ಮೊನ್ನೆ ಪಂಜಾಬಿನಲ್ಲಿ ಖಲಿಸ್ತಾನಿ ಪರ ನಾಯಕ ಅಮೃತ ಪಾಲ್ ಸಿಂಗ್‌ರನ್ನು ಬಂಧಿಸಿರುವುದನ್ನು ವಿರೋಧಿಸಿ ಖಲಿಸ್ತಾನಿ ಪರ ವ್ಯಕ್ತಿಯೊಬ್ಬ ಲಂಡನ್ನಿನ ಇಂಡಿಯನ್ ಹೌಸ್ ಹೊರಗಡೆ ಇದ್ದ ಭಾರತ ದೇಶದ ಬಾವುಟ ಏರಿಸಿದ್ದನ್ನು ಬೇಗನೆ ಇಳಿಸಿ ಇನ್ನೂ ದೊಡ್ಡದಾದ ಭಾರತದ ಧ್ವಜವನ್ನು ಹಾರಿಸಲಾಯಿತು.

ಲಂಡನ್ನಿನ ಆಲ್ಡ್‌ವಿಕ್ ರಸ್ತೆಯಲ್ಲಿದೆ ಇಂಡಿಯಾ ಹೌಸ್‌. ಬ್ರಿಟಿಷರ ಕಾಲದ ಇದರಲ್ಲಿ ಭಾರತದ ರಾಯಭಾರ ಕಚೇರಿ ಇದೆ. ಪಂಜಾಬಿಗಳು ಸೇನೆಯಲ್ಲಿ ಮತ್ತು ಭಾರತದ ಪರ ವೀರ ಸೇನಾನಿಗಳು. ಆದರೆ ಖಲಿಸ್ತಾನಿಗಳು ತಮ್ಮದೇ ನಾಡಿಗಾಗಿ ಹೋರಾಡುವವರು.

ಲಂಡನ್ನಿನ ಇಂಡಿಯಾ ಹೌಸ್ ದೇಶ ಬಾವುಟ ಇಳಿಸಿದ ಖಲಿಸ್ತಾನಿಗಳು ಜಾಲ ತಾಣಗಳಲ್ಲಿ ಬರೇ ಖಂಡನೆ ಕಂಡರು. ರಾಯಭಾರ ಕಚೇರಿಯ ಅಧಿಕಾರಿಗಳು ಆ ಧ್ವಜ ಬಿಸಾಕಿ ಭಾರೀ ರಾಷ್ಟ್ರ ಧ್ವಜ ಹಾರಿಸಿದ್ದಕ್ಕೆ ನೆಟ್ಟೆಲ್ಲ ಜಂಡಾ ಊಂಚಾ ರಹೇ ಹಮಾರಾ ಸಂತೋಷ ಹರಿದಾಡಿದೆ.