ವಿದ್ಯಾಗಿರಿ, ಮೂಡುಬಿದಿರೆ: ‘ಅವಕಾಶ ಸಿಗಲಿಲ್ಲ ಎಂದು ಕೊರಗುವುದ್ಕಕಿಂತ ಸಿಕ್ಕ ಚಿಕ್ಕ ಅವಕಾಶವನ್ನೇ ಬಳಸಿಕೊಂಡು ಜೀವನದಲ್ಲಿ ಯಶಸ್ಸು ಕಾಣಬೇಕು’ ಎಂದು ಕಂಠದಾನ ಕಲಾವಿದ ಹಾಗೂ ವಿಡಿಯೊ ಸಂಕಲನಕಾರ ಪ್ರಸನ್ನ ಭಟ್ ಹೇಳಿದರು.  

ಆಳ್ವಾಸ್ ಕಾಲೇಜಿನ ಬಿ.ಎಸ್ಸಿ ಅನಿಮೇಷನ್ ಮತ್ತು ವಿ.ಎಫ್,ಎಕ್ಸ್ ವಿಭಾಗದ ವತಿಯಿಂದ ಆಯೋಜಿಸಿದ್ದ ‘ಪಿಕ್ಸೆಲ್ - ಫ್ಯೂಶನ್’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ವಿದ್ಯಾರ್ಥಿ ಜೀವನದಲ್ಲಿ ಅಂಕದ ಜೊತೆ ಸೃಜನಾತ್ಮಕತೆಗೆ ಹೆಚ್ಚು ಒತ್ತು ಕೊಡಬೇಕು. ಪ್ರಾಪಂಚಿಕ ಜ್ಞಾನ ತುಂಬಾ ಮುಖ್ಯ ಎಂದರು.

ಆಳ್ವಾಸ್ ಕಾಲೇಜಿನ ಆಡಳಿತಾಧಿಕಾರಿ ಬಾಲಕೃಷ್ಣ ಶೆಟ್ಟಿ ಮಾತನಾಡಿ, ನಮ್ಮ ಯೋಚನೆಗಳೇ ನಾವಿರುವ ಸ್ಥಿತಿಗೆ ಕಾರಣ. ಯಶಸ್ಸಿನ ಹಿಂದೆ ಸಮರ್ಪಣಾ ಭಾವ ಮುಖ್ಯವಾಗಿರುತ್ತದೆ. ನಾವು ಹಿಂಜರಿಕೆಯನ್ನು ಮೆಟ್ಟಿ ನೀರಿನ ಹಾಗೆ ಹರಿಯುತ್ತಿದ್ದರೆ ಒಂದು ದಿನ ಸಮುದ್ರ ಸೇರಬಹುದು. ಸಣ್ಣ ಸಣ್ಣ ಅವಕಾಶಗಳೇ ಜೀವನವನ್ನು ರೂಪಿಸುತ್ತದೆ ಎಂದರು.

ಆಳ್ವಾಸ್ ಬಿ.ಎಸ್ಸಿ ಅನಿಮೇಷನ್ ಮತ್ತು ವಿ.ಎಫ್.ಎಕ್ಸ್ ವಿಭಾಗದ ಮುಖ್ಯಸ್ಥ ರವಿಚಂದ್ರ ಮೂಡುಕೊಣಾಜೆ ಇದ್ದರು. ಬಳಿಕ ವಿವಿಧ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ವಿದ್ಯಾರ್ಥಿ ಸ್ವಾಗತ್ ಸ್ವಾಗತಿಸಿದರು. ವಿದ್ಯಾರ್ಥಿನಿ ಅಪೂರ್ವ ಎಸ್.  ನಿರೂಪಿಸಿದರು.

ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಡಿಎಸ್‍ಎಲ್‍ಆರ್ ಫೋಟೋಗ್ರಾಫಿ- ಪ್ರಿಯದರ್ಶನಿ ಪ್ರಥಮ, ವೈಶಾಕ್ ಮಿಜಾರು- ದ್ವಿತೀಯ, ಡಿಜಿಟಲ್ ಪೊಸ್ಟರ್ ಮೇಕಿಂಗ್-  ತೇಜಸ್ ಪ್ರಥಮ, ಅಮಲ್ ದ್ವಿತೀಯ , ವಿಡಿಯೋ ಎಡಿಟಿಂಗ್- ಪ್ರಖ್ಯಾತ್ ಪ್ರಥಮ, ಶ್ರಾವ್ಯ ದ್ವಿತೀಯ  ಬಹುಮಾನ ಪಡೆದುಕೊಂಡರು.