ಬರವಣಿಗೆ ಎಂದರೆ ತಪಸ್ಸು ಮನಸ್ಸಿನ ಹುಮ್ಮಸ್ಸು... ಕಂಡಿದ್ದು ಕೇಳಿದ್ದು ಹೇಳದೆ ಉಳಿದದ್ದು ಭಾವಿಸಿದ್ದು ತಿಳಿದಿದ್ದು ಕಲ್ಪಿಸಿದ್ದು ಅನುಭವಿಸಿದ್ದು ಅಕ್ಷರವಾಗಿಸೊದು ಅಷ್ಟು ಸುಲಭದ ಮಾತಲ್ಲ, ಬರಹಗಾರನಿಗೆ ಭಯವೇ ಶತ್ರುವಂತೆ ಬರೆದ ಸಾಲು ಮತ್ತೊಬ್ಬರೆದುರು ತೆರೆದಿಡಲು ಭಯ. ಇಂತಹ ಅನುಭವ ಬರವಣಿಗೆಯ ಪ್ರಾರಂಭದಲ್ಲಿ ನನಗೂ ಆಗಿದೆ. ಅನೇಕ ಸಾರಿ ನನ್ನ ಆಲೋಚನೆನೆಗಳಿಗೆ ಶೃಂಖಲೆಗಳು ಸುತ್ತುವರಿಸಿಕೊಂಡಾಗ ಅವು ಲೇಖನಗಳಾಗಲೂ ಸಾಧ್ಯವಾಗಲಿಲ್ಲ. ಏಕೆಂದರೆ ಬರಹಗಾರನ ಆಲೋಚನೆಗಳಿಗೆ ಸ್ವಾತಂತ್ರ್ಯವಿರಬೇಕು ನಾವು ಬರೆಯುವುದು ಅವರೇನು ತಿಳಿದುಕೊಳ್ಳುವರೊ ಇವರೇನು ತಿಳಿದುಕೊಳ್ಳುವರೊ ಎಂಬುವ ಭಯದಲ್ಲಿ ಬರೆಯುವುದೇ ಇಲ್ಲ ಭಯವನ್ನ ಮೆಟ್ಟಿನಿಂತಾಗ ಉತ್ತಮ ಬರಹಗಾರನಾಗಲೂ ಸಾಧ್ಯ. ಓದಿದವರ ಪ್ರತಿಕ್ರೀಯೆ ಹೇಗಿರುತ್ತೊ ಈ ಯೋಚನೆಗಳು ಯಾವತ್ತೂ ಬರಹಗಾರರಾಗಲೂ ಬಿಡುವುದಿಲ್ಲ ಬರಹಗಾರನಿಗೆ ಬಂಧನ ಬೇಕಿಲ್ಲ...
ಬರವಣಿಗೆಯಲ್ಲಿ ತೊಡಗಲು ಏಕಾಗ್ರತೆ ತಲ್ಲಿನತೆ ತಾಳ್ಮೆ ಲಕ್ಷ್ಯ ಅತ್ಯಗತ್ಯ
ನಮ್ಮನ್ನ ನಾವು ಬರವಣಿಗೆಯಲ್ಲಿ ತೊಡಗಿಸಿಕೊಂಡು ಮತ್ತೆ ಅದರಿಂದ ದೂರವಾದಾಗ ನಮ್ಮ ಆಲೋಚನೆಗಳಿಗು ತುಕ್ಕು ಹಿಡಿಯುತ್ತೆನೊ ಎನಿಸಿ ಬಿಡುತ್ತದೆ ಇನ್ನೂ ನನ್ನಿಂದ ಬರೆಯಲು ಸಾಧ್ಯನೇ ಇಲ್ಲವೆಂದು ಕೂತಾಗ ನಮ್ಮ ಮನಸ್ಸು ಸಣ್ಣ ಸಣ್ಣ ಮಾತುಗಳ ಸುತ್ತ ಗಿರಕೆ ಹೊಡಿಯುತ್ತಲೆ ದೊಡ್ಡ ಕಲೆಯನ್ನ ಮರೆಮಾಚಿ ಬಿಡುತ್ತೆವೆ. ನಾನೆ ಬರೆದ ಬರಹಗಳ ಪುಟಗಳು ತಿರುವಿಸಿ ಆ ನೆನಪುಗಳ ಮೆಲಕು ಹಾಕಿದಾಗ ನನ್ನಲ್ಲಿ ಕಳೆದು ಹೋದ ನನ್ನನ್ನ ಮತ್ತೆ ಹುಡುಕುಲಾರಂಭಿಸುತ್ತೆನೆ...ಪ್ರತಿಯೊಂದರಲ್ಲೂ ಸಕಾರಾತ್ಮಕ ಯೋಚಿಸುವಂತೆ ಮನಸ್ಸಿಗೆ ಉಲ್ಲಾಸದಿಂದಿರಿಸುವ ಬರವಣಿಗೆಯಲ್ಲಿ ಅದೆಷ್ಟು ಶಕ್ತಿ ಅಲ್ಲವೇ...?
✍ಅಂಜಲಿ ಶ್ರೀನಿವಾಸ