ಮಂಗಳೂರು: ಸೈಂಟ್ ಎಲೋಶಿಯಸ್ ಕಾಲೇಜು (AIMIT)) ಬೀರಿ ಮತ್ತು ಉಳ್ಳಾಲ ವೀರರಾಣಿ ಅಬ್ಬಕ್ಕ ಉತ್ಸವ ಸಮಿತಿ (ರಿ)ಯ ಸಹಯೋಗದಲ್ಲಿ ಸೈಂಟ್ ಎಲೋಶಿಯಸ್ ಕಾಲೇಜು (AIMIT)) ಬೀರಿಯಲ್ಲಿ ಜರಗಿದ “ಅಬ್ಬಕ್ಕಳ ಮುನ್ನೆಲೆಗೆ ಬಾರದ ವಿಚಾರ” (Untold Story of Ullal Rani Abbakka)ಗಳ ಸರಣಿ ಉಪನ್ಯಾಸ ಕಾರ್ಯಕ್ರಮದಲ್ಲಿ ಪ್ರಪ್ರಥಮ ವಸಾಹತುಶಾಹಿ ಪೋರ್ಚುಗೀಸರನ್ನು ಧೈರ್ಯದಿಂದ, ಶೌರ್ಯದಿಂದ, ಕೆಚ್ಚೆದೆಯಿಂದ ಹಲವಾರು ಬಾರಿ ಹಿಮ್ಮೆಟ್ಟಿಸಿ, ತಮ್ಮ ಪ್ರಾಣ ತ್ಯಾಗ ಮಾಡಿದ ತೌಳವ ರಾಣಿ ಜೈನಾ ಮಹಿಳೆ ಚರಿತ್ರೆಯಲ್ಲೇ ಪ್ರಪ್ರಥಮ ಸ್ವಾತಂತ್ರ್ಯ ಹೋರಾಟಗಾರ್ತಿ ಎಂದು ಹೆಸರುವಾಸಿಯಾದ ಉಳ್ಳಾಲದ ರಾಣಿ ಅಬ್ಬಕ್ಕ ಆಗಿದ್ದರು ಎಂದು ಸಮಿತಿಯ ಅಧ್ಯಕ್ಷರಾದ ದಿನಕರ ಉಳ್ಳಾಲ್ ತಮ್ಮ ಉಪನ್ಯಾಸದಲ್ಲಿ ತಿಳಿಸಿದರು.

ಅಬ್ಬಕ್ಕ ಉತ್ಸವ ಸಮಿತಿಯ ಸರಣಿ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಮಾಜಿ ಶಾಸಕರು ಹಾಗೂ ಸಮಿತಿಯ ಸ್ವಾಗತಾಧ್ಯಕ್ಷರಾದ ಕೆ. ಜಯರಾಮ ಶೆಟ್ಟಿಯವರು 1997ರಲ್ಲಿ ಅಬ್ಬಕ್ಕ ಉತ್ಸವ ಸಮಿತಿಯನ್ನು ಪ್ರಾರಂಭಿಸಿ ಕಳೆದ 26 ವರ್ಷಗಳಿಂದ ನಿರಂತರವಾಗಿ ಅಬ್ಬಕ್ಕಳ ಸಾಧನೆ ಮತ್ತು ಹೆಸರನ್ನು ಇಡೀ ದೇಶಕ್ಕೆ ಹಾಗೂ ರಾಜ್ಯಕ್ಕೆ ಮುಟ್ಟುವಂತೆ ಮಾಡಿದ ಸಾಧನೆ ಉಳ್ಳಾಲ ವೀರರಾಣಿ ಅಬ್ಬಕ್ಕ ಉತ್ಸವ ಸಮಿತಿ(ರಿ)ಯದ್ದು ಎಂದು ತಿಳಿಸಿದರು. ಮಂಗಳೂರಿನ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ, ಮಂಗಳೂರು- ಬೆಂಗಳೂರು ರೈಲಿಗೆ ,ಮಂಗಳೂರು ಹಾಗೂ ಬೆಂಗಳೂರಿನ ರಸ್ತೆಗೆ, ದ.ಕ ಜಿಲ್ಲಾಧಿಕಾರಿ ಕಚೇರಿ ಬಳಿ ವೃತ್ತಕ್ಕೆ ಅಬ್ಬಕ್ಕಳ ಹೆಸರು ಹಾಗೂ ಈ ವರ್ಷದ ಅಬ್ಬಕ್ಕ ಉತ್ಸವವನ್ನು ಅರ್ಥಪೂರ್ಣವಾಗಿ ವಿಜೃಂಭಣೆಯಿಂದ ಮಾಡುವಂತೆ ನೂತನ ಸರಕಾರ ಗಮನಹರಿಸಬೇಕು ಎಂದು ಒತ್ತಾಯಿಸಿದರು.
ಸಭೆಯ ಅಧ್ಯಕ್ಷತೆಯನ್ನು ಸೈಂಟ್ ಎಲೋಶಿಯಸ್ ಕಾಲೇಜು( Autonomous)) ಮಂಗಳೂರಿನ ರಿಜಿಸ್ಟ್ರಾರ್ ಡಾ.ಆಲ್ವಿನ್ ವಿನ್ಸೆಂಟ್ ಡೇಸಾ ಮಾತನಾಡಿ ಸೈಂಟ್ ಎಲೋಶಿಯಸ್ ಕಾಲೇಜಿನಲ್ಲಿ ನಡೆದ ಈ ಕಾರ್ಯಕ್ರಮವು ವಿದ್ಯಾರ್ಥಿಗಳ ಜೀವನದಲ್ಲಿ ಅಬ್ಬಕ್ಕಳ ಕೋಮುಸೌಹಾರ್ದತೆ, ಅವಳ ಕೆಚ್ಚೆದೆಯ ಹೋರಾಟ, ಜೀವನ ಚರಿತ್ರೆ ಸ್ಪೂರ್ತಿದಾಯಕವಾಗಲಿ ಎಂದು ಆಶಿಸಿದರು.
ಪನೀರ್ ಚರ್ಚ್‍ನ ಧರ್ಮಗುರುಗಳಾದ ರೆ.ಫಾ.ವಿಕ್ಟರ್ ಡಿ’ಮೆಲ್ಲೋ ಆರ್ಶೀವಚಿಸಿದರು. ಡಾ.(ಫಾ) ಮೆಲ್ವಿನ್ ಪಿಂಟೋ ಎಸ್.ಜೆ, ಡೈರೆಕ್ಟರ್ ಸೈಂಟ್ ಎಲೋಶಿಯಸ್ ಕಾಲೇಜು (AIMIT) ಬೀರಿ, ಅಭಿನಂದನಾ ಭಾಷಣ ಮಾಡಿದರು. ಮುಖ್ಯ ಅತಿಥಿಗಳಾಗಿ ಎಮ್ ಜಿ ಮೋಹನ್, ಮಾಜಿ ಅಧ್ಯಕ್ಷರು, ಸೈಂಟ್ ಎಲೋಶಿಯಸ್ ಕಾಲೇಜು ಹಾಗೂ ಆಲ್ವಿನ್ ಡಿಸೋಜಾ ಅಧ್ಯಕ್ಷರು, ಕ್ಯಾಥಲಿಕ್ ಸಭಾ ಮಂಗಳೂರು ಪ್ರದೇಶ(ರಿ) ಉಪಸ್ಥಿತರಿದ್ದರು.
ವೇದಿಕೆಯಲ್ಲಿ ಜಿಲ್ಲಾ ಪಂಚಾಯತ್‍ನ ಮಾಜಿ ಸದಸ್ಯೆ ಧನಲಕ್ಷ್ಮಿ ಗಟ್ಟಿ, ಮೊಗವೀರ ಸಂಘದ ಮಾಜಿ ಅಧ್ಯಕ್ಷ ಸದಾನಂದ ಬಂಗೇರ, ಉಪಾಧ್ಯಕ್ಷರಾದ ಯು.ಪಿ.ಆಲಿಯಬ್ಬ ಹಾಗೂ ದೇವಕಿ ಆರ್ ಉಳ್ಳಾಲ್ ಉಪಸ್ಥಿತರಿದ್ದರು. ಸಮಿತಿಯ ಪದಾಧಿಕಾರಿಗಳಾದ ಡಿ.ಎನ್ ರಾಘವ, ಸತೀಶ್ ಭಂಡಾರಿ, ರತ್ನಾವತಿ ಜೆ.ಬೈಕಾಡಿ, ಶಶಿಕಲಾ ಗಟ್ಟಿ, ಹೇಮಾ ಯು, ಶಶಿಕಾಂತಿ ಉಳ್ಳಾಲ್, ದೇವಕಿ ಯು.ಬೋಳಾರ್, ಸರೋಜಾ ಕುಮಾರಿ, ಲತಾ ಶ್ರೀಧರ್, ಚಿತ್ರಾ ಜಗನ್, ಸುಜಾತ, ಜಯಲಕ್ಷ್ಮಿ, ಲತಾ ತಲಪಾಡಿ, ಸ್ವಪ್ನ ಶೆಟ್ಟಿ, ವಿ.ಶೋಭಾ, ರೇಣುಕಾ ಕೆ.ಕಾಂಚನ್, ಆರ್.ಬಂಗೇರ ಮುಂತಾದವರು ಉಪಸ್ಥಿತರಿದ್ದರು.
ಅಬ್ಬಕ್ಕ ಉತ್ಸವ ಸಮಿತಿಯ ಕೋಶಾಧಿಕಾರಿ ಆನಂದ ಕೆ.ಅಸೈಗೋಳಿ ಸ್ವಾಗತಿಸಿದರು. ಸಮಿತಿಯ ಕಾರ್ಯದರ್ಶಿ ಕ್ಲೇರಾ ಕುವೆಲ್ಲೋ ವಂದನಾರ್ಪಣೆಗೈದರು.