ಮೂಡುಬಿದಿರೆ: ಸ್ಥಳೀಯ ರೋಟರಿ ಕೇಂದ್ರೀಯ ಶಾಲೆಯಲ್ಲಿ ಆಗಸ್ಟ್ 07ರಂದು ವನಮಹೋತ್ಸವ ಮತ್ತು ಆಟಿ ಆಚರಣೆಗಳು ನಡೆದವು. ಕಾರ್ಯಕ್ರಮವನ್ನು ಪ್ರಗತಿಪರ ಕೃಷಿಕ ಡಾ. ನಾಗರಾಜ ಶೆಟ್ಟಿ ಅಂಬೂರಿ ದೀಪ ಬೆಳಗಿ, ಅಡಿಕೆ ತೆನೆಯನ್ನು ಅರಳಿಸಿ ಉದ್ಘಾಟಿಸಿದರು. 

ಅವರು ತಮ್ಮ ಉದ್ಘಾಟನಾ ಭಾಷಣದಲ್ಲಿ ಪ್ರಕೃತಿಯನ್ನು ಉಳಿಸಿ ಬೆಳೆಸುವ ಕಾರ್ಯ ಮಕ್ಕಳ ದೃಷ್ಟಿಯಿಂದ ಬಹಳ ಉಪಯುಕ್ತವಾದುದು. ಪರಿಸರ ಉಳಿಸುವ ನಮ್ಮ ಪೂರ್ವಜರು ನಮಗೆ ಕಲಿಸಿದ ಪಾಠವನ್ನು ಉತ್ತಮ ರೀತಿಯ ಹಣ್ಣು ಹಂಪಲು ತಳಿಯ ಗಿಡವನ್ನು ಬೆಳೆಸುವ ಮೂಲಕ ಮಕ್ಕಳಿಗೂ ನಾವು ತಿಳಿಸಿ, ಕಲಿಸಬೇಕು ಎಂದರು. ವಿವಿಧ ತಳಿಯ ಗಿಡಗಳನ್ನು ನೆಟ್ಟು ವನಮಹೋತ್ಸವವನ್ನು ಆಚರಿಸಲಾಯಿತು. ಆಟಿ ಆಧಾರಿತ ನಾಟಕ, ನೃತ್ಯದ ವಿವಿಧ ಸ್ಪರ್ಧೆಗಳನ್ನು ಈ ಸಂದರ್ಭದಲ್ಲಿ ಪ್ರದರ್ಶಿಸಲಾಯಿತು. ವೇದಿಕೆಯಲ್ಲಿ ಶಾಲಾ ಪ್ರಾಂಶುಪಾಲೆ ರೂಪ ಮಸ್ಕರೇನಸ್, ಪದವಿ ಪೂರ್ವ ವಿಭಾಗದ ಪ್ರಾಂಶುಪಾಲ ರವಿಕುಮಾರ್ ಹಾಜರಿದ್ದರು. ಎಲ್ಲ ಸಿಬ್ಬಂದಿಗಳು ವಿದ್ಯಾರ್ಥಿಗಳು ಹಾಜರಿದ್ದು ಕಾರ್ಯಕ್ರಮ ಯಶಸ್ವಿಯಾಗಲು ಸಹಕರಿಸಿದರು.