ಮಂಗಳೂರು: 2025-26 ನೇ ಸಾಲಿನ ಅಲ್ಪಸಂಖ್ಯಾತರ ಕಲ್ಯಾಣ ಇಲಾಖಾ ವತಿಯಿಂದ  ಅಲ್ಪಸಂಖ್ಯಾತರ ಸಮುದಾಯದ ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಬೌದ್ಧ, ಸಿಖ್ಖ್ ಮತ್ತು ಪಾರ್ಸಿವಿದ್ಯಾರ್ಥಿಗಳಿಗೆ ವಿವಿಧ ವಿದ್ಯಾರ್ಥಿವೇತನಕ್ಕಾಗಿ ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸುವ  ದಿನವನ್ನು ನವೆಂಬರ್ 30 ರವರೆಗೆ ವಿಸ್ತರಿಸಲಾಗಿದೆ. 

ರಾಜ್ಯ ವಿದ್ಯಾರ್ಥಿವೇತನ ತಂತ್ರಾಂಶ( SSP)ಯಲ್ಲಿ 1ನೇ ತರಗತಿಯಿಂದ 8ನೇ ತರಗತಿಯ ವಿದ್ಯಾರ್ಥಿಗಳಿಗೆ ಮೆಟ್ರಿಕ್ ಪೂರ್ವ ಹಾಗೂ ಮೆಟ್ರಿಕ್ ನಂತರದ ವಿದ್ಯಾರ್ಥಿವೇತನ, ವಿದೇಶಿ ವಿಶ್ವವಿದ್ಯಾಲಯಗಳಲ್ಲಿ ಸ್ನಾತಕೋತ್ತರ ಕೋರ್ಸ್ ಓದುತ್ತಿರುವ ಅಲ್ಪಸಂಖ್ಯಾತರ ಸಮುದಾಯದ ವಿದ್ಯಾರ್ಥಿಗಳಿಗೆ ವಿದೇಶಿ ವಿದ್ಯಾರ್ಥಿವೇತನ (ನ್ಯಾóಷನಲ್ ಓವರ್‍ಸೀಸ್ ಸ್ಕಾಲರ್‍ಶಿಪ್), ರಾಷ್ಟೀಯ  ಉನ್ನತ  ಶಿಕ್ಷಣ  ಸಂಸ್ಥೆಗಳಲ್ಲಿ ಪ್ರವೇಶ  ಪಡೆದ(IIT , IIM , IIIT , NIT , IISER , AIIMS , NLU , INI & IuSLA)  ಅಲ್ಪಸಂಖ್ಯಾತರ  ಸಮುದಾಯದ  ವಿದ್ಯಾರ್ಥಿಗಳಿಗೆ  ಕೋರ್ಸ್ ಅವಧಿಯಲ್ಲಿ  ಒಂದು  ಬಾರಿಗೆ  ರೂ. 2  ಲಕ್ಷಗಳ  ಪ್ರೋತ್ಸಾಹಧನ, ಎಂ.ಫಿಲ್  ಮತ್ತು  ಪಿ.ಎಚ್‍ಡಿಗೆ ಪೂರ್ಣಕಾಲಿಕ ನೋಂದಣಿಯಾಗಿ  ವ್ಯಾಸಂಗ  ಮಾಡುತ್ತಿರುವ  ಅರ್ಹ  ಅಲ್ಪಸಂಖ್ಯಾತರ  ವಿದ್ಯಾರ್ಥಿಗಳು  ಫೆಲೋಶಿಪ್, ಜಿ.ಎನ್.ಎಮ್ ಮತ್ತು ನರ್ಸಿಂಗ್ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನಕ್ಕೆ  ಅರ್ಜಿ  ಸಲ್ಲಿಸಲು  ನವೆಂಬರ್ 30 ರವರೆಗೆ   ಅವಧಿ ವಿಸ್ತರಿಸಲಾಗಿದೆ. 

ಹೆಚ್ಚಿನ ಮಾಹಿತಿಗೆ ಇಲಾಖೆಯ ವೆಬ್‍ಸೈಟ್ https://dom.karnataka.gov.in/dakshina_kannada/public ಅಥವಾ  ಸಹಾಯವಾಣಿ 8277799990  ಅಥವಾ   ತಾಲೂಕು ಅಲ್ಪಸಂಖ್ಯಾತರ ಮಾಹಿತಿ ಕೇಂದ್ರವನ್ನು ಸಂಪರ್ಕಿಸಬಹುದು ಎಂದುಅಲ್ಪಸಂಖ್ಯಾತರ  ಕಲ್ಯಾಣ  ಇಲಾಖೆ  ಜಿಲ್ಲಾ  ಅಧಿಕಾರಿ  ಪ್ರಕಟಣೆಯಲ್ಲಿ ತಿಳಿಸಿದ್ದಾರೆ.