ಮಂಗಳೂರು: ಬ್ರಹ್ಮಶ್ರೀ ನಾರಾಯಣ ಗುರುಗಳು ಜನಿಸಿದ ಶಿವಗಿರಿಯ ಹೆಸರಿನಲ್ಲಿ, ಮತ್ತವರ ತತ್ವದಂತೆ ಬದುಕಿ ಬಾಳಿದ ಜಯ ಸುವರ್ಣರ ನೆನಪಿನಲ್ಲಿ ನೀಡಿದ ಈ ಸನ್ಮಾನ ನನ್ನ ಬದುಕಿನಲ್ಲಿ ಅಮೂಲ್ಯವಾಗಿದೆ. ಕರ್ನಾಟಕ ಸರಕಾರ. ನಾನು ಹುಟ್ಟಿರುವ ಸಮಾಜ ಹಾಗೂ ನೂರಾರು ಸನ್ಮಾನಗಳನ್ನು ಸ್ವೀಕರಿಸಿಕೊಂಡಿದ್ದೆ ಆದರೆ ಬಿಲ್ಲವ ಸಮಾಜ ನೀಡಿರುವ ಈ ಸನ್ಮಾನಕ್ಕೆ ನಾನು ಋಣಿಯಾಗಿದ್ದೇನೆ , ಇಲ್ಲವ ಸಮಾಜ ಇಂದು ಈ ಮಟ್ಟದಲ್ಲಿ ಬಲಿಷ್ಠವಾಗಲು ಕಾರಣ ಜಯ ಸುವರ್ಣರು ಮತ್ತು ಜನಾರ್ಧನ ಪೂಜಾರಿ ಅವರು ಕಾರಣರಾಗಿದ್ದಾರೆ ಎಂದು ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶೆಟ್ಟಿ ನುಡಿದರು,
ಅವರು ಜಯ ಸಿ ಸುವರ್ಣ ಅಭಿಮಾನಿಗಳು ಮತ್ತು ಮುಂಬೈ ಬಿಲ್ಲವರು ಆಯೋಜನೆಯಲ್ಲಿ ಜಯಲೀಲಾ ಬ್ಯಾಂಕ್ವೆಟ್ ಹಾಲ್, ಜಯ ಸಿ ಸುವರ್ಣ ಮಾರ್ಗ, ಗೋರೆಗಾಂವ್ (ಪೂರ್ವ), ಇಲ್ಲಿ 171ನೇ ಬ್ರಹ್ಮಶ್ರೀ ನಾರಾಯಣ ಗುರು ಜಯಂತಿ ಆಚರಣೆಯಲ್ಲಿ ಭಾರತ್ ಬ್ಯಾಂಕಿನ ಕಾರ್ಯಧ್ಯಕ್ಷರಾದ ಸೂರ್ಯಕಾಂತ್ ಜಯ ಸುವರ್ಣ ಇವರ ಅಧ್ಯಕ್ಷತೆಯಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ ಸಾಯಿ ಪ್ಯಾಲೇಸ್ ಗ್ರೂಪ್ ಆಫ್ ಹೋಟೆಲ್ಸ್ ಆಡಳಿತ ನಿರ್ದೇಶಕ ರವಿ ಶೆಟ್ಟಿ ಅವರು ಪ್ರಧಾನಿಸಿ, ಜಯ ಸಿ ಸುವರ್ಣ ಜನಸೇವಾ ಪುರಸ್ಕಾರ "ಶಿವಗಿರಿ ಸಮ್ಮಾನ್" ಪ್ರಶಸ್ತಿ ಪ್ರಶಸ್ತಿಯನ್ನು ಸ್ವೀಕರಿಸಿ ಮಾತನಾಡಿದರು.
ಜೈ ಸುವರ್ಣದಲ್ಲಿ ಜ್ಞಾನವಿದೆ ಸಂಘಟನಾ ಶಕ್ತಿ ಇದೆ ಅಂತ ಮಹಾನ್ ವ್ಯಕ್ತಿಯ ಹೆಸರಿನಲ್ಲಿ ಶಿವಗಿರಿ ಪ್ರಶಸ್ತಿ ನನ್ನ ಜನ ಸೇವೆಗೆ ಶಕ್ತಿ ತುಂಬಿದೆ. ಕಾಲೇಜು ಜೀವನದಲ್ಲಿ ಜಾತಿಯ ಪರಿಧಿಯನ್ನು ಮೀರಿ ಎಲ್ಲರೂ ಒಗ್ಗಟ್ಟಾಗಿ ಬದುಕಿ ಬಾಳಿದವರು, ಎಲ್ಲರನ್ನು ಪ್ರೀತಿಸುವ ಗುಣ ನಮ್ಮಲ್ಲಿ ಬೆಳೆಯಬೇಕು ನಾನು ಈ ಸಮಾಜಕ್ಕೆ ಏನಾದರೂ ಸೇವೆ ಮಾಡಿದ್ದರೆ ಅದು ಕಟೀಲಮ್ಮನ ಆಶೀರ್ವಾದವೆಂದು ನಂಬಿದವನು. ಜೀವನದಲ್ಲಿ ಒಳ್ಳೆಯ ಸೇವೆ ಮಾಡಿದಾಗ ಅದಕ್ಕೆ ಕಲ್ಲು ಎಸೆಯುವರು ಇರುತ್ತಾರೆ. ಕಲ್ಲಿನ ಪೆಟ್ಟು ತಿಂದು ಗಟ್ಟಿಯಾಗಿದ್ದಾಗ. ಯಾವ ಕಲ್ಲಿನ ಪೆಟ್ಟುಗಳನ್ನು ಎದುರಿಸುವ ಶಕ್ತಿವಂತನಾಗಿದ್ದವೆ. ನಮ್ಮಲ್ಲಿ ಆತ್ಮ ಶೈರ್ಯ ಮತ್ತು ದೇವರಿಗೆ ಸಮಾನವವಾಗಿ ನಡೆಯಬೇಕು .ಯಾರಿಗೂ ಅನ್ಯಾಯ ಮಾಡಬಾರದು ಎಲ್ಲರನ್ನು ಪ್ರೀತಿಸುವ ಹಸಿವಿರಬೇಕು. ಬದುಕಿನಲ್ಲಿ ದ್ವೇಷ ಮಾಡಬಾರದು. ಎಷ್ಟು ಒಳ್ಳೆಯ ಸೇವೆ ಮಾಡಿದರು ಟೀಕೆಗಳಿರುತ್ತದೆ. ಅದನ್ನು ಎದುರಿಸುವ ಶಕ್ತಿ ನಮ್ಮಲ್ಲಿರಬೇಕು. ನಾನು ಬೇಡಿ ತಂದದ್ದನ್ನು ಸಮಾಜಕ್ಕೆ ನೀಡಿದ್ದೇನೆ. ಬಂಟ ಸಮಾಜದಲ್ಲಿ ಕೂಡ 75ರಷ್ಟು ಬಡತನದ ಕುಟುಂಬಗಳಿವೆ. ಬೇಡಿದ್ದನ್ನು ಸಮಾಜಕ್ಕೆ ನೀಡುತ್ತಿದ್ದೇನೆ ಯಾವುದೇ ಸಮಾಜದವರು ಕೂಡ ಜಾಗತಿಕ ಬಂಟರ ಸಂಘಕ್ಕೆ ನೆರವು ಗಾಗಿ ಮನವಿ ನೀಡಿದರೆ ಸಹಕಾರವನ್ನು ನೀಡುತ್ತಾ ಬಂದವನು. ಪ್ರತಿ ಸಂಘ ಸಂಸ್ಥೆಗಳು ಸಮಾಜದ ಬಂಧುಗಳಿಗೆ ಆಶ್ರಯ ನೀಡುವ ಯೋಜನೆಗಳನ್ನು ರೂಪಿಸಿಕೊಳ್ಳಿಬೇಕು ಎಂದರು.
ವೇದಿಕೆಯಲ್ಲಿ ಗೌರವ ಅತಿಥಿಗಳಾಗಿ ಗಣೇಶ್ ಆರ್. ಪೂಜಾರಿ, ವೇದಪ್ರಕಾಶ್ ಶ್ರೀಯಾನ್ ನಿತ್ಯಾನಂದ ಡಿ. ಕೋಟ್ಯಾನ್ ವಿದ್ಯಾನಂದ್ ಎಸ್. ಕರ್ಕೆರ ಪುರಂದರ ಪೂಜಾರಿ, ಮನೋಜ್ ಹೆಗ್ಡೆ, ಹ್ಯಾರಿ ಸಿಕ್ಕೇರಾ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಸಮಾಜದಲ್ಲಿ ವಿಶೇಷ ಸೇವೆಗೈದ ಜಲಜಾ ಸೂರು ಪೂಜಾರಿ ವಡಾಲ, ಮತ್ತು ಹೈಕೋರ್ಟ್ ನ ನ್ಯಾಯವಾದಿ ಅಡ್ವಕೇಟ್ ಜಿ ಸಿ ಪೂಜಾರಿ, ಅವರನ್ನು ವಿಶೇಷವಾಗಿ ಸನ್ಮಾನಿಸಲಾಯಿತು.