ಕಾರ್ಕಳದ ಕ್ರಿಯೇಟಿವ್ ಪದವಿ ಪೂರ್ವ ಕಾಲೇಜಿನಲ್ಲಿ ವಿವಿಧ ಹಂತಗಳಲ್ಲಿ ಶಿಕ್ಷಕರ - ಪಾಲಕರ ಸಭೆಯನ್ನು ಕಾಲೇಜಿನ ಸಪ್ತಸ್ವರ ಸಭಾಂಗಣದಲ್ಲಿ ನಡೆಸಲಾಯಿತು. ವಿದ್ಯಾರ್ಥಿಗಳ ಶೈಕ್ಷಣಿಕ ಸಾಧನೆ, ಜೀವನ ಮೌಲ್ಯಗಳನ್ನು ಕುರಿತು ನಡೆದ ಕಾರ್ಯಕ್ರಮವು ಶಿಕ್ಷಕರು, ಪಾಲಕರು ಹಾಗೂ ವಿದ್ಯಾರ್ಥಿಗಳ ನಡುವಿನ ಬಾಂಧವ್ಯವನ್ನು ಗಟ್ಟಿಗೊಳಿಸುವ ವೇದಿಕೆಯಾಯಿತು.

ಸಹಸಂಸ್ಥಾಪಕರುಗಳಾದ ವಿದ್ವಾನ್ ಗಣಪತಿ ಭಟ್ ರವರು ಮಾತನಾಡಿ 'ವಿದ್ಯಾರ್ಥಿಗಳ ಸಮಗ್ರ ಬೆಳವಣಿಗೆಗೆ ಶಿಕ್ಷಣ ಸಂಸ್ಥೆ, ಪೋಷಕರು ಮತ್ತು ಶಿಕ್ಷಕರ ತ್ರಿಕೋನ ಸಹಕಾರ ಅತ್ಯವಶ್ಯಕ' ಎಂದು ಹೇಳಿದರು.
ಅಶ್ವತ್ ಎಸ್.ಎಲ್ ರವರು 'ಶಿಕ್ಷಕರು ಮತ್ತು ಪಾಲಕರು ಇಬ್ಬರು ಒಂದೇ ಹಾದಿಯಲ್ಲಿ ನಡೆದು ವಿದ್ಯಾರ್ಥಿಗೆ ಮಾರ್ಗದರ್ಶನ ನೀಡಿದಾಗ, ಸಮಾಜಕ್ಕೆ ಒಳ್ಳೆಯ ನಾಗರಿಕರನ್ನು ರೂಪಿಸಲು ಸಾಧ್ಯವಾಗುತ್ತದೆ' ಎನ್ನುತ್ತಾ ಕ್ರಿಯೇಟಿವ್ ನ ಕಾರ್ಯ ಯೋಜನೆಗಳ ಬಗ್ಗೆ ವಿವರಣೆಗಳನ್ನು ನೀಡಿದರು.
ಡಾ. ಬಿ. ಗಣನಾಥ ಶೆಟ್ಟಿ ರವರು ಮಾತನಾಡುತ್ತಾ ' ವಿದ್ಯಾರ್ಥಿಗಳು ತಮ್ಮ ಸಮಯವನ್ನು ಸದುಪಯೋಗಪಡಿಸಿಕೊಂಡು, ಶ್ರದ್ಧೆ ಮತ್ತು ಶ್ರಮದಿಂದ ಓದುತ್ತ ಜೀವನದ ಎಲ್ಲಾ ಕ್ಷೇತ್ರಗಳಲ್ಲಿ ಯಶಸ್ವಿಯಾಗಬೇಕು' ಎಂದು ಕರೆ ನೀಡಿದರು.
ಗಣಪತಿ ಭಟ್ ಕೆ.ಎಸ್ ರವರು ಸಮಗ್ರ ಶೈಕ್ಷಣಿಕ ವಿವರಗಳನ್ನು ನೀಡಿ, ಶಿಕ್ಷಣ ಜೀವನಕ್ಕೆ ಬೆಳಕಾಗಲಿ ಎಂದು ಹಾರೈಸಿದರು.
ಕಾರ್ಯಕ್ರಮದಲ್ಲಿ ಆಡಳಿತ ಮಂಡಳಿಯವರು, ಉಪನ್ಯಾಸಕ- ಉಪನ್ಯಾಸಕೇತರ ವರ್ಗದವರು, ವಿದ್ಯಾರ್ಥಿಗಳು ಹಾಗೂ ಪೋಷಕ ವೃಂದದವರು ಪಾಲ್ಗೊಂಡಿದ್ದರು. ಉಪನ್ಯಾಸಕಿ ಸ್ಮಿತಾ ಹಾಗೂ ಪ್ರಿಯಾಂಕ ತೀರ್ಥರಾಮ್ ರವರು ಕಾರ್ಯಕ್ರಮ ನಿರ್ವಹಿಸಿಕೊಟ್ಟರು.