ಪುತ್ತೂರು: ಸಮಾಜಮುಖಿಯಾದ ಕಾರ್ಯಕ್ರಮಗಳು, ವಿಚಾರ ಮಂಡನೆಗಳು ರೋಟರಿಯ ಮುಖ್ಯ ಉದ್ದೇಶವಾಗಿದೆ. ಅಂತಹ ಕಾರ್ಯಗಳಲ್ಲಿ ಪುಸ್ತಕ ಬಿಡುಗಡೆಯೂ ಒಂದು. ಉಪನಿಷತ್ತುಗಳನ್ನು ವೇದಾಂತ ಎಂದು ಕರೆಯುತ್ತಾರೆ. ಹಿಂದು ಸನತಾನದ ಧರ್ಮದ ಅಧ್ಯಯನಕ್ಕೆ ಉಪನಿಷತ್ ಬಹಳ ಅತ್ಯಗತ್ಯ. ಈ ನೆಲೆಯಲ್ಲಿ ಡಾ.ವಿಷ್ಣು ಭಟ್ ಅವರ ಕೃತಿಗಳು ಮೌಲಿಕವಾದದ್ದು ಎಂದು ಡಾ.ರವಿಪ್ರಕಾಶ್ ಅವರು ಹೇಳಿದರು.
ಕನ್ನಡಕ್ಕೆ ಅನುವಾದಗೊಂಡ ಡಾ.ಕೆ ವಿಷ್ಣುಭಟ್ ಅವರ ಮಾಂಡೂಕ್ಯೋಪನಿಷದ್ - ಗೌಡಪಾದಕಾರಿಕಾ ಪುಸ್ತಕ ಮತ್ತು ಅದ್ವೈತ ಮತ್ತು ಇತರ ಹತ್ತು ಲೇಖನಗಳನ್ನೊಳಗೊಂಡ ಪುಸ್ತಕಗಳು ಸೋಮವಾರ ರೋಟರಿ ಮನಿಷಾ ಸಭಾಂಗಣದಲ್ಲಿ ರೋಟರಿ ಕ್ಲಬ್ ಪುತ್ತೂರು ಈಸ್ಟ್ ಇದರ ನೇತೃತ್ವದಲ್ಲಿ ನಡೆದ ಬಿಡುಗಡೆ ಸಮಾರಂಭದಲ್ಲಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಪದ್ಯದ ರೂಪದಲ್ಲಿ ವಿವರಣೆ ನೀಡಿದ ಅರ್ತಿಕಜೆ:
ಹಿರಿಯ ಸಾಹಿತಿ ಪ್ರೊ.ವಿ ಬಿ ಅರ್ತಿಕಜೆ ಅವರು ಮಾಂಡೊಕ್ಯೋಪನಿಷದ್ -ಗೌಡಪಾದಕಾರಿಕಾ( ಕನ್ನಡ ಭಾಷಾಂತರ ) ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿ ಡಾ ವಿಷ್ಣು ಭಟ್ ಅವರು ಶೈಕ್ಷಣಿಕವಾಗಿ ಗಳಿಸಿದ ಪದವಿಗಳೇ ಸಾಕಷ್ಟಿರುವುದರಿಂದ ಅವರು ಕೇವಲ ವಿಷ್ಣುವಲ್ಲ ಮಹಾವಿಷ್ಣು, ಅವರೊಬ್ಬ ಅದ್ಭುತ ಶಕ್ತಿ ಎಂದು ಹೇಳಿ ಅವರ ಕೃತಿಯನ್ನು ಪದ್ಯದ ರೂಪದಲ್ಲಿ ವಿವರಣೆ ನೀಡಿದರು. ಪುಸ್ತಕ ಸಣ್ಣದು ಆದರೆ ಅದರ ಒಳಗಿರುವ ಮೌಲ್ಯ ಬಹಳ ದೊಡ್ಡದು ಎಂದರು.
ಬ್ರಷ್ಟಾಚಾರದ ಬಗ್ಗೆಯೂ ಉಲ್ಲೇಖ:
ವಿಶ್ರಾಂತ ಪ್ರಾಂಶುಪಾಲ ಪ್ರೊ| ಡಾ. ಎನ್. ಪರಮೇಶ್ವರ ಭಟ್ ಅವರು ಅದ್ವೇತ ಮತ್ತು ಇತರ ಹತ್ತು ಲೇಖನಗಳು ಪುಸ್ತಕವನ್ನು ಬಿಡುಗಡೆಗೊಳಿಸಿ ಮಾತನಾಡಿ ಪುಸ್ತಕದ ಒಳಗಿರುವ ವಿಷಯ ಬಹಳ ಗಹನವಾಗಿದೆ. ಡಾ. ವಿಷ್ಣು ಭಟ್ ಅವರು ಜೀವನದಲ್ಲಿ ಬಹಳ ಕಷ್ಟಪಟ್ಟವರು ಅದನ್ನು ಅವರು ಪುಸ್ತಕದಲ್ಲಿ ಎಲ್ಲೂ ತೋರಿಸದಿದ್ದರೂ ಅವರು ಅನುಭವಿಸಿದ ಕಷ್ಟ ಗೊತ್ತಾಗುತ್ತಾದೆ. ಇವರೊಬ್ಬ ಗಾಂಧೀಜಿಯಂತೆ ಎಂದ ಅವರು ಯುವ ಜನಾಂಗ ಬೇರೆ ದಾರಿಹಿಡಿದಾಗ, ಬ್ರಷ್ಟಾಚಾರದ ಬಗ್ಗೆ ಉಲ್ಲೇಖದಲ್ಲಿ ದಕ್ಷಿಣ ಕೊಟ್ಟರೆ ಕೆಲಸ ಆಗುತ್ತದೆ. ಇದು ಪ್ರತಿಯೊಬ್ಬರಿಗೂ ಅನುಭವ ಎಂದು ತಿಳಿಸಿದ್ದಾರೆ ಎಂದರು.
ಚಿಂತನೆಗಳನ್ನು ಸಮಾಜದೊಂದಿಗೆ ಹಂಚಿಕೊಳ್ಳಬೇಕು:
ಪುಸ್ತಕದ ಅನುವಾದಕರು ಮತ್ತು ಕೃತಿಕಾರರಾಗಿರುವ ಡಾ ವಿಷ್ಣು ಭಟ್ ಅವರು ಮಾತನಾಡಿ ಮಾಂಡೂಕ್ಯೋಪನಿಷದ್ ಅಲೌಕಿಕ ಪುಸ್ತಕ. ಶಂಕರಾಚಾರ್ಯರ ಗುರುವಿನ ಗುರು ಗೌಡಪಾದೀಯಕಾರಿಕಾರು. ಓಂ ಕಾರದ ಮಹತ್ವ ಮಾಂಡೂಕ್ಯೋಪನಿಷದ್‍ನಿಂದ ತಿಳಿಯಬಹುದು. ಅದೇ ರೀತಿ ಅನೇಕ ಸಂದರ್ಭದಲ್ಲಿ ಗುರು ಹಿರಿಯರ ಮಾರ್ಗದರ್ಶನ ಮತ್ತು ಅನುಭವಗಳು ದಾರಿ ದೀಪವಾಗಬಲ್ಲದು ಎಂದು ಚಿಂತನೆಗಳನ್ನು ಸಮಾಜದೊಂದಿಗೆ ಹಂಚಿಕೊಳ್ಳಲು ಅದ್ವೈತ ಮತ್ತು ಹತ್ತು ಲೇಖನಗಳನ್ನು ಬರೆದಿದ್ದೇನೆ ಎಂದರು.
ಸಂಸ್ಕೃತದ ಅನೇಕ ಕೃತಿಗಳು ಕನ್ನಡಕ್ಕೆ ಅನುವಾದದ ಅಶಯ:
ಮುಖ್ಯ ಅತಿಥಿಯಾಗಿ ಭಾಗವಹಿಸಿದ ಕನ್ನಡ ಸಾಹಿತ್ಯ ಪರಿಷತ್ ಪುತ್ತೂರು ತಾಲೂಕು ಅಧ್ಯಕ್ಷ ಪುತ್ತೂರು ಉಮೇಶ್ ನಾಯಕ್ ಅವರು ಮಾತನಾಡಿ ರೋಟರಿ ಇತಿಹಾಸದಲ್ಲಿ ಕನ್ನಡ ಪುಸ್ತಕ ಬಿಡುಗಡೆ ಹೊಸ ಚಿಂತನೆಯನ್ನು ಬೆಳೆಸಿದೆ. ಇವತ್ತು ಸಂಸ್ಕೃತದ ಅನೇಕ ಕೃತಿಗಳನ್ನು ಕನ್ನಡಕ್ಕೆ ಅನುವಾದ ಮಾಡುವ ಆಶಯವನ್ನು ಸಾಹಿತ್ಯ ಪರಿಷತ್ ಕೂಡಾ ಚಿಂತನೆ ಇಟ್ಟಿದೆ ಎಂದರು. ಜಿಲ್ಲಾ ಅಸಿಸ್ಟೆಂಟ್ ಗವರ್ನರ್ ಸೂರ್ಯನಾಥ ಆಳ್ವ ಅವರು ಮಾತನಾಡಿ ದೇವಸ್ಥಾನದಲ್ಲಿ ಹೋಗಿ ಶಾಂತವಾಗಿ ಕೂತೆಗೆ ಪುಣ್ಯ ಹೇಗೆ ಸಿಗುತ್ತದೆಯೋ ಅದೇ ರೀತಿ ವಿದ್ವಾಂಸರೊಂದಿಗೆ ಕೂತು ಅಷ್ಟು ಜ್ಞಾನ ತುಂಬಿದಂತಾಗಿದೆ ಎಂದರು. ಮುರಳಿಶ್ಯಾಮ್ ಮತ್ತು ಶಶಿಧರ್ ಕಿನ್ನಿಮಜಲು ಅವರು ಕೃತಿಕಾರ ಮತ್ತು ಪುಸ್ತಕ ಬಿಡುಗಡೆಯ ಅತಿಥಿಗಳನ್ನು ಪರಿಚಯಿಸಿದರು. ಡಾ. ಶ್ಯಾಮಪ್ರಸಾದ್ ಕಾಲರಿಂಗ್ ಮಾಡಿದರು. ನ್ಯಾಯವಾದಿ ದಿವಾಕರ ನಿಡ್ವಣ್ಣಾಯ ಅವರು ಅತಿಥಿಗಳನ್ನು ಗೌರವಿಸಿದರು. ಭಾರವಿ ಭಟ್ ಪ್ರಾರ್ಥಿಸಿದರು. ರೋಟರಿ ಕ್ಲಬ್ ಪುತ್ತೂರು ಈಸ್ಟ್ ಇದರ ಕಾರ್ಯದರ್ಶಿ ವಸಂತ ಜಾಲಾಡಿ ಅವರು ಮುಂದಿನ ಕಾರ್ಯಕ್ರಮದ ಪ್ರಕಟಣೆಗಳ ಮಾಹಿತಿ ನೀಡಿ ವಂದಿಸಿದರು. ಕರ್ನಲ್ ಜಿ ಡಿ ಭಟ್, ಬೂಡಿಯಾರು ರಾಧಾಕೃಷ್ಣ ರೈ, ಹಿರಿಯರಾದ ಕೆ ಆರ್ ಶೆಣೈ, ಪ್ರೊ. ಹರಿನಾರಾಯಣ ಮಾಡಾವು, ರಾಜೇಶ್ ಪವರ್ ಪ್ರೆಸ್‍ನ ಎಂ.ಎಸ್ ರಘುನಾಥ ರಾವ್, ಡಾ.ಹೆಚ್.ಜಿ ಶ್ರೀಧರ್, ಡಾ. ಶ್ರೀಶಕುಮಾರ್, ಮಧುರಕಾನ ಗಣಪತಿ ಭಟ್, ಮಲ್ಲಿಕಾ ಜೆ ರೈ, ಜಯಂತ ನಡುಬೈಲು, ಅಬ್ಬಾಸ್ ಮುರ, ಉದಯ ನಾಯಕ್, ಉದ್ಯಮಿ ವಿಶ್ವನಾಥ ನಾಯಕ್, ಡಾ ವಿಜಯಸರಸ್ವತಿ, ಕಜೆ ಗೋವಿಂದಪ್ರಸಾದ್ ಸಹಿತ ಕೃತಿಕಾರ ಡಾ.ವಿಷ್ಣು ಭಟ್ ಅವರ ಮನೆ ಮಂದಿ ಸಭೆಯಲ್ಲಿ ಉಪಸ್ಥಿತರಿದ್ದರು.