ಮಂಗಳೂರು ಮಾ.26: ಜಿಲ್ಲಾ ಸಲಹಾ ಸಮಿತಿ ಹಾಗೂ ಜಿಲ್ಲಾ ಮೇಲ್ಚಿಚಾರಣಾ ಮತ್ತು ತಪಾಸಣಾ ಸಮಿತಿ ಸಭೆ (ಪಿ.ಸಿ.& ಪಿ.ಎನ್.ಡಿ.ಟಿ.) ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಕಛೇರಿಯಲ್ಲಿ ನಡೆಯಿತು.

ಜಿಲ್ಲಾಕುಟುಂಬ ಕಲ್ಯಾಣಾಧಿಕಾರಿ ಡಾ. ತಿಮ್ಮಯ್ಯ ಅವರು ಸಭೆಯ ಕಾರ್ಯಸೂಚಿಯನ್ನು ಸದಸ್ಯರ ಗಮನಕ್ಕೆ ಬಂದರು. ಸಭೆಯಲ್ಲಿ ಜಿಲ್ಲೆಯ ಲಿಂಗಾನುಪಾತದ ಕುರಿತು ಚರ್ಚಿಸಲಾಯಿತು. ಲಿಂಗಾನುಪಾತ ಕಡಿಮೆ ಇರುವ ತಾಲೂಕಿನಲ್ಲಿ ಪರಿಶೀಲನೆ ನಡೆಸುವುದೆಂದು ಸಭೆಯಲ್ಲಿ ನಿರ್ಣಯಿಸಲಾಯಿತು.

ಸ್ಕ್ಯಾನಿಂಗ್‍ ಮಾಡುವ ಯಾವುದೇ ತಜ್ಞ ವೈದ್ಯರು ನಿರ್ದಿಷ್ಟ ಸ್ಕ್ಯಾನಿಂಗ್‍ ಕೇಂದ್ರದಲ್ಲಿ ಸ್ಕ್ಯಾನಿಂಗ್ ಮಾಡಲು ಪ್ರತ್ಯೇಕವಾಗಿ ನೋಂದಣಿ ಮಾಡಿರಬೇಕು. (Radiologist, Gynaecologist, Cardiologist And Other Specialist). ಇಲ್ಲದಿದ್ದರೆ ಅಂತಹ ವೈದ್ಯರಿಗೆಸ್ಕ್ಯಾನಿಂಗ್‍ ಕೇಂದ್ರದಲ್ಲಿ ಮಾಡಲು ಅವಕಾಶವಿಲ್ಲ. ನೋಂದಣಿ ಮಾಡಿದ ಕೇಂದ್ರ ಬಿಟ್ಟು ಬೇರೆಡೆ ಸ್ಕ್ಯಾನಿಂಗ್ ಮಾಡಿದರೆ ಅಂತಹ ಸ್ಕ್ಯಾನಿಂಗ್ ಯಂತ್ರಗಳನ್ನು ವಶಪಡಿಸಿ, ಸ್ಕ್ಯಾನಿಂಗ್‍ ಕೇಂದ್ರವನ್ನು ಬಂದ್ ಮಾಡಲು ಪಿಸಿ&ಪಿಎನ್‍ಡಿಟಿ ಕಾನೂನಿನಲ್ಲಿ ಅವಕಾಶವಿದೆ ಎಂದು ಸಭೆಯಲ್ಲಿ ತಿಳಿಸಲಾಯಿತು.

ಜಿಲ್ಲಾ ಸಲಹಾ ಸಮಿತಿಯ ಅಧ್ಯಕ್ಷರಾದ ಡಾ. ಅಮೃತಾ ಭಂಡಾರಿ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಸಲಹಾ ಸಮಿತಿ ಹಾಗೂ ಜಿಲ್ಲಾ ಮೇಲ್ವಿಚಾರಣಾ ಮತ್ತು ತಪಾಸಣಾ ಸಮಿತಿ ಸದಸ್ಯರು ಸಭೆಯಲ್ಲಿ ಉಪಸ್ಥಿತರಿದ್ದರು.