ಪುತ್ತೂರು: ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಹಾಗೂ ಪುತ್ತೂರು ವಕೀಲರ ಸಂಘದ ವತಿಯಿಂದ ಆಟಿದ ಸೇರಿಗೆ ಹಾಗೂ ಆಟಿದ ಗೇನ ಬಹು ಭಾಷಾ ಕವಿಗೋಷ್ಠಿ ಆ.8ರ ಗುರುವಾರ ಮಧ್ಯಾಹ್ನ ಪುತ್ತೂರು ವಕೀಲರ ಸಭಾಭವನದಲ್ಲಿ ನಡೆಯಲಿದೆ.
ಮಧ್ಯಾಹ್ನ 12.30 ಕ್ಕೆ ಹಿರಿಯ ವಕೀಲ ಗೋವರ್ದನ ನಾಯಕ್ ಕವಿಗೋಷ್ಠಿಯನ್ನು ಉದ್ಘಾಟಿಸುವರು . ತುಳು ಅಕಾಡೆಮಿ ಸದಸ್ಯ ಹಾಗೂ ವಕೀಲ ಕುಂಬ್ರ ದುರ್ಗಾ ಪ್ರಸಾದ್ ರೈ ಅವರು ಕವಿ ಗೋಷ್ಠಿಯ ಅಧ್ಯಕ್ಷತೆ ವಹಿಸುವರು. ವಕೀಲರಾದ ಮಹಮ್ಮದ್ ಸಿದ್ದಿಕ್ ಹಾಗೂ ಸಂತೋಷ್ ಕುಮಾರ್ ಅವರು ಗೌರವ ಉಪಸ್ಥಿತಿಯಲ್ಲಿರುವರು .
ಬಹು ಭಾಷಾ ಕವಿಗೋಷ್ಠಿಯಲ್ಲಿ ಮನೋಹರ್ ಕೆ.ವಿ. (ಕನ್ನಡ) ಭಾಸ್ಕರ ಕೊಡಿಂಬಾಳ (ಅರೆಭಾಷೆ), ಶಶಿಧರ್ ಬಿ.ಎನ್. (ಶಿವಳ್ಳಿ), ನೂರುದ್ದೀನ್ ಸಾಲ್ಮಾರ (ಬ್ಯಾರಿ) , ಗೌರೀಶ್ ಚಂದ್ರ ಶಾನ್ ಭೋಗ್ (ಕೊಂಕಣಿ), ಉದಯ ರವಿ (ಹವ್ಯಕ), ಮಜೀದ್ ಖಾನ್ (ಉರ್ದು), ಸ್ವಾತಿ ಜೆ.ರೈ (ಹಿಂದಿ), ಮಹೇಶ್ ಕೆ.ಸವಣೂರು (ತುಳು) ಕವನ ವಾಚಿಸುವರು .
ಆಟಿದ ಗೇನ ಉಪನ್ಯಾಸ ಕಾರ್ಯಕ್ರಮದಲ್ಲಿ ಹಿರಿಯ ವಕೀಲ ಎನ್.ಕೆ. ಜಗನ್ನಿವಾಸ್ ರಾವ್ ಅವರು ಆಟಿ ತಿಂಗಳ ಬಗ್ಗೆ ಮಾತನಾಡುವರು . ಬಳಿಕ ನಡೆಯುವ ಸಭಾ ಕಾರ್ಯಕ್ರಮವನ್ನು ಪುತ್ತೂರು ಐದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಸರಿತಾ ಡಿ. ಅವರು ಉದ್ಘಾಟಿಸುವರು . ಮುಖ್ಯ ಅತಿಥಿಗಳಾಗಿ ನ್ಯಾಯಾಧೀಶರಾದ ಪ್ರೀಯಾ ರವಿ ಜೋಗ್ಲೆಕರ್, ಅರ್ಚನಾ ಕೆ.ಉಣ್ಣಿತ್ತಾನ್ , ಯೋಗೇಂದ್ರ ಶೆಟ್ಟಿ ಅವರು ಭಾಗವಹಿಸುವರು .
ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಚಿದಾನಂದ ಬೈಲಾಡಿ, ಜಯರಾಮ ಭಟ್ , ಮಹಾಬಲ ಶೆಟ್ಟಿ ಕೊಮ್ಮಂಡ, ದೇವಿ ಪ್ರಸಾದ್ ಕಡಮ್ಮಾಜೆ, ಸುಧಾಕರ ನಿಡ್ವಣ್ಣಾಯ, ಹರಿಣಾಕ್ಷಿ ಜೆ. ಶೆಟ್ಟಿ ಅವರನ್ನು ಸನ್ಮಾನಿಸಲಾಗುವುದು ಎಂದು ತುಳು ಅಕಾಡೆಮಿಯ ರಿಜಿಸ್ಟ್ರಾರ್ ಪೂರ್ಣಿಮಾ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.