ಬದುಕಿನಲ್ಲಿ ಪ್ರತಿಯೊಬ್ಬರಿಗೂ ತನ್ನದೆ ಆದ ಕನಸುಗಳು ಆಸೆ ಆಕಾಂಕ್ಷೆಗಳಿರುತ್ತವೆ ತನ್ನ ಬದುಕನ್ನು ಹೀಗೆ ಬದುಕಬೇಕೆಂಬ ಹಂಬಲವಿರುತ್ತದೆ ಆದರೆ ಬಯಸಿದಂತಲ್ಲ ಬದುಕು ನಮ್ಮ ನಿರೀಕ್ಷೆ ಆಸೆಗಳ ತದ್ವಿರುದ್ಧವಾಗಿರುತ್ತದೆ. ಕಂಡ ಕನಸುಗಳನ್ನ ಕಸವಾಗಿಸಲು ಕ್ಷಣಿಕ ಸಾಕು ಈ ಬಲಶಾಲಿ ಬದುಕಿಗೆ. ನಾಳೆಗಳು ಯಾರಿಗೆ ತಿಳಿದಿದೆ ನಾಳೆಗಳ ನಿರೀಕ್ಷೆಯಲ್ಲೆ ಸಾಗಿದ ಬದುಕಿಗೆ ನಿರೀಕ್ಷೆಗಳೆ ನೋವು ತಂದೊಡ್ಡುತ್ತದೆ. ಕೆಲವು ವಾಸ್ತವಗಳು ಉಸಿರುಗಟ್ಟಿಸುವುದು.
ಸಮಯ ಕಳೆದಂತೆ ಅವೇ ವಾಸ್ತವಗಳು ನಿಟ್ಟುಸಿರು ಬಿಡುವಂತೆ ಮಾಡುವವು. ಎಲ್ಲರ ಜೀವನ ಒಂದೇ ರೀತಿಯಾಗಿರುವುದಿಲ್ಲ ಬರೀ ಸುಖವೇ ಕಂಡವರು ಸುಖವಾಗೆ ಇರತಾರೆ ಕಷ್ಟದಲ್ಲಿ ಬೆಳೆದವರು ಕಷ್ಟವೇ ಅನುಭವಿಸುತ್ತಾರೆ ಹೀಗಿರುವಾಗ ಕೆಲವುಸಾರಿ ದೇವರು ಪಕ್ಷಪಾತಿಯಾ ಎಂದು ಮನಸ್ಸಿನೊಳಗೊಂದು ಪ್ರಶ್ನೆಯೂ ಹುಟ್ಟುತ್ತದೆ.
ಒಮ್ಮೆ ಸ್ನೇಹಿತೆಯರಿಬ್ಬರು ಬಹು ವರ್ಷಗಳ ನಂತರ ದೇವಸ್ಥಾನದಲ್ಲಿ ಭೇಟಿಯಾದರು. ತಮ್ಮ ಹಳೆ ನೆನಪುಗಳನ್ನು ಮೆಲುಕು ಹಾಕುತ ಕೂತರು ಮೊದಲಿನ ಜೀವನ ಅದೆಷ್ಟು ಸುಂದರ ಈಗಿನ ಬದುಕಿನ ಬಗ್ಗೆ ಜಿಗುಪ್ಸೆ ಹುಟ್ಟಿರುವುದಾಗಿ ಹೇಳಿಕೊಳ್ಳುತ್ತಾರೆ ಒಬ್ಬ ಸ್ನೇಹಿತೆ ನಾನೊಬ್ಬ ಗೃಹಿಣಿ ಮನೆ ಮಕ್ಕಳು ಗಂಡ ಎಲ್ಲರ ಕಾಳಜಿಯಲ್ಲಿ ಜೀವನ ಸವೆಸುವುದು ದಿನ ಬೆಳಗಾದರೆ ಬಿಡುವಿಲ್ಲದ ಜೀವನಕ್ಕೆ ಬೆಸೆತ್ತುಹೋಗಿರುವೆ ಸಾಕಪ್ಪ ಈ ಜೀವನ ಎಂಬ ಮಟ್ಟಿಗೆ ಬಂದಿರುವೆ ಎಂದಳು ಇನ್ನೊಬ್ಬ ಸ್ನೇಹಿತಳು ಅವಳ ಮಾತಿಗೆ ನಿಜ ಮದುವೆಯಾದ ಬದುಕು ಹೀಗೆ ನಾನು ಕೂಡ ದಿನ ಬೆಳಗಾದರೆ ಮನೆಗೆಲಸ ಮಕ್ಕಳ ಟೀಪನ್ ತಯಾರಿಸಿ ಸ್ಕೂಲಿಗೆ ಕಳಸಿ ಗಂಡನನ್ನು ಆಫಿಸಿಗೆ ಕಳಸಿ ನನಗೆ ಟೀಫಿನ್ ಕಟ್ಟಿಕೊಂಡು ನಾನು ಕೂಡ ಆಫಿಸ್ಗೆ ಹೋಗಿ ಸಂಜೆ ಮತ್ತೆ ಸ್ಕೂಲಿಂದ ಮಕ್ಕಳನ್ನ ಕರೆದುಕೊಂಡು ಬಂದು ಅವರಿಗೆ ಹೋಮವರ್ಕ ಮಾಡಿಸಿ ಮತ್ತೆ ರಾತ್ರಿ ಅಡುಗೆ ಮಾಡಿಕೊಳ್ಳೊವಷ್ಟರಲ್ಲಿ ಸಾಕಾಗುತ್ತೆ ಪೇರೆಂಟ್ಸ ಮಿಟಿಂಗ್ ಆಫಿಸ್ ಕೆಲಸ ಅದು ಇದು ಅಂತ ಹತ್ತು ಟೆನ್ಸನ್ಗಳು ಈ ಬಾಳು ಗೋಳು ಎಂದು ಕೂತವರ ಮುಂದೆ ಅವಳೊಬ್ಬ ಮಹಿಳೆ ಗುರುಗಳ ಮುಂದೆ ತನ್ನ ಮಗ ಆಂಗ್ಲ ವರ್ಣಮಾಲೆ ಮತ್ತು 1 ರಿಂದ 20 ರವರೆಗೆ ಸಂಖ್ಯೆಯನ್ನು ಕಂಠಪಾಠ ಮಾಡಿ ಹೇಳಿತಿರುವುವುದನ್ನು ನೋಡಿ ಚಪ್ಪಾಳೆ ತಟ್ಟಿ ಪ್ರೋತ್ಸಾಹಿಸುತ್ತ ಆನಂದ ಭಾಷ್ಪ ಸುರಿಸುತ್ತಿದ್ದಳು ಹದಿನಾರು ವರ್ಷದ ಮಗ ವರ್ಣಮಾಲೆ ಹೇಳುವುದೇನು ಮಹಾ ಎಂದು ಇವರಂದುಕೊಂಡು ಆ ಹುಡುಗನನ್ನು ನೋಡತಾರೆ ಅವನು ವಯಸ್ಸಿಗೆ ಮೀರಿದ ದೇಹ ದೇಹಕ್ಕಿಂತ ತಲೆ ದೊಡ್ಡದು ಸಣ್ಣ ಕೈಕಾಲು ಬುದ್ದಿಮಾಂಧ್ಯದ ಹುಡುಗ ತಾಯಿಯು ಕಂಕುಳಲ್ಲಿ ಕುರಿಸಿಕೊಂಡು ಮತ್ತೆ ದೇವಸ್ಥಾನದ ಎದುರು ತೆಂಗಿನಕಾಯಿ ಅಂಗಡಿ ವ್ಯಾಪಾರ ಮಾಡತಾ ಕುತಳು.. ಈ ಇಬ್ಬರು ಮಹಿಳೆಯರಿಗೆ ಅಚ್ಚರಿ ಮರುಕವು ಆಯಿತು ದೇವರು ಎಲ್ಲರ ಜೀವನ ಒಂದೇ ರೀತಿಯಾಗಿರಿಸಿಲ್ಲ. ಎಲ್ಲರಿಗೂ ಅವರದ್ದೆ ಆದ ಜವಾಬ್ದಾರಿಯ ಶೃಂಖಲೆಗಳಲ್ಲಿ ಕಟ್ಟಿರುತ್ತಾನೆ. ಯಾವಾಗಲೂ ನಾವು ನಮಗಿಂತ ಸ್ಥಿತಿವಂತರನ್ನ ನೋಡಿ ನಮ್ಮ ಪರಿಸ್ಥಿತಿಯ ಬಗ್ಗೆ ತಲೆಕೆಡಿಸಿಕೊಳ್ಳುತ್ತವೆ ನಾವು ನಮಗಿಂತ ಕಷ್ಟದಲ್ಲಿರುವವರ ಬಗ್ಗೆ ನೆನಪಿಸಿಕೊಳ್ಳುವುದು ತೀರಾ ಕಡಿಮೆ. ಚಪ್ಪಲಿ ಇಲ್ಲ ಎಂದು ಅಳುವವರ ಮಧ್ಯ ಕಾಲಿಲ್ಲದವರ ಜೀವನ ಹೇಗೆ ಎಂಬುವುದು ಮರೆತು ಬಿಡುತ್ತೆವೆ.
ಬದುಕಿನ ದಾರಿ ಬರೀ ಹೂವುಗಳೇ ತುಂಬಿರಲಿ ಕಷ್ಟವೆ ಇರದಿರಲಿ ಜಗದಲ್ಲಿ ನಮ್ಮನ್ನ ಪ್ರೀತಿಸುವವರೇ ಇರಲಿ. ಶತೃಗಳೇ ಇರದಿರಲಿ ಎಂದು ಬಯಸಿದರೆ ಅದು ಸಾಧ್ಯವೇ..? ಬದುಕಿನ ಏಳು ಬೀಳಿನ ದಾರಿಯಲ್ಲಿ ಕುಗ್ಗದೆ ಸಮಸ್ಯೆಗಳ ಎದುರಿಸುವ ತಾಳ್ಮೆ ಶಕ್ತಿಯು ಇರಲಿ. ಅಂದುಕೊಂಡಂತೆ ಬದುಕಲ್ಲ ಬಂದಂತೆ ಬದುಕಬೇಕು ನೊಂದು ಕೂರುವುದಲ್ಲ ನೋವನ್ನು ಕೊಂದು ಬದುಕಬೇಕು.
✍ ಅಂಜಲಿ ಶ್ರೀನಿವಾಸ
ಹುಬ್ಬಳ್ಳಿ