ಮುಂಬಯಿ, ಜ.18: ಬೃಹನ್ಮುಂಬಯಿ ಅಲ್ಲಿನ ಪ್ರತಿಷ್ಠಿತ ದ ಪೀಪಲ್'ಸ್ ಆರ್ಟ್ ಸೆಂಟರ್ (ರಿ.) ಸಂಸ್ಥೆಯು 1058ನೇ ಕಾರ್ಯಕ್ರಮವನ್ನಾಗಿಸಿ ಕಳೆದ ಬುಧವಾರ  ಸಂಜೆ ಜುಹೂ ಹರೇಕೃಷ್ಣ ಇಲ್ಲಿನ ಭಕ್ತಿ ಕಲಾ ಕ್ಷೇತ್ರದಲ್ಲಿ ರಾಷ್ಟ್ರದ ಸುಪ್ರಸಿದ್ಧ ಸಂಗೀತಕಾರ ಡಾ| ಕೆ.ಜೆ ಯೇಸುದಾಸ್ 84ನೇ ಜನ್ಮೋತ್ಸವವನ್ನಾಗಿಸಿ ಏಕ್ ಸಂಗೀತ್ ಸಫರ್ ಕಾರ್ಯಕ್ರಮವನ್ನು ಆಯೋಜಿಸಿತ್ತು.

ಸಮಾರಂಭದಲ್ಲಿ ಬಂಟ್ಸ್ ಸಂಘ ಮುಂಬಯಿ ಇದರ ಗೌ| ಪ್ರ| ಕಾರ್ಯದರ್ಶಿ, ಕರ್ನಾಟಕ ಜಾನಪದ ಪರಿಷತ್ತು ಮಹಾರಾಷ್ಟ್ರ ಘಟಕದ ಅಧ್ಯಕ್ಷ ಡಾ| ಆರ್.ಕೆ ಶೆಟ್ಟಿ ಅತಿಥಿü ಅಭ್ಯಾಗತರಾಗಿದ್ದು ಡಾ| ಯೇಸುದಾಸ್ ಅತ್ಯುತ್ತಮ ಗಾಯಕ ಪ್ರಶಸ್ತಿಯನ್ನು ಹಿನ್ನೆಲೆ ಗಾಯಕ ಶೈಲೇಂದ್ರ ಸಿಂಗ್ ಅವರಿಗೆ ಪ್ರದಾನಿಸಿ ಗೌರವಿಸಿದರು. 

ನಾಡಿನ ಸುಪ್ರಸಿದ್ಧ ಗಾಯಕರಾದ ಹೇಮಲತಾ, ಉದಿತ್, ನಾರಾಯಣ್ ಝಾ, ಸುರೇಶ್ ವಾಡ್ಕರ್, ಅನುಪ್ ಜಲೋಟ, ಶಬ್ಬೀರ್ ಕುಮಾರ್, ಶೈಲೇಂದ್ರ ಸಿಂಗ್ ಮತ್ತು ಬಾಬುಲ್ ಸುಪ್ರಿಯೊ ಅವರು ಸಂಗೀತ ಕ್ಷೇತ್ರಕ್ಕೆ ನೀಡಿದ ಕೊಡುಗೆಗಾಗಿ `ಸಪ್ತಸ್ವರ ಸಾಮ್ರಾಟ್ ಡಾ| ಕೆ.ಜೆ ಯೇಸುದಾಸ್ ಸಾಧನಾ ಪ್ರಶಸ್ತಿ'ಯನ್ನು ಪ್ರದಾನಿಸಿ ಗೌರವಿಸಲಾಯಿತು. 

ಪೀಪಲ್'ಸ್ ಆರ್ಟ್ ಸೆಂಟರ್‍ನ ಮುಖ್ಯಸ್ಥ ಗೋಪಾಲಕೃಷ್ಣ ಪಿಳ್ಳೆ ಸ್ವಾಗತಿಸಿದರು. ನಿಹಾರಿಖಾ ಮತ್ತು ಆಶಿಶ್ ದಬೆ ಪುರಸ್ಕೃತರನ್ನು ಪರಿಚಯಿಸಿ, ಕಾರ್ಯಕ್ರಮ ನಿರೂಪಿಸಿ ವಂದಿಸಿದರು.  

ಜನ್ಮೋತ್ಸವ ಸಂಭ್ರಮದ ಅಂಗವಾಗಿ ಸಂಗೀತಗಾರರು ಯೇಸುದಾಸ್ ಅವರ ಜನಪ್ರಿಯ ಹಿಂದಿ ಹಾಡುಗಳಾದ ಗೋರಿ ತೇರಾ ಗಾಂ ಬಡಪ್ಯಾರಾ (ಚಿಚ್ಚೋರ್), ದಿಲ್ ಕೆ ತುಕ್ಡೆ ತುಕ್ಡೆ ಕರ್ಕೆ (ದಾದ) ಮತ್ತು ಸುರ್ಮೈ ಆಂಖಿಯೋನ್ ಮೇ (ಸದ್ಮಾ) ಇತರ ಹಾಡುಗಳನ್ನು ಪ್ರಸ್ತುತ ಪಡಿಸಿ ನೆರೆದ ಸಂಗೀತಪ್ರಿಯರ ಮನಮುದಗೊಳಿಸಿದರು.