ಮಂಗಳೂರು: ಮಂಗಳೂರಿನ 26ನೇ ವಾರ್ಡ್ ಅಶೋಕ್ ನಗರದಲ್ಲಿ ಮನೆ ಸಂಪೂರ್ಣ ಕುಸಿದಿದ್ದು, ಮನೆಯಲ್ಲಿ ಇದ್ದವರನ್ನು ಬೇರೆ ಕಡೆ ವರ್ಗಾಯಿಸಿ ರಕ್ಷಿಸಲಾಗಿದೆ. ಗ್ರಾಮಲೆಕ್ಕಾಧಿಕಾರಿ ಪ್ರದೀಪ್ ಶೆಣೈ ಮತ್ತು ಸ್ಥಳೀಯ ಮನಪಾ ಇಂಜಿನಿಯರ್ ಪ್ರಿಯಾಂಕಾ ಇವರುಗಳ ಜೊತೆ ಸ್ಥಳಕ್ಕೆ ಭೇಟಿ ನೀಡಿದ ಐವನ್ ಡಿʼಸೋಜಾ ಇವರು ಸಂಪೂರ್ಣ ನಾಶಗೊಂಡಿರುವ ಮನೆಯ ಬಗ್ಗೆ ಕೂಡಲೇ ವರದಿಯನ್ನು ಸಲ್ಲಿಸುವಂತೆ ಕೋರಿದ್ದಾರೆ. ಈ ಸಂದರ್ಭದಲ್ಲಿ ಐವನ್ ಡಿʼಸೋಜಾ ಇವರು ನಗರಪಾಲಿಕೆ ಇಲಾಖೆಯ ಅಧಿಕಾರಿಗಳು ಕೂಡಲೇ ಎಲ್ಲೆಲ್ಲಿ ಅನಾಹುತಗಳು ಸಂಭವಿಸುತ್ತದೆ ಅಂತವರನ್ನು ಮನೆಯಿಂದ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಗೊಳಿಸುವ ವ್ಯವಸ್ಥೆಯನ್ನು ಮಾಡಬೇಕು ಹಾಗೂ ಪ್ರಕೃತಿ-ವಿಕೋಪದಡಿ ಪ್ರಾಣ ಹಾನಿ ಅಗದಂತೆ ಮೊದಲ ಅದ್ಯತೆಯಲ್ಲಿ ಕೆಲಸ ಮಾಡಬೇಕು ಮತ್ತು ಮನೆಗಳಿಗೆ ನೀರು ನುಗ್ಗಿ ವಸ್ತುಗಳೆಲ್ಲ ಹಾಳಾದರೆ ಒಂದು ಬಾರಿ ಮಾತ್ರ ಪರಿಹಾರ ನೀಡಲಾಗುತ್ತದೆ.
ಅತೀ ಮಳೆಯಿಂದ ನೆರೆ 4-5 ಬಂದು ಸೊತ್ತುಗಳು ನಾಶವಾದಂತಹ ಈ ಪ್ರಕರಣಕ್ಕೆ ವಿಶೇಷ ಪ್ರಕರಣವೆಂದು ಪರಿಗಣಿಸಿ ಅವರಿಗೆ ಪರಿಹಾರ ನೀಡುವಂತೆ ಸೂಚಿಸಬೇಕೆಂದು ದ.ಕ. ಜಿಲ್ಲಾ ಉಸ್ತುವಾರಿ ಸಚಿವರಾದ ದಿನೇಶ್ ಗುಂಡೂರಾವ್ ಇವರಿಗೆ ದೂರವಾಣಿ ಮೂಲಕ ಜಿಲ್ಲಾಧಿಕಾರಿಗೆ ಸೂಚನೆ ನೀಡುವಂತೆ ತಿಳಿಸಿದ್ದಾರೆ. ಈ ಬಗ್ಗೆ ಕಾನೂನು ಕ್ರಮ ಕೈಗೊಳ್ಳಬೇಕಾಗಿ ಉಸ್ತುವಾರಿ ಸಚಿವರು ಐವನ್ ಡಿʼಸೋಜಾರವರಿಗೆ ಭರವಸೆ ನೀಡಿದ್ದಾರೆ.
ಈ ಸಂದರ್ಭದಲ್ಲಿ ಗ್ರಾಮ ಲೆಕ್ಕಾಧಿಕಾರಿ ಪ್ರದೀಪ್ ಶೆಣೈ, ಎಂಸಿ.ಸಿ. ಜೂನಿಯರ್ ಇಂಜಿನಿಯರ್ ಪ್ರಿಯಾಂಕ, ಪ್ರೇಮ್ ಬಳ್ಳಲ್ಬಾಗ್, ಮಹೇಶ್ ಉಪಸ್ಥಿತರಿದ್ದರು.