ಮಂಗಳೂರು : ಮೈಸೂರಿನಲ್ಲಿ ಕೇಂದ್ರ ಕಛೇರಿ ಹೊಂದಿರುವ ಚುಟುಕು ಸಾಹಿತ್ಯ ಪರಿಷತ್ ನ ಮೂಲ್ಕಿ ತಾಲೂಕು ಅಧ್ಯಕ್ಷರನ್ನಾಗಿ ಪತ್ರಕರ್ತ, ರಂಗಭೂಮಿ ಕಲಾವಿದ ನರೇಂದ್ರ ಕೆರೆಕಾಡು ಅವರನ್ನು ನೇಮಕ ಮಾಡಿ ದ.ಕ ಚುಸಾಪ ಜಿಲ್ಲಾಧ್ಯಕ್ಷರಾದ ಹರೀಶ್ ಸುಲಾಯ ಒಡ್ಡಂಬೆಟ್ಟು ಆದೇಶ ಹೊರಡಿಸಿದ್ದಾರೆ. 

ಬಹುಮುಖ ಪ್ರತಿಭೆಯ ನರೇಂದ್ರ ಕೆರೆಕಾಡು ಅವರು ಮೂಲ್ಕಿ ಬಳಿಯ ಕೆರೆಕಾಡು ನಿವಾಸಿ, ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವೀದರ, ವೃತ್ತಿಯಲ್ಲಿ ಪತ್ರಿಕಾ ವರದಿಗಾರ, ನಮನ ಮೂಲ್ಕಿ ಚಾನೆಲ್ ಹಾಗೂ ಜಾಹಿರಾತು ಸಂಸ್ಥೆಯ ಪ್ರವರ್ತಕ, ಪ್ರವೃತ್ತಿಯಲ್ಲಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಸದಸ್ಯ, ಕಿನ್ನಿಗೋಳಿ ವಿಜಯಾ ಕಲಾವಿದರ ತಂಡದ ಸಕ್ರಿಯ ರಂಗಭೂಮಿ ಕಲಾವಿದ, ಸಾಂಸ್ಕೃತಿಕ ರಾಯಭಾರಿ, ಸಾಹಿತಿ, ಸಂಘಟಕ, ಸಮಾಜ ಸೇವಕ, ವಾಗ್ಮಿ, ಸಾಮಾಜಿಕ ಚಿಂತಕ, ಕಾರ್ಯಕ್ರಮ ನಿರೂಪಕ, ಹೊಸತನದ ಪರಿಕಲ್ಪನೆಯ ಸಹೃದಯಿ, ಯುವವಾಹಿನಿ ಕೇಂದ್ರ ಸಮಿತಿಯ ವಿಶುಕುಮಾರ್ ಪ್ರಶಸ್ತಿ ಸಮಿತಿಯ ಮಾಜಿ ಸಂಚಾಲಕ, ಮೂಲ್ಕಿ ಯುವವಾಹಿನಿ, ಮೂಲ್ಕಿ ವಲಯ ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷ,  ಜಿಲ್ಲಾ ಪತ್ರಕರ್ತರ ಸಂಘದ ಕಾರ್ಯಕಾರಿಣಿಯ ಮಾಜಿ ಸದಸ್ಯ, ಕಿಲ್ಪಾಡಿ ಗ್ರಾಮ ಪಂಚಾಯತ್‌ನ ಮಾಜಿ ಉಪಾಧ್ಯಕ್ಷ, ಹಲವಾರು ಸಾರ್ವಜನಿಕ ಕಾರ್ಯಕ್ರಮ, ಧಾರ್ಮಿಕ ಕ್ಷೇತ್ರ, ಸೇವಾ ಸಂಸ್ಥೆಯಲ್ಲಿ  ಮಾಧ್ಯಮ ನಿರ್ವಹಣೆಯ ಅನುಭವ, ಕೆರೆಕಾಡು, ಹಳೆಯಂಗಡಿ, ಕಟೀಲು, ಕಿನ್ನಿಗೋಳಿ, ಮೂಲ್ಕಿಯ ವಿವಿಧ ಸಂಘ ಸಂಸ್ಥೆಗಳ ಒಡನಾಡಿ, ಸಾಹಿತ್ಯ ಸಮ್ಮೇಳನಗಳಲ್ಲಿ ಗೋಷ್ಠಿಯಲ್ಲಿ ಭಾಗವಹಿಸುವಿಕೆ, ನಿರೂಪಣೆಯ  ಸಮರ್ಥ ನಿರ್ವಹಣೆ, ಹತ್ತಾರು ಬಿರದುಗಳು, ಪ್ರಶಸ್ತಿಗಳನ್ನು ಪಡೆದಿದ್ದಾರೆ.