ಅಪರಾಹ್ನ ಶ್ರೀ ಕೆ. ಅಭಯಚಂದ್ರ ಜೈನ್, ಮಾಜಿ ಸಚಿವರು, ಬ್ರಹ್ಮ ದೇವರ ಆರಾಧನೆ ನೆರವೇರಿಸಿದರು. ಸಂಜೆ 6.00ರಿಂದ ಬ್ರಹ್ಮ ದೇವರ ಉತ್ಸವ ಭಗವಾನ್ ಅನಂತ, ಧರ್ಮ ವಿಮಲಾನಾಥ ಸ್ವಾಮಿ 24 ಕಲಶ ಅಭಿಷೇಕ, ಸರಸ್ವತಿ, ಪದ್ಮಾವತಿ ದೇವಿ,ಕ್ಷೇತ್ರ ಪಾಲನಾಗ ದೇವರ ಷೋಡಶ ಉಪಚಾರ ಪೂಜೆ ನೆರವೇರಿತು. ಆಶೀರ್ವಾದ ನೀಡಿದ ಸ್ವಾಮೀಜಿ ವಾರ್ಷಿಕೋತ್ಸವದ ಸಂಧರ್ಭ ಭಗವಂತರ ಸಮವಸರಣದ ಧರ್ಮ ಸಭೆಯ ಸಂದೇಶದ ಸ್ಮರಣೆ ಭಕ್ತಿ ಪೂಜೆ ನೆರವೇರುದು ನಮ್ಮ ಒಳ್ಳೆಯ ಸಭ್ಯ ಸದಾಚಾರ ಗುಣಗಳಿಂದ ನಾವು ಸುಖ ಶಾಂತಿ ನೆಮ್ಮದಿಯಾಗಿ ಬಾಳ ಬಹುದು ಕ್ರಿ ಪೂ 3ನೇ ಶತಮಾನದ ಪೂರ್ವದಲ್ಲೆ ನಿರ್ಮಾಣವಾದ ಮೂಡುಬಿದಿರೆಯ ಗುರುಪೀಠ ಪ್ರಾರಂಭದಲ್ಲಿ ಇದೆ. ಪಡು ಬಸದಿಯಿಂದ ಆರಂಭವಾಗಿತ್ತು. ಇಲ್ಲೆ ಕಲ್ಲ ಮರಿಗೆಯಲ್ಲಿ ಭಗವಂತರ ಹಿಂಭಾಗದ ಚಿಕ್ಕ ಕೊಠಡಿಯಲ್ಲಿ ಸಾವಿರಾರು ತಾಡಾ ಓಲೆ ಗ್ರಂಥ 1940 ರ ಸುಮಾರಿಗೆ ಕಂಡು ಹಿಡಿದು ಶ್ರೀ ಮಠದ ರಮಾ ರಾಣಿ ಶೋದ ಸಂಸ್ಥಾನದಲ್ಲಿ ಇರಿಸಿ ಶೋದ ಕಾರ್ಯ ನಿರಂತರ ನಡೆಯುತ್ತಿದೆ ಕ್ಷೇತ್ರದ ಪ್ರಗತಿಗೆ ಸರ್ವರ ಸಹಕಾರ ಇರಲಿ ಎಂದು ನುಡಿದರು.
ವ್ಯವ ಸ್ಥಾಪಕ ಸಂಜಯಂತ ಕುಮಾರ್ ಸ್ವಾಗತಿಸಿದರು.

ಪಟ್ಟಣ ಶೆಟ್ಟಿ ಸುದೇಶ್, ದಿನೇಶ್ ಆದರ್ಶ್ ಬಸದಿ ಮುಕ್ತೇಸರರು,ಶೈಲೇoದ್ರ ಜೈನ್ ಶಂಭವ್, ಕುಲದೀಪ, ಬಾಹುಬಲಿ ಪ್ರಸಾದ್ ಅಶೋಕ್ ಕೊಡಿಪಾಡಿ, ನಾಗವರ್ಮ ಪ್ರತಾಪ್ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು. ಅರ್ಚಕ ಅರವಿಂದ್ ಹಾಗೂ ಸಹ ಪುರೋಹಿತರು ಪೂಜೆ ಆರಾಧನೆ ಶ್ರೀ ಗಳ ಮಾರ್ಗದರ್ಶನದಲ್ಲಿ ನೆರವೇರಿಸಿದರು.