ಮೂಡುಬಿದಿರೆ: ಮಂಗಳೂರು ವಿಶ್ವವಿದ್ಯಾಲಯ ಮಟ್ಟದ ಅಂತರ ಕಾಲೇಜು ಕ್ರಾಸ್ ಕಂಟ್ರಿ ಚಾಂಪಿಯನ್‍ಶಿಪ್ ಅನ್ನು ಆಳ್ವಾಸ್ (ಸ್ವಾಯತ್ತ) ಕಾಲೇಜು ತಂಡವು ಮುಡಿಗೇರಿಸಿಕೊಂಡಿದೆ. 

ಆಳ್ವಾಸ್(ಸ್ವಾಯತ್ತ) ಕಾಲೇಜಿನ ಪುರುಷರ ತಂಡವು ಸತತ 25ನೇ ಬಾರಿಗೆ ಹಾಗೂ ಮಹಿಳೆಯರ ತಂಡವು 20ನೇ ಬಾರಿಗೆ ಸಮಗ್ರ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು. 

ಸುಬ್ರಹ್ಮಣ್ಯದ ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಕಾಲೇಜಿನಲ್ಲಿ ಅಕ್ಟೋಬರ್ 29 ಮತ್ತು 30ರಂದು ನಡೆದ ಮಂಗಳೂರು ವಿಶ್ವವಿದ್ಯಾಲಯ ಮಟ್ಟದ ಅಂತರ ಕಾಲೇಜು ಕ್ರಾಸ್ ಕಂಟ್ರಿ ಪುರುಷರ ವಿಭಾಗದಲ್ಲಿ ಆಳ್ವಾಸ್‍ನ ಚಂದನ್ ಯಾದವ್, ಗಗನ್, ರೋಹಿತ್ ಝಾ, ನವರತನ್, ಅಮಾನ್ ಕುಮಾರ್ ಮತ್ತು ಸಾಹಿಲ್ ಕುಂಬೋಜ್ ಮೊದಲ ಆರು ಸ್ಥಾನಗಳನ್ನು ಪಡೆದರು. ಮಹಿಳೆಯರ ವಿಭಾಗದಲ್ಲಿ ಆಳ್ವಾಸ್ (ಸ್ವಾಯತ್ತ) ಕಾಲೇಜಿನ ಬಸಂತಿ ಕುಮಾರಿ, ಜ್ಯೋತಿ, ಖುಷ್ಬೂ ಪಟೇಲ್, ಅನೇಹಲ್ ಜೈಸ್ವಾಲ್, ದಿಶಾ ಬೋರ್ಸೆ ಮತ್ತು ರೂಪಾಶ್ರೀ ಮೊದಲ ಆರು ಸ್ಥಾನಗಳನ್ನು ಪಡೆದರು. 

ಪುರುಷರ ವಿಭಾಗದಲ್ಲಿ 10 ಅಂಕಗಳನ್ನು ಪಡೆದು ಆಳ್ವಾಸ್ ಕಾಲೇಜು ಪ್ರಥಮ ಸ್ಥಾನ ಪಡೆದರೆ, 34 ಅಂಕಗಳನ್ನು ಪಡೆದ  ಉಜಿರೆಯ ಎಸ್‍ಡಿಎಮ್ ಕಾಲೇಜು ದ್ವಿತೀಯ ಸ್ಥಾನ ಹಾಗೂ ಸುಬ್ರಮಣ್ಯದ ಕೆಎಸ್‍ಎಸ್ ಕಾಲೇಜು 68 ಅಂಕ ಗಳಿಸಿ ತೃತೀಯ ಸ್ಥಾನ ಪಡೆಯಿತು. 

ಮಹಿಳೆಯರ ವಿಭಾಗದಲ್ಲಿ 10 ಅಂಕಗಳನ್ನು ಪಡೆದು ಆಳ್ವಾಸ್ ಕಾಲೇಜು ಪ್ರಥಮ ಸ್ಥಾನ ಪಡೆದರೆ, 50 ಅಂಕಗಳನ್ನು ಪಡೆದ ಸುಬ್ರಮಣ್ಯದ ಕೆಎಸ್‍ಎಸ್ ಕಾಲೇಜು ದ್ವಿತೀಯ ಸ್ಥಾನ ಹಾಗೂ ಉಜಿರೆಯ ಎಸ್‍ಡಿಎಮ್ ಕಾಲೇಜು 51 ಅಂಕ ಗಳಿಸಿ ತೃತೀಯ ಸ್ಥಾನ ಪಡೆಯಿತು. 

ವಿಜೇತ ಕ್ರೀಡಾಪಟುಗಳನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ. ಮೋಹನ ಆಳ್ವ ಅಭಿನಂದಿಸಿದ್ದಾರೆ.