ಲೊರೆಟ್ಟೊ: ಕಾರ್ಗಿಲ್ ವಿಜಯೋತ್ಸವದ ಪ್ರಯುಕ್ತ ಲಯನ್ಸ್ ಕ್ಲಬ್ ಲೊರೆಟ್ಟೊ ಅಗ್ರಾರ್, ಬಂಟ್ವಾಳ ವತಿಯಿಂದ ನಿವೃತ್ತ ಯೋಧರಾದ ಲಯನ್ ಲಿಯೋ ಪಿಂಟೊ ಹಾಗೂ ಆಂಟನಿ ಆಲ್ಪುಕರ್ಕ್ ರವರ ನಿವಾಸಕ್ಕೆ ಬೇಟಿ ನೀಡಿ ಯೋಧ ದಂಪತಿಯನ್ನು ಶಾಲು ಹೊದಿಸಿ ಸನ್ಮಾನಿಸಲಾಯಿತು. ಲಯನ್ ಸಿರಿಲ್ ಡಿಸೋಜ ಹಾಗೂ ಲಯನ್ ಟೊನಿ ಮಾರ್ಟಿಸ್ ಯೋಧರ ಸೇವಾ ವೈಖರಿಯನ್ನು ಉಲ್ಲೇಖಿಸಿದರು.
ಅಧ್ಯಕ್ಷರಾದ ಫಿಲೋಮಿನಾ ರೊಡ್ರಿಗಸ್, ಕಾರ್ಯದರ್ಶಿ ಫಿಯೊನಾ ಟ್ರಿಯೊಲಾ, ಖಜಾಂಚಿ ಜೆನೆಟ್ ಕೊನ್ಸೆಸೊ ಹಾಗೂ ಇತರ ಪದಾದಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು.