ಕಾರ್ಕಳ, ಜ 06: ಕಾರ್ಕಳ ಪುರಸಭೆ ವ್ಯಾಪ್ತಿಯಲ್ಲಿ ಕರ್ನಾಟಕ ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿ ಕುಡಿಯುವ ನೀರು ಸರಬರಾಜಿಗಾಗಿ ಕಳೆದ ಒಂದು ವರ್ಷಗಳಿಂದ ನಿರಂತರವಾಗಿ ಅವೈಜ್ಞಾನಿಕವಾಗಿ ರಸ್ತೆ ಅಗೆದು ಹಾಲಿ ಇರುವ ಪೈಪ್ ಲೈನ್ ಕಿತ್ತುಹೋಗೇದು ನಳ್ಳಿನೀರು ಸಂಪರ್ಕ ಕಡಿದು ಹೋಗಿದೆ ಹಾಗೂ ರಸ್ತೆಗಳು ಸಂಪೂರ್ಣ ಹದಗೆಟ್ಟಿದೆ ಇದಕ್ಕೆ ಜಲಮಂಡಳಿ ನೇರ ಹೊಣೆ ಎಂದು ಆರೋಪಿಸಿ ಕಾರ್ಕಳ ಪುರಸಭೆ ಮಾಜಿ ಅಧ್ಯಕ್ಷೆ, ನಿಕಟ ಪೂರ್ವ ಸದಸ್ಯೆ ಪ್ರತಿಮಾ ಮೋಹನ್ ರವರ ನೇತೃತ್ವದಲ್ಲಿ ಪುರಸಭೆ ಕಚೇರಿಗೆ ಸಾರ್ವಜನಿಕರು ಮುತ್ತಿಗೆ ಹಾಕಿದರು.

ಕಾರ್ಕಳ ಪುರಸಭೆಯ ಎಲ್ಲಾ ರಸ್ತೆಗಳು ಅಮೃತ ಯೋಜನೆ ಕಳಪೆ ಕಾಮಗಾರಿಯಿಂದಾಗಿ ಹದಗೆಟ್ಟು ಹೋಗಿದೆ ಬಂಗ್ಲೆಗುಡ್ಡೆ, ಪತ್ತೊಂಜಿಕಟ್ಟೆ, ಗುಂಡ್ಯ, ಕಜೆ ಪರಿಸರದಲ್ಲಿ ನೀರಿಗಾಗಿ ಜನರು ಪರಿತಪಿಸುತ್ತಿದ್ದಾರೆ ನಳ್ಳಿಗಳಲ್ಲಿ ಬರುವ ನೀರು ಕುಡಿಯಲು ಅಸಾಧ್ಯ ಬರಿ ಕೆಸರು ನೀರು ಬರುತ್ತಿದೆ ಇದಕ್ಕೆ ಕರ್ನಾಟಕ ನಗರ ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿ ನೇರ ಹೊಣೆ ಕೂಡಲೇ ಸಂಬಂಧ ಪಟ್ಟ ಇಲಾಖೆ ಕ್ರಮ ಕೈಗೊಳ್ಳಬೇಕು ತಪ್ಪಿದಲ್ಲಿ ಮಂಗಳೂರು ನಗರ ನೀರು ಸರಬರಾಜು ಮಂಡಳಿ ಕಚೇರಿಗೆ ಮುತ್ತಿಗೆ ಹಾಕಲಾಗವುದು ಎಂದು ಪ್ರತಿಮಾ ರಾಣೆ ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಮಾಜಿ ಅಧ್ಯಕ್ಷೆ ರೆಹಮತ್ ನವೀದ್ ನಾಸಿರ್ ಶೇಕ್, ನಿಕಟ ಪೂರ್ವ ಸ್ಥಾಯಿ ಸಮಿತಿ ಅಧ್ಯಕ್ಷ ಪ್ರದೀಪ್ ಸದಸ್ಯರಾದ ವಿವೇಕಾನಂದ ಶೆಣೈ, ಸಾಮಾಜಿಕ ಮುಂದಾಳು ಪ್ರಸನ್ನ, ಇನ್ನಿತರರು ಉಪಸ್ಥಿತರಿದ್ದರು.