ವರದಿ ರಾಯಿ ರಾಜಕುಮಾರ ಮೂಡುಬಿದಿರೆ
ಮುಲ್ಕಿ: ಕೇಂದ್ರ ಸರ್ಕಾರದ ಸ್ವಚ್ಛ ಭಾರತ್ ಮಿಷನ್ ಯೋಜನೆಯಡಿ ಮೂಲ್ಕಿ ನಗರ ಪಂಚಾಯತ್ ನಲ್ಲಿ ರೂಪಾಯಿ 41.5 ಲಕ್ಷ ವೆಚ್ಚದಲ್ಲಿ ನಿರ್ಮಾಣವಾಗಿರುವ ಡಂಪಿಂಗ್ ಯಾರ್ಡ್ ಹಾಗೂ ಮೂಲ್ಕಿ ಬಸ್ ನಿಲ್ದಾಣದ ಬಳಿ ರೂಪಾಯಿ 8.5 ಲಕ್ಷ ವೆಚ್ಚದಲ್ಲಿ ನಿರ್ಮಾಣವಾಗಿರುವ ಸುಸಜ್ಜಿತ ಶೌಚಾಲಯವನ್ನು ಸಂಸದ ಬ್ರಿಜೇಶ್ ಚೌಟ ಹಾಗೂ ಶಾಸಕ ಉಮಾನಾಥ ಕೋಟ್ಯಾನ್ ಜೂನ್ 17 ರಂದು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮುಲ್ಕಿ ನಗರ ಪಂಚಾಯತದ ಸದಸ್ಯರು, ತಹಶೀಲ್ದಾರ್, ಸಿಬ್ಬಂದಿಗಳು, ಇತರ ಮುಖಂಡರುಗಳು ಹಾಜರಿದ್ದರು.