ಮೂಡುಬಿದಿರೆಯಲ್ಲಿ ಶಾಖೆ ಪ್ರಾರಂಭವಾದ ದಿನದಿಂದಲೂ ಪ್ರಿಯದರ್ಶಿನಿ ಸೊಸೈಟಿಯನ್ನು ಪ್ರೋತ್ಸಾಹಿಸಿ ವ್ಯವಹಾರವನ್ನು ಮಾಡುತ್ತಿರುವ ಎಲ್ಲಾ ಗ್ರಾಹಕರಿಗೆ ಧನ್ಯವಾದ ಸಮರ್ಪಿಸುವ ದಿನ ಇಂದು. ಸೊಸೈಟಿಯ ಎಲ್ಲಾ ಬೆಳೆವಣಿಗೆಗೆ ಸಹಕಾರ ನೀಡಿದ ಎಲ್ಲಾ ಗ್ರಾಹಕರಿಗೆ ಕೃತಜ್ಞತೆ ಅರ್ಪಿಸುತ್ತಾ ಮುಂದಿನ ದಿನಗಳಲ್ಲಿ ಇದೇ ರೀತಿ ಸಹಕಾರವನ್ನು ಮುಂದುವರೆಸುವಂತೆ ಪ್ರಿಯದರ್ಶಿನಿ ಕೋ- ಆಪರೇಟಿವ್ ಸೊಸೈಟಿಯ ಅಧ್ಯಕ್ಷರಾದ ವಸಂತ್ ಬೆರ್ನಾಡ್ ನುಡಿದರು.

ಅವರು ಪ್ರಿಯದರ್ಶಿನಿ ಕೋ-ಆಪರೇಟಿವ್ ಸೊಸೈಟಿ ಮೂಡಬಿದ್ರೆ ಶಾಖೆಯಲ್ಲಿ ನಡೆದ ಗ್ರಾಹಕರ ದಿನಾಚರಣೆಯನ್ನು ಉದ್ದೇಶಿಸಿ ಮಾತನಾಡಿದರು. ಮುಖ್ಯ ಅತಿಥಿಗಳಾಗಿ ರೂಪ ಸಂತೋಷ್ ಶೆಟ್ಟಿ ಮೂಡಬಿದ್ರೆ ಪುರಸಭೆ ಸದಸ್ಯರು, ರೆಕ್ಸಾನ್ ಪಿಂಟೋ ನಿರ್ದೇಶಕರು, ಕಾರಿಂಜೆ ಸರ್ವೀಸ್ ಕೋ - ಆಪರೇಟಿವ್ ಸೊಸೈಟಿ, ಕಟ್ಟಡ ಮಾಲಿಕರಾದ ದೇವದಾಸ್ ಭಟ್ ರವರು ಶುಭಹಾರೈಸಿದರು. ಶಾಖ ಪ್ರಬಂಧಕರಾದ ಅಭಿಷ್ಠಾ ಜೈನ್ ಸ್ವಾಗತಿಸಿ ಮುಖ್ಯಕಾರ್ಯನಿರ್ವಹಣಾಧಿಕಾರಿ ಸುದರ್ಶನ್ ವಂದಿಸಿದರು. ಪ್ರಧಾನ ಕಛೇರಿಯ ಸಾಲ ವಿಭಾಗದ ಪ್ರಬಂಧಕಿ ಅಕ್ಷತಾ ಶೆಟ್ಟಿ ಕಾರ್ಯಕ್ರಮವನ್ನು ನಿರೂಪಿಸಿದರು. ಸಿಬ್ಬಂದಿಗಳಾದ ವಿನಿತಾ ವಿಲ್ಮಾ ಕೈರನ್ನ, ಪ್ರಣೀತ್, ನಂದಿತಾ ವಿ. ಪದ್ಮಶಾಲಿ, ಪ್ರಕಾಶ್ ಚಂದ್ರ ಶೆಟ್ಟಿಗಾರ್ ಸಹಕರಿಸಿದರು.