ಧರ್ಮಸ್ಥಳ ದೇವಸ್ಥಾನದ ಸಿಬ್ಬಂದಿಯಾದ ಪುದುವೆಟ್ಟು ಗ್ರಾಮದ ನಿವಾಸಿಚಿ. ಹರಿಕೃಷ್ಣ ಎಂಬ ವರನು ಧರ್ಮಸ್ಥಳದ ನಿವಾಸಿ ಚಿ.ಸೌ. ಅರ್ಪಿತಾ ಎಂಬ ವಧುವನ್ನು ಇಂದು ಗುರುವಾರ ಉಚಿತ ಸಾಮೂಹಿಕ ವಿವಾಹ ಸಮಾರಂಭದಲ್ಲಿ ಮದುವೆಯಾಗಲಿದ್ದು ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಬೀಡಿನಲ್ಲಿ ವರನಿಗೆ ಧೋತಿ, ಶಾಲು ಹಾಗೂ ವಧುವಿಗೆ ಸೀರೆ, ರವಿಕೆಕಣ, ಮಂಗಲ ಸೂತ್ರ ಮತ್ತು ಉಡುಗೊರೆಯನ್ನು ನೀಡಿ ಆಶೀರ್ವದಿಸಿದರು.

ವಧುವಿನ ತಾಯಿ ಮತ್ತು ತಂದೆ ಕೂಡಾ ದೇವಸ್ಥಾನದ ಸಿಬ್ಬಂದಿಯಾಗಿದ್ದಾರೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿಯವರ ಆಪ್ತ ಕಾರ್ಯದರ್ಶಿಯವರಾದ ಎ.ವಿ. ಶೆಟ್ಟಿಯವರು ತಿಳಿಸಿರುತ್ತಾರೆ.