ಮಂಗಳೂರು: ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿ., ಬೆಂಗಳೂರು, ದಕ್ಷಿಣ ಕನ್ನಡ ಜಿಲ್ಲಾ ಸಹಕಾರ ಯೂನಿಯನ್ ನಿ ಮಂಗಳೂರು., ದ.ಕ. ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ನಿ., ಮಂಗಳೂರು ಇವರ ಸಂಯುಕ್ತಾಶ್ರಯದಲ್ಲಿ ದಿನಾಂಕ 11-01-2024 ರಂದು ಮಂಗಳೂರು ಮತ್ತು ಬಂಟ್ವಾಳ ತಾಲೂಕಿನ ಎಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿಯವರಿಗೆ ವಿಶೇಷ ತರಬೇತಿ ಕಾರ್ಯಗಾರ ದ.ಕ. ಸಹಕಾರಿ ಹಾಲು ಒಕ್ಕೂಟದ ತರಬೇತಿ ಕೇಂದ್ರದಲ್ಲಿ ನಡೆಯಿತು.

ದಕ್ಷಿಣ ಕನ್ನಡ ಸಹಕಾರಿ ಹಾಲು ಒಕ್ಕೂಟದ ಅಧ್ಯಕ್ಷರಾದ ಸುಚರಿತ ಶೆಟ್ಟಿರವರು ಕಾರ್ಯಕ್ರಮವನ್ನು ಉದ್ಘಾಟಿಸಿ ಹೈನೋದ್ಯಮದಲ್ಲಿ ಆರ್ಥಿಕ ಪ್ರಗತಿಗೆತಾವೆಲ್ಲರೂ ಕೈ ಸೇರಿಸಿ ಕ್ರಿಯಶೀಲವಾಗಿ ಸಂಸ್ಥೆ ದಕ್ಷತೆಯಿಂದ ಅಭಿವೃದ್ದಿ ಸಾಗಿಸಲು ಮೂಲಕ ಉಭಯ ಜಿಲ್ಲೆಗಳ ಹೈನುಗಾರಿಕೆಗಳ ಸಹಕಾರ ನೀಡಲು ಸಾಧ್ಯವಾಗುವಂತೆ ಕೆಲಸ ಕಾರ್ಯಗಳನ್ನು ರೂಪಿಸಿ ಎಲ್ಲರ ಸಹಕಾರದೊಂದಿಗೆ ಇನ್ನು ಹೆಚ್ಚು ಹಾಲು ಸಂಗ್ರಹಣೆ ಮಾಡಿ ನಮ್ಮ ಹಾಲು ಒಕ್ಕೂಟ ಇತರರಿಗೆ ಮಾದರಿಯಾಗುವಂತೆ ಶ್ರಮಿಸುವ ಎಂದರು.
ದ. ಕ ಸಹಕಾರಿ ಯೂನಿಯನ್ ನ ಆಧ್ಯಕ್ಷರಾದ ಬೆಳ್ಳಿಪ್ಪಾಡಿ ಪ್ರಸಾದ್ ಕೌಶಲ್ ಶೆಟ್ಟಿರವರು ಮಾತನಾಡುತ್ತಾ ತರಬೇತಿಗಳನ್ನು ಪಡೆದುಕೊಳ್ಳುವುದರಿಂದಾಗಿ ಅರಿವಿನ ಜ್ಞಾನ ಗಳಿಸುವಂತಾಗುತ್ತದೆ. ಇದರೊಂದಿಗೆ ಅವರವರ ಅನುಭವಗಳನ್ನು ಜೊತೆಗೂಡಿಸಿಕೊಂಡು ಯಾವ ಕ್ಷೆತ್ರದಲ್ಲಿ ಕೆಲಸ ಮಾಡಿತ್ತಿದ್ದಾರೆಯೂ ಅಲ್ಲಿ ಸಾಧನೆ ಗೈಯಲು ಸಾದ್ಯ ಸಹಕಾರ ಕಾಯ್ದೆ ಕಾನೂನಗಳಲ್ಲಿ ಇತ್ತಿಚಿಗೆ ಉಂಟಾಗಿರುವಂತಿದ್ದು ಪಡಿಗಳ ಬಗ್ಗೆ ಪ್ರತಿಯೊಬ್ಬರಿಗೂ ಇರಲೇಬೆಕಾಗಿರುತ್ತದೆ. ತಾವೆಲ್ಲರೂ ಇ ತರಬೇತಿ ಕಾರ್ಯಗಾರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು.
ಈ ತರಬೇತಿ ಶಿಬಿರದಲ್ಲಿ ದ.ಕ ಸಹಕಾರಿ ಯೂನಿಯನ್ ನಿ., ಮಂಗಳೂರು ಇದರ ನಿರ್ದೇಶಕರಾದ ಚಿತ್ತರಂಜನ್ ಬೋಳಾರ್, ಸಾವಿತ್ರಿ ರೈ, ದ.ಕ. ಸಹಕಾರಿ ಹಾಲು ಒಕ್ಕೂಟದ ನಿರ್ದೇಶಕರಾಧ ಸವಿತಾ ಎನ್ ಶೆಟ್ಟಿ , ವ್ಯವಸ್ಥಾಪಕ ನಿರ್ದೇಶಕರಾದ ವಿವೇಕ್ ಡಿ., ಹಾಗೂ ಸಂಪನ್ಮೂಲ ವ್ಯಕ್ತಿಗಳಾಗಿ ಡಾ| ರಾಮಕೃಷ್ಣ ಭಟ್, ವ್ಯವಸ್ಥಾಪಕರು ದ.ಕ. ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ನಿ.,ಡಾ| ಕೆ. ಚಂದ್ರಶೇಖರ್ ಭಟ್ ,ಉಪವ್ಯವಸ್ಥಾಪಕರು (ಶೇಖರಣೆ) ದ.ಕ. ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ನಿ., ಕೆ.ಸುಬ್ಬರಾವ್ (ನಿ) ಸಹಾಯಕ ವ್ಯವಸ್ಥಾಪಕರು, ದ.ಕ. ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ನಿ.,ಇವರು ಹಾಲಿನ ಗುಣಮಟ್ಟ, ಸಮರ್ಪಕವಾದ ಹಾಲು ಪರೀಕ್ಷೆ ಹಾಗೂ ಉತ್ತಮದರ ನೀಡುವ ಬಗ್ಗೆ ಹೈನುರಾಸುಗಳ ಆರೋಗ್ಯ ನಿರ್ವಹಣೆಯಲ್ಲಿ ಅನುಸರಿಸಬೇಕಾದ ಕ್ರಮಗಳು, ಹೆಣ್ಣು ಕರುಗಳ ಪಾಲನೆ ಪೋಷಣೆ ಮತ್ತು ಹೈನುರಾಸುಗಳಿಗೆ ಪಶು ಆಹಾರ ಮೇವಿನ ನಿರ್ವಹಣೆ ಬಗ್ಗೆ ಸಹಕಾರ ಸಂಘಗಳ ಲೆಕ್ಕ ಪತ್ರ ನಿರ್ವಹಣೆ, ಲೆಕ್ಕಪರಿಶೋದನಾ ವರದಿ ಸಿದ್ದಪಡಿಸಲು ಅನುಸರಿಸಬೇಕಾದ ಕ್ರಮಗಳು ಹಾಗೂ ಸಭೆಗಳ ವಿಧಾನಗಳ ಬಗ್ಗೆ ಮಾಹಿಗಳನ್ನು ನೀಡಿದರು.
ದ.ಕ. ಜಿಲ್ಲಾ ಸಹಕಾರಿ ಯೂನಿಯನ್ ನಿರ್ದೇಶಕರಾದ ಸಾವಿತ್ರಿ ರೈ ಇವರು ಸ್ವಾಗತಿಸಿದರು ,ಯೂನಿಯನ್ ನ ಮುಖ್ಯಕಾರ್ಯ ನಿರ್ವಹಣಾಧಿಕಾರಿ ಎಸ್.ವಿ, ಹೀರೆಮಠ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.