ಮಂಗಳೂರು : ಇಷ್ಟೊಂದು ಅತಿವೃಷ್ಟಿಯಿಂದ ರಾಜ್ಯದಲ್ಲಿ ಅದರಲ್ಲೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಪಾರ ಹಾನಿ ಆಗಿದ್ದರೂ ಸರಕಾರವಾಗಲಿ, ಉಸ್ತುವಾರಿ ಸಚಿವರಾಗಲಿ ಪರಿಹಾರದತ್ತ ಭೇಟಿ ನೀಡಿಲ್ಲ; ಕೇಂದ್ರದಿಂದ ಪರಿಹಾರಕ್ಕೂ ಮನವಿ ಮಾಡಿಲ್ಲ. ಈ ನಿಟ್ಟಿನಲ್ಲಿ ಬಿಜೆಪಿ ಸಂಪೂರ್ಣ ವಿಫಲವಾಗಿದೆ ಮತ್ತು ಜನರೂ ಈ ಸರಕಾರದ ಮೇಲೆ ನಂಬಿಕೆ ಕಳೆದುಕೊಂಡಿದ್ದಾರೆ ಎಂದು ಮಾಜೀ ಮಂತ್ರಿ ಯು. ಟಿ. ಖಾದರ್ ಹೇಳಿದರು.

ಕೇಂದ್ರದ ಗೃಹ ಸಚಿವರು ಬಂದಾಗ ಅವರ ಪಕ್ಷದ ಬಗೆಗೆ ಮಾತನಾಡಿದರು. ಅತಿ ಮಳೆಯಿಂದ ಆದ ಹಾನಿಯ ಬಗೆಗೆ ಮಾತನಾಡಿಲ್ಲ. ಗೃಹ ಸಚಿವರ ಕೈಯಲ್ಲೇ ವಿಪತ್ತು ಪರಿಹಾರ ನಿಧಿ ಇದೆ. ಅವರು ಬಂದಾಗಲೂ ಅವರಿಂದ ಪರಿಹಾರ ಕೇಳದಿದ್ದರೆ ಹೇಗೆ? ಈ ಸರಕಾರ 25 ಸಂಸದರು ಸುಮ್ಮನೆ ಒಳಗೆ ಕುಳಿತು ಕೊಳ್ಳಲು ಆಯ್ಕೆಯಾಗಿದ್ದಾರೆಯೇ ಎಂದು ಖಾದರ್ ಕೇಳಿದರು.

ಕೇಂದ್ರದಿಂದ ರಾಜ್ಯದ ಪಾಲು ಕೇಳಲು ಇವರಿಗೆ ನಾಲಿಗೆ ಇಲ್ಲದಿದ್ದರೆ ಸರ್ವ ಪಕ್ಷಗಳ ತಂಡ ಒಯ್ಯಲಿ. ನಾವು ಕೇಳುತ್ತೇವೆ. ಸುಳ್ಯ ಸಂಪಾಜೆ ಪ್ರದೇಶದಲ್ಲಿ ಭಾರೀ ಹಾನಿ ಆಗಿದೆ. ನಮ್ಮ ಮೈತ್ರಿ ಸರಕಾರ ಇದ್ದಾಗ ಎಲ್ಲರಿಗೂ ಪರಿಹಾರವನ್ನು ನಾನು ಸಹಿತ ತಿರುಗಿ ನೀಡಿದ್ದೇವೆ. ಬಿಜೆಪಿ ಸರಕಾರದ ಕೈಲಾಗತನ ಸರಿಯಲ್ಲ ಎಂದು ಖಾದರ್ ಹೇಳಿದರು.

ಕೆಲವು ಜನರಿಂದಾಗಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಶಾಂತಿ ಹೆಚ್ಚಿದೆ. ವಾಹನಗಳಲ್ಲಿ ತುರ್ತು ಹೋಗುವವರನ್ನು ಕೂಡ ತಡೆದು ನಿಲ್ಲಿಸಿ ವೈದ್ಯರು ಕೆಲಸ ಮಾಡದಂತೆ ತಡೆಯುವುದು ಯಾವ ನೀತಿ. ಜಿಲ್ಲೆಯಲ್ಲಿ ಬಂಡವಾಳ ಹೂಡಿಕೆ ಆಗದಂತೆ ಬಿಜೆಪಿ ನೀತಿ ಇದೆ. ಬಿಜೆಪಿ ಸರಕಾರವು 3% ಸಮಾಜ ವಿರೋಧಿ ಶಕ್ತಿಗಳಿಗೆ ಹೆದರಿ 97% ಜನರಿಗೆ ತೊಂದರೆ ಕೊಟ್ಟರೆ ಹೇಗೆ? ಬಿಜೆಪಿ ಸರಕಾರವು ಜಿಲ್ಲೆಯ ಜನಜೀವನವು ಸಹಜವಾಗಿ ಕಾರ್ಯ ಎಸಗುವಂತೆ ಆಡಳಿತ ನೀಡಲು ಒತ್ತಾಯಿಸುವುದಾಗಿ ಖಾದರ್ ಹೇಳಿದರು.

ನಮ್ಮ ಸರಕಾರವು ಇದ್ದಾಗ ಮಾಡಿದ ನಿಯಮದಂತೆ ತಾತ್ಕಾಲಿಕ ರೂ. 10,000 ಪರಿಹಾರದಲ್ಲೇ ಎಲ್ಲ ಮುಗಿಸಲು ನೋಡುತ್ತಿದ್ದಾರೆ. ಅದು ಸರಿಯಲ್ಲ. ನಾವು ಶರತ್ ಮಡಿವಾಳನಿಂದ ಹಿಡಿದು, ರಾವ್, ಮುಸ್ಲಿಂ ಎಲ್ಲರಿಗೂ ಸಮಾನ ಆದ್ಯತೆಯೊಡನೆ ನೀಡಿದ್ದೇವೆ. ಫಾಜಿಲ್ ಮನೆಗೆ ಬರುವುದಾಗಿ ಮುಖ್ಯಮಂತ್ರಿ ಹೇಳಿದ್ದಾರೆ. ಬಂದಾಗ ಪರಿಹಾರ ಕೇಳೋಣ ಎಂದೂ ಅವರು ಹೇಳಿದರು.