ಪುತ್ತೂರು: ಸಂತ ಫಿಲೋಮಿನಾ ಕಾಲೇಜು (ಸ್ವಾಯತ್ತ) ಇದರ, ಗಣಿತಶಾಸ್ತ್ರ ವಿಭಾಗವು (ಯುಜಿ ಮತ್ತು ಪಿಜಿ) ಗಣಿತ ಹಾಗೂ ಕೃತಕ ಬುದ್ಧಿಮತ್ತೆ ನಡುವಿನ ಅಂತರ ಸಂಬಂಧವನ್ನು ಅರ್ಥೈಸುವ “ಫ್ರಮ್ ಆಲ್ಜಿಬ್ರ ಟು ಇಂಟೆಲಿಜೆನ್ಸ್: ದ ಮ್ಯಾಥಮೆಟಿಕಲ್ ಹಾರ್ಟ್ ಆಫ್ ಎಐ”- ಅತಿಥಿ ಉಪನ್ಯಾಸವನ್ನು ವಿದ್ಯಾರ್ಥಿಗಳಿಗೆ ಆಯೋಜಿಸಿತು.
ಕಾರ್ಯಕ್ರಮಕ್ಕೆ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ಡಾ ರಮಾನಂದ ಎಚ್ ಎಸ್, ಪ್ರಾಧ್ಯಾಪಕರು, ಗಣಿತಶಾಸ್ತ್ರ ವಿಭಾಗ, ಸಂತ ಜೋಸೆಫ್ ಇಂಜಿನಿಯರಿಂಗ್ ಕಾಲೇಜು ವಾಮಂಜೂರು, ಮಂಗಳೂರು ಇವರು, ಹೇಗೆ ಕೃತಕ ಬುದ್ಧಿಮತ್ತೆ ನಮ್ಮ ದೈನಂದಿನ ಜೀವನದಲ್ಲಿ ತಿಳಿದೋ ತಿಳಿಯದೆಯೋ ಒಳಗೊಂಡಿದೆ ಎಂಬುದನ್ನು ವಿವರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಕಾಲೀಜಿನ ಪ್ರಾಂಶುಪಾಲರಾದ ವಂದನೀಯ ಡಾ. ಆಂಟೋನಿ ಪ್ರಕಾಶ್ ಮೊಂತೆರೋರವರು, ಕೃತಕಬುದ್ಧಿಮತ್ತೆಯ ಪ್ರಾಮುಖ್ಯತೆಯನ್ನು ವಿವರಿಸಿದರು ಹಾಗೂ ಕೃತಕಬುದ್ಧಿಮತ್ತೆಯನ್ನು ಅರ್ಥೈಸಲು ಹೇಗೆ ಗಣಿತದ ಜ್ಞಾನ ಬಹಳ ಅಗತ್ಯವೆಂದರು.
ಕಾರ್ಯಕ್ರಮದಲ್ಲಿ ಗಣಿತಶಾಸ್ತ್ರ ಸ್ನಾತಕೋತರ ವಿಭಾಗದ ಕೈಪಿಡಿಯನ್ನು ಬಿಡುಗಡೆ ಮಾಡಲಾಯಿತು. ಸ್ನಾತಕೋತರ ವಿಭಾಗದ ಕೊ- ಆರ್ಡಿನೇಟರ್ ಪ್ರೊ. ಗಣೇಶ್ ಭಟ್ ರವರು ವಿದ್ಯಾರ್ಥಿಗಳ ಸಾಧನೆಯ ಕುರಿತು ತಿಳಿಸಿದರು.
ದ್ವಿತೀಯ ವರ್ಷದ ಗಣಿತಶಾಸ್ತ್ರ ಸ್ನಾತಕೋತರ ವಿಭಾಗದ ವಿದ್ಯಾರ್ಥಿನಿಯಾದ ನವ್ಯಶ್ರೀ ಕೆ- ಸೆಟ್ ಪರೀಕ್ಷೆಯಲ್ಲಿ ಉತ್ತೀರ್ಣರಾದಕ್ಕಾಗಿ ಗೌರವಿಸಲಾಯಿತು.
ಸಹಾಯಕ ಪ್ರಾಧ್ಯಾಪಕರುಗಳಾದ ಶ್ರೀಮತಿ ವಾರಿಜಾ ಎಂ, ರಕ್ಷಿತಾ ಶೆಟ್ಟಿ, ದೀಪಿಕಾ, ಅಂಜು ಜೋಸೆಫ್ ಉಪಸ್ಥಿತರಿದ್ದರು.
ಕಾರ್ಯಕ್ರಮವು ಮಾನಸ ಮತ್ತು ತಂಡದವರ ಪ್ರಾರ್ಥನೆಯೊಂದಿಗೆ ಆರಂಭವಾಯಿತು. ತನುಜಾ ಎನ್ ಪಿ, ಗಣಿತಶಾಸ್ತ್ರ ವಿಭಾಗ ಮುಖ್ಯಸ್ಥರು (ಯುಜಿ) ಸ್ವಾಗತಿಸಿದರು. ಪ್ರತೀಕ್ಷಾ, ಸಹಾಯಕ ಪ್ರಾಧ್ಯಾಪಕರು, ಗಣಿತಶಾಸ್ತ್ರ ವಿಭಾಗ (ಪಿಜಿ) ವಂದಿಸಿದರು. ದ್ವಿತೀಯ ವರ್ಷದ ಗಣಿತಶಾಸ್ತ್ರ ಸ್ನಾತಕೋತರ ವಿಭಾಗದ ವಿದ್ಯಾರ್ಥಿನಿ ನೇಹಾ ಕಾರ್ಯಕ್ರಮ ನಿರೂಪಿಸಿದರು.