ಲೊರೆಟ್ಟೊ:  ಆಂಗ್ಲ ಮಾಧ್ಯಮ ಶಾಲೆಯ ವಾರ್ಷಿಕೋತ್ಸವವನ್ನು ಡಿಸೆಂಬರ್ 21 ಬುಧವಾರದಂದು ಬಹಳ ಅದ್ದೂರಿಯಿಂದ ನಡೆಸಲಾಯಿತು. ಪೂರ್ವಾಹ್ನದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಸಂತ ಲಾರೆನ್ಸ್ ಆಂಗ್ಲ ಮಾಧ್ಯಮ ಶಾಲಾ ಪ್ರಾಂಶುಪಾಲರಾದ ವಂದನೀಯ ಸ್ವಾಮಿ ಪೀಟರ್ ಗೊನ್ಸಾಲ್ವಿಸ್, ಅಮ್ಚಾಡಿ ಗ್ರಾಮ ಪಂಚಾಯತಿಯ ಅಧ್ಯಕ್ಷೆ ಮೋಹಿನಿ, ಅಮ್ಟಾಡಿ ಗ್ರಾಮ ಪಂಚಾಯತ್ ಸದಸ್ಯ ಫೆಲಿಕ್ಸ್ ಡಿಸೋಜಾ, ಶಿಕ್ಷಕ-ರಕ್ಷಕ ಸಂಘದ ಉಪಾಧ್ಯಕ್ಷ ಪ್ರಕಾಶ್ ಹಾಗೂ ಉಭಯ ಶಾಲಾ ಮುಖ್ಯೋಪಾಧ್ಯಾಯರು ಉಪಸ್ಥಿತರಿದ್ದರು. ಧ್ವಜಾರೋಹಣದ ಬಳಿಕ ವಿದ್ಯಾರ್ಥಿಗಳು ಶಿಸ್ತುಬದ್ಧವಾದ ಪಥಸಂಚಲನವನ್ನು ನಡೆಸಿ, ಬಳಿಕ ಮನರಂಜಕ ಕವಾಯತು ಪ್ರದರ್ಶಿಸಿ ಶಾಲಾ ಗೀತೆಯ ಮೂಲಕ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಲಾಯಿತು.

ಅಪರಾಹ್ನದ ಕಾರ್ಯಕ್ರಮವನ್ನು 5.30 ಕ್ಕೆ ಸರಿಯಾಗಿ ಆರಂಭಿಸಲಾಯಿತು. ಕಾರ್ಯಕ್ರಮದ ವೇದಿಕೆಯಲ್ಲಿ ಮುಖ್ಯ ಅತಿಥಿಯಾಗಿ ಸಂತ ಅಲೋಶಿಯಸ್ ಕಾಲೇಜಿನ  ಪ್ರಾಂಶುಪಾಲರಾದ ವಂದನೀಯ ಸ್ವಾಮಿ ಪ್ರವೀಣ್ ಮಾರ್ಟಿಸ್ SJ, ಅಧ್ಯಕ್ಷರಾಗಿ ವಂದನೀಯ ಸ್ವಾಮಿ ಫ್ರಾನ್ಸಿಸ್ ಕ್ರಾಸ್ತ , ಉಭಯ ಶಾಲಾ ಮುಖ್ಯೋಪಾಧ್ಯಾಯರು, ಚರ್ಚ್ ಪಾಲನಾ ಮಂಡಳಿಯ ಉಪಾಧ್ಯಕ್ಷರು, ಶಿಕ್ಷಕ-ರಕ್ಷಕ ಸಂಘದ ಉಪಾಧ್ಯಕ್ಷರು ಹಾಗೂ ಉಭಯ ಶಾಲಾ ನಾಯಕರು ಉಪಸ್ಥಿತರಿದ್ದರು. ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು. ತದನಂತರ ಉಭಯ ಶಾಲಾ ಮುಖ್ಯೋಪಾಧ್ಯಾಯರು ಶಾಲಾವರದಿಯನ್ನು ವಾಚಿಸಿದರು. ವಿದ್ಯಾರ್ಥಿಗಳು ನಾನಾ ರೀತಿಯ ನೃತ್ಯಗಳನ್ನು ಪ್ರದರ್ಶಿಸಿ ತಮ್ಮ ಪ್ರತಿಜ್ಞೆಯನ್ನು ಅನಾವರಣಗೊಳಿಸಿ, ಸಭೀಕರ ಮನರಂಜಿಸಿದರು. ಹೀಗೆ ಶಾಲಾ ಗೀತೆಯೊಂದಿಗೆ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಲಾಯಿತು.

ಪೂರ್ವಾಹ್ನದ ಕಾರ್ಯಕ್ರಮದ ನಿರೂಪಕಿ ಶರಲ್ ಪಿಂಟೋ ಹಾಗೂ ಅಪಾರಾಹ್ನದ ಕಾರ್ಯಕ್ರಮವನ್ನು ಶರಲ್ ಪಿಂಟೋ , ಅನರ್ಘ್ಯ, ಫಿಲೆನ, ಹಾಗೂ  ವಿಯೋನಾಲ್ ಡಿಸೋಜಾ ಇವರು ನಿರೂಪಿಸಿದರು. ಅನಿತಾ ಪಿಂಟೊ ಸ್ವಾಗತಿಸಿದರು. ಸ್ವಾತಿ ಕಾರ್ಲೊ ವಂದಿಸಿದರು.