ನಾವು ಎಲ್ಲಾರೂ ಬದುಕಲ್ಲಿ ಬೇರೆಯವರಿಗೆ ಲವ್ ಯೂ ಅಂತಾ ಹೇಳಿನೇ ಹೇಳಿ ಇರತ್ತೀವೀ ಅಲ್ವಾ. ಹೇಳೋದಕ್ಕಿಂತನೂ ಒಂದು ಹೆಜ್ಜೆ ಮುಂದೆಹೋಗಿ ಅವರಿಗೋಸ್ಕರ ಏನೆಲ್ಲ ಮಾಡತ್ತಾನೇ ಇರತ್ತೀವೀ. ನಾವು ಪ್ರೀತಿಸುವವರಿಗೋಸ್ಕರ ಎಲ್ಲಾ ಮಾಡೋದು ಒಳ್ಳೆದೇ ನಮಗೂ ಒಂದು ಬದುಕಿದೇ ನಮಗೂ ಒಂದು ದೇಹವಿದೆ ನಮಗೂ ಒಂದು ಮನಸ್ಸು ಇದೆ ಅದರ ಬಗ್ಗೆ ಯೋಚಿಸಿತ್ತೀವಾ. ನಮ್ಮ ದೇಹ ಮನಸ್ಸು ಅದೆಷ್ಟೋ ಕೆಲಸ ಮಾಡುತ್ತದೆ ಆದರೆ ಒಂದು ದಿನವೂ ನಾವು ಕೃತಜ್ಞತೆ ಹೇಳೋದು ಇಲ್ಲ ಲವ್ ಯೂ ಹೇಳೋದು ಇಲ್ಲ 

ಅಬ್ಬಾ ಅದೆಷ್ಟೋ ಒತ್ತಡದ ಬದುಕು ನಮ್ಮದು ನಮಗೆ ಯಾವುದಕ್ಕೂ ಸಮಯ ಇರೋದೇ ಇಲ್ಲ. ನಾವು ಸೋಷಲ್ ಮೀಡಿಯಾ ಬೇಡದರಲ್ಲಿ ಅದೆಷ್ಟೋ ಬೇಕಾದರೂ ಸಮಯ ಕೆಳೆಯುತ್ತೇವೆ ಅಲ್ವಾ ಆದರೆ ಈ ದೇಹ ಮನಸ್ಸು  ಬದುಕು ದೇವರು ಕೊಟ್ಟಿರುವ ವರ. ಅದನ್ನ ಚೆನ್ನಾಗಿ ಇಟ್ಟುಕೊಳ್ಳೋದು ಕೂಡಾ ಒಂದು ಕರ್ಮವೇ. ದೇಹ ಅದೆಷ್ಟು ಅಧ್ಭುತ ರಚನೆ ಅಲ್ವಾ ಹೇಗೆ ಎಲ್ಲಾ ಕೆಲಸ ನಿರ್ವಹಿಸುತ್ತದೆ ನಮ್ಮ ದೇಹದ ಕೆಲಸ ನಾವು ನೀರ್ವಹಿಸುತ್ತಿದಿದ್ದರೇ ಎಲ್ಲಾವೂ ಮರೆತೇ ಹೋಗಿ ಬೇಗ ಸಾಯತ್ತಿರಬಹುದು. ಭಯ ಆದಾಗ ಉಸಿರಾಟದ ವೇಗವೇ ಬೇರೆ ಖುಷಿ ಆದಾಗ ಉಸಿರಾಟದ ವೇಗವೇ ಬೇರೆ. ಪ್ರತಿಕ್ಷಣ ಮನಸ್ಸು ದೇಹಕ್ಕಿಂತಲೂ ಇನ್ನೂ ಅಧ್ಭುತ ಅದು  ಅದೆಷ್ಟೋ ಯೋಚನೆ ಮಾಡತ್ತೆ ಅಲ್ವಾ ಮಲಗಿದ್ದಾಗಾಲೂ ಸುಪ್ತ ಮನಸ್ಸು ತನ್ನ ಕೆಲಸವನ್ನು ಮಾಡತ್ತಾನೇ ಇರತ್ತೇ.

ನಾವು ಬದುಕಿದ್ದೀವೀ ಆರೋಗ್ಯವಾಗಿ ಇದ್ದೀವೀ ಅಂದರೆ ಅದೇ ದೊಡ್ಡ ಖುಷಿ ಆದರೆ ನಾವು ಯಾವಾಗಲೂ ಬೇರೆಯವರ ಬದುಕನ್ನ ನೋಡಿ ನಮಗೆ ಅದು ಇಲ್ಲ ಅದು ಇಲ್ಲ ಜೀವನದಲ್ಲಿ ಸಾಧನೆ ಮಾಡಿದ ಮೇಲೆ ಖುಷಿಯಾಗಿ ಇರತ್ತೇನೇ ಅಂತಾ ಖುಷಿನಾ ಪೋಸ್ಟ್ ಫೋನ್  ಮಾಡತ್ತಾ ಇರತ್ತೀವೀ ಅವರ ಇಲ್ಲ ಅಂದರೆ ನನ್ನ ಬದುಕು ಹೇಗೆ ಇವರು ಇಲ್ಲ ಅಂದರೆ ನನ್ನ ಬದುಕು ಹೇಗೆ ಎನ್ನುವ ಬೇಡದ ಯೋಚನೆಗಳಲ್ಲಿ ಇರತ್ತೀವೀ.ನಮಗೆ ಏನೂ ಇಷ್ಟನೂ ಅದರಲ್ಲಿ ತೊಡಗಿಸಿಕೊಂಡ ಖುಷಿಪಡಬೇಕು. ಪ್ರಕೃತಿಯ ಮಡಿಲಲ್ಲಿ ಕಳೆದು ಹೋಗುವುದರಲ್ಲಿ ಅದೆಷ್ಟೋ ಖುಷಿ ಸಿಗತ್ತೇ ಉತ್ತಮ ಹವ್ಯಾಸಗಳು ನಮ್ಮ ಬದುಕನ್ನ ಸುಂದರವಾಗಿಸುತ್ತದೆ. ಪುಸ್ತಕ ಓದುವುದು ಸಾಂಗ್ ಕೇಳುವುದು ಪ್ರವಾಸಕ್ಕೆ ಹೋಗುವದು ಡ್ರಾಯಿಂಗ್ ಮಾಡೋದು ಸುಮ್ಮನೇ ಕುಳಿತು ಬೋರ್ ಅನ್ನೋದಕ್ಕಿಂತ ಇಂತಹ ಹವ್ಯಾಸಗಳನ್ನ ಅಳವಡಿಸಿಕೊಂಡು ಬೆಳೆಸಿಕೊಂಡು ಹೋದರೆ ಬದುಕು ಸುಂದರವಾಗಿ ಇರುತ್ತದೆ. 

ನಮ್ಮ ಬದುಕು ನಮಗೆ ಭಗವಂತನಿಂದ ಸಿಕ್ಕ ಅತ್ಯ ಅಧ್ಭುತ ಪ್ರಸಾದ. ಅದನ್ನು ಸುಂದರವಾಗಿ ಇಟ್ಟುಕೊಳ್ಳುವುದು ನಮ್ಮ ಕರ್ತವ್ಯ. ನಮ್ಮ ಬದುಕನ್ನ ಸುಂದರವಾಗಿಸಿಕೊಳ್ಳೋದು ನಮ್ಮ ಕೈಯಲ್ಲಿಯೇ ಇದೇ ಈ ದೇಹ ಒಂದು ದಿನ ಸ್ಮಶಾನಕ್ಕೆ ಹೋಗುತ್ತದೆ. ಹೋದ ಮೇಲೆ ವಾಪಾಸ್ ಈ ದೇಹ ಈ ಬದುಕು ಸಿಗಲ್ಲಾ ಪ್ರಾಣ ಇರುವ ತನಕ ಮಾತ್ರ ಈ ದೇಹದಲ್ಲಿ ಇರಬಹುದು ಚೆನ್ನಾಗಿ ನೋಡಕೊಳ್ಳಬಹುದು ಅದಕ್ಕೆ ಯಾವಾಗಲೂ ಹೇಳೋಣ ನಮ್ಮ ಬದುಕಿಗೆ ಥ್ಯಾಂಕ್ ಯೂ ಲವ್ ಯೂ ಅಂತಾ .

ರೇಷ್ಮಾ ಕುಂದಾಪುರ