ಕಿನ್ನಿಗೋಳಿ: ಎರಡು ದಿನದ ಅಡ್ವಾನ್ಸ್ ಲೆವೆಲ್ ಎಲ್ಇಡಿ, ಸ್ಮಾರ್ಟ್,ಆಂಡ್ರಾಯ್ಡ್ ಟಿವಿಯ ಮದರ್ ಬೋರ್ಡ್ ಚಿಪ್ ಲೆವೆಲ್ ಮತ್ತು ಪ್ಯಾನಲ್ ಟ್ರೈನಿಂಗ್ ಎಂ ಆರ್ ಪೂಂಜಾ ಐಟಿಐ ಕಿನ್ನಿಗೋಳಿಯಲ್ಲಿ ಉದ್ಘಾಟನೆ ನಡೆಯಿತು. 

ಕಾರ್ಯಕ್ರಮವನ್ನು ಪ್ರಾಂಶುಪಾಲರಾದ ಹರಿ ಹೆಚ್ ಉದ್ಘಾಟಿಸಿದರು. ಮುಖ್ಯ ಅತಿಥಿಯಾಗಿ ಜೋನ್ 15  ರ ವಲಯ ಕಾರ್ಯದರ್ಶಿಯಾದ (Zone Secretary) JCI PPP ಸೌಮ್ಯ ರಾಕೇಶ್ ಉಪಸ್ಥಿರವಿದ್ದರು. ಗೌರವ ಅತಿಥಿಯಾಗಿ ಜೆಜೆಸಿ ಕಾರ್ಡಿನೇಟರ್ ಜೆಸಿ ಶಶಾಂಕ್ ಡಿ ಮತ್ತು ಕಾಲೇಜಿನ ಪ್ರಾಧ್ಯಾಪಕ ವರ್ಗದವರು ಉಪಸ್ಥಿತರಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜೆಸಿಐ ಮೂಡಬಿದ್ರಿ ತ್ರಿಭುವನ್ ನ ಅಧ್ಯಕ್ಷರು ಮತ್ತು ರಾಜ್ಯಮಟ್ಟದ ಟಿವಿ ಟ್ರೈನರ್ ಪ್ರದೀಪ್ ಕುಮಾರ್ ವಹಿಸಿದರು. 36 ಕ್ಕೂ ಮೇಲ್ಪಟ್ಟು ವಿದ್ಯಾರ್ಥಿಗಳು ತರಬೇತಿಯಲ್ಲಿ ಭಾಗವಹಿಸಿದರು.