ಖಾಸಗಿ ಎಂಜಿನಿಯರಿಂಗ್ ಕಾಲೇಜುಗಳ ಶುಲ್ಕಗಳಲ್ಲಿ ಯಾವುದೇ ಹೆಚ್ಚಳ ಈ ಬಾರಿ ಇಲ್ಲ ಎಂದು ಉನ್ನತ ಶಿಕ್ಷಣ ಸಚಿವ ಅಶ್ವತ್ಥನಾರಾಯಣ ಅವರು ಬೆಂಗಳೂರಿನಲ್ಲಿ ತಿಳಿಸಿದರು.
ಖಾಸಗಿ ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಸರಕಾರಿ ಕೋಟಾದಲ್ಲಿ ಪ್ರವೇಶ ಪಡೆಯುವವರು ಹಿಂದಿನಂತೆಯೇ ಎರಡು ಕಂತುಗಳಲ್ಲಿ ಶುಲ್ಕ ಕಟ್ಟಬೇಕು. ಮೊದಲ ಬಾರಿಗೆ ರೂ. 65,340 ಮತ್ತು ಎರಡನೆಯ ಸಾರಿ ರೂ. 58,806 ಕಟ್ಟಬೇಕು ಎಂದು ಸಚಿವರು ತಿಳಿಸಿದರು.
ಇತರೆ ಶುಲ್ಕ ಎಂದು ಸುಲಿಗೆ ಮಾಡುವ ದೂರು ಇದೆ. ಇತರ ಶುಲ್ಕ ರೂ. 20,000 ಮೀರದಂತೆ ನಿಯಮ ಮಾಡಲಾಗಿದೆ. ಇನ್ನು ಮೇಲೆ ಶುಲ್ಕಗಳನ್ನು ಕೆಇಎ ಮೂಲಕವೇ ಕಟ್ಟಬೇಕು ಎಂದು ಸಹ ಮಂತ್ರಿಗಳು ಹೇಳಿದರು.