ಮೂಡುಬಿದಿರೆ: ವರ್ಷದ ಕೇವಲ ಎರಡು ತಿಂಗಳು ದುಡಿದು ವರ್ಷವಿಡಿ ಕುಳಿತು ಉಣ್ಣಬಹುದಾದ ಉದ್ಯಮ ಕೃಷಿ ಮಾತ್ರ. ಕೃಷಿಯಲ್ಲಿ ನಷ್ಟದ ಬಾಬ್ ಇಲ್ಲ. ಆಹಾರಕ್ಕಾಗಿ ಕೃಷಿಯೇ ಜೀವಾಳ. ಆಳ್ವಾಸ್ ನಲ್ಲಿ ಸ್ವದೇಶಿ ಚಿಂತನೆಯೊಂದಿಗೆ ಯುವಶಕ್ತಿಗೆ ಸಾಕಷ್ಟು ಪ್ರಯೋಜನ, ಉತ್ತೇಜನ, ವಿಪುಲ ಅವಕಾಶಗಳು ಲಭ್ಯವಾಗಿದೆ ಎಂದು ಬಂಟ್ವಾಳದ ಶಾಸಕ, ಹಡಿಲು ಭೂಮಿಯನ್ನು ಉಳುಮೆ ಮಾಡಿಸಿ ಭತ್ತ ಬೆಳೆದು ತೋರಿಸುತ್ತಿರುವ ತುಳುನಾಡ ಕೃಷಿಕ ರಾಜೇಶ್ ನಾಯಕ್ ಅವರು ದೀಪ ಬೆಳಗಿ ಕಾರ್ಯಕ್ರಮ ಉದ್ಘಾಟಿಸಿ ಅಭಿನಂದಿಸಿದರು.

ಮೂಡುಬಿದಿರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ, ಆಹಾರೋತ್ಸವ ಮಹಾಮೇಳ ಸಮಿತಿ, ಕೃಷಿ ಇಂಜಿನಿಯರಿಂಗ್ ವಿಭಾಗ, ಆಳ್ವಾಸ್ ತಾಂತ್ರಿಕ ಕಾಲೇಜು ಇವರ ಸಂಯುಕ್ತ ಆಶ್ರಯದಲ್ಲಿ ಕೃಷಿ -ಋಷಿ ಮಿಜಾರು ಗುತ್ತು ಆನಂದ ಆಳ್ವರ ಸ್ಮರಣಾರ್ಥ "ಸಮೃದ್ಧಿ " ಎರಡನೇ ವರ್ಷದ ಹಲಸು ವೈವಿಧ್ಯಮಯ ಹಣ್ಣುಗಳ ಆಹಾರೋತ್ಸವ ಹಾಗೂ ಕೃಷಿ ಪರಿಕರಗಳ ಪ್ರದರ್ಶನ ಮತ್ತು ಮಾರಾಟದ ಮೂರು ದಿನಗಳ ಮಹಾಮೇಳವನ್ನು ಜೂನ್ 14ರಂದು ಮೂಡುಬಿದಿರೆಯ ವಿದ್ಯಾಗಿರಿಯಲ್ಲಿ ಎಂ.ಕೆ. ಅಮರನಾಥ ಶೆಟ್ಟಿ ಕೃಷಿ ಸಭಾಭವನದಲ್ಲಿ ಉದ್ಘಾಟಿಸಿದರು.

ಜೈನ ಮಠದ ಸ್ವಸ್ತಿ ಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಚಾರ್ಯವರ್ಯ ಸ್ವಾಮೀಜಿ ತಮ್ಮ ಆಶೀರ್ವಚನದಲ್ಲಿ ಎಂದೆಂದೂ ಕೃಷಿಕನನ್ನು ಕೈ ಹಿಡಿಯುವ ಕೃಷಿಯಿಂದ ಆತನ ಬದುಕು ಹಸನಾಗಿದೆ. ಬದುಕಿಗೆ ಅನಿವಾರ್ಯವಾದ ಎಲ್ಲ ಸಂಗತಿಗಳು ಪ್ರಾಯೋಗಿಕವಾಗಿ ವಿದ್ಯಾಗಿರಿಯ ವಿದ್ಯಾರ್ಥಿಗಳಿಗೆ ಲಭ್ಯವಾಗುತ್ತಿರುವುದು ಸಂತೋಷಕರ ಸಂಗತಿ ಎಂದರು. ಮಳೆಗಾಲದ ಹಸಿವು ನೀಗಿಸುವ ಹಲಸು, ಸದಾ ಕೃಷಿಕನನ್ನು ಸಲಹುತ್ತದೆ. ಕೃಷಿ ಹಾಗೂ ಋಷಿ ಎರಡೂ ತ್ಯಾಗದ ಸಂಕೇತವಾದುದರಿಂದ ಕೃಷಿಕ ಭಕ್ತಿಯಿಂದ ಏನನ್ನೇ ಬೆಳೆ ಬೆಳೆದರೂ, ಕೃಷಿ ಮಾಡಿದರೂ, ಭಾರತೀಯ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಮಹಾನ್ ದಾತಾರ. ಎಂದು ಮಾಜಿ ಬಿಜೆಪಿ ರಾಜ್ಯಾಧ್ಯಕ್ಷ ಸಂಸದ ನಳಿನ್ ಕುಮಾರ್ ಕಟೀಲು ಅಧ್ಯಕ್ಷೀಯ ಭಾಷಣದಲ್ಲಿ ಸಾರಿದರು.


ಬಂಟ್ವಾಳ ಅಳಿಕೆಯ ಉತ್ತಮ ಕೃಷಿಕ ಮುಳಿಯ ವೆಂಕಟ ಕೃಷ್ಣಶರ್ಮ ಅವರು ತಮ್ಮ ಮುನ್ನೋಟದ ಮಾತುಗಳಿಂದ ಕೃಷಿಕರ ಬದುಕನ್ನು ತೆರೆದಿಟ್ಟರು.



ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ ಮೋಹನ್ ಅಳ್ವ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿ- ವರುಷಕ್ಕೆ ಎರಡು ಬಾರಿ ಹಲಸು, ಕರಕುಶಲ, ಕೃಷಿ, ಆಹಾರ ಉತ್ಸವವನ್ನು ನಡೆಸಿ ಕೃಷಿ ಹಾಗೂ ಕೃಷಿಕರನ್ನು ಪ್ರೋತ್ಸಾಹಿಸಲಾಗುತ್ತಿದೆ ಎಂದರು. ವೇದಿಕೆಯಲ್ಲಿ ಮಾಜಿ ಸಚಿವ ಅಭಯಚಂದ್ರ ಜೈನ್, ಉದ್ಯಮಿ ಶ್ರೀಪತಿ ಭಟ್, ಚೌಟರ ಅರಮನೆಯ ಕುಲದೀಪ್ ಎಂ, ಎಂಸಿಎಸ್ ಬೇಂಕಿನ ಅಧ್ಯಕ್ಷ ಬಾಹುಬಲಿ ಪ್ರಸಾದ್, ಸಿಇಓ ಚಂದ್ರಶೇಖರ್ ಎಂ, ಸಹಾಯಕ ಅರಣ್ಯಾಧಿಕಾರಿ ಸತೀಶ್, ಹಿರಿಯ ವಿಜ್ಞಾನಿ ಡಾ. ಬಿ ಧನಂಜಯ್, ಜಂಟಿ ನಿರ್ದೇಶಕ ಕೆಂಪೇಗೌಡ, ಗ್ರಾಮ ಅಭಿವೃದ್ಧಿ ಯೋಜನೆಯ ಮನೋಜ್ ಮಿನೇಜಸ್, ತೋಟಗಾರಿಕೆ ಇಲಾಖೆಯ ಮಂಜುನಾಥ್, ಇತರರು ಹಾಜರಿದ್ದರು. ವೇಣುಗೋಪಾಲ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.
ಸಚಿತ್ರ ವರದಿ: ರಾಯಿ ರಾಜಕುಮಾರ್ ಮೂಡುಬಿದಿರೆ