ಬೆಂಗಳೂರಿನ ಬಸವನಗುಡಿಯ ಈಜು ಕೇಂದ್ರದಲ್ಲಿ ಜುಲೈ 9 ರಿಂದ 13 ರವರೆಗೆ ಜರುಗಿದ ರಾಜ್ಯಮಟ್ಟದ ಜೂನಿಯರ್ ಮತ್ತು ಸಬ್ ಜೂನಿಯರ್ ಈಜು ಸ್ಪರ್ಧೆಯಲ್ಲಿ ಮಂಗಳೂರಿನ ವೀ ಒನ್ ಅಕ್ವಾ ಸೆಂಟರ್ ನ ಈಜು ಪಟುಗಳು 6 ಚಿನ್ನ, 8 ಬೆಳ್ಳಿ ಮತ್ತು 5  ಕಂಚಿನ ಪದಕ ಗೆದ್ದಿದ್ದಾರೆ 13 ಈಜು ಪಟುಗಳು ಅಂತಿಮ ಹಂತದ 8 ಫೈನಲ್ ಸ್ಪರ್ಧಿಗಳಲ್ಲಿ ಒಬ್ಬರಾಗಿ ಮೂಡಿ ಬಂದಿದ್ದಾರೆ . ರಿಯಾನಾ ಧೃತಿ ಫರ್ನಾಂಡಿಸ್,  ಶ್ವಿತಿ ದಿವಾಕರ್ ಸುವರ್ಣ ಇವರು ಅಹ್ಮದಾಬಾದ್ ಮತ್ತು ಬೆಂಗಳೂರಿನಲ್ಲಿ ನಡೆಯಲಿರುವ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ

ನೈತಿಕ N ಒಂದು ಬೆಳ್ಳಿ,  ಸಿದ್ಧಿ ಶೆಟ್ಟಿ  ಎರಡು ಚಿನ್ನ,  ಶ್ವಿತಿ ದಿವಾಕರ್ ಮೂರು ಚಿನ್ನ, ಎರಡು ಬೆಳ್ಳಿ ಒಂದು ಕಂಚಿನ ಪದಕ, ಅವನೀಶ್ ನಾಯಕ್ ಸುಜೀರ್, ಒಂದು ಚಿನ್ನ ಎರಡು ಬೆಳ್ಳಿ ಎರಡು ಕಂಚು,  ರಿಯಾನಾ  ದೃತಿ ಫರ್ನಾಂಡಿಸ್ ಮೂರು ಬೆಳ್ಳಿ ಒಂದು ಕಂಚು, ನವ್ಯ ಆಚಾರ್ ಒಂದು ಕಂಚಿ ನ ಪದಕ ಪಡೆದಿದ್ದಾರೆ

ಅಲ್ಲದೆ  ಕೇರಳ,  ಆಂಧ್ರಪ್ರದೇಶ, ಮಧ್ಯ ಪ್ರದೇಶ, ತೆಲಂಗಾಣ ರಾಜ್ಯವನ್ನು ಪ್ರತಿನಿಧಿಸುತ್ತಿರುವ ಕುಶ್ಶಾಂಕ್ ಪರಮಾರ್, ಸಿದ್ಧಾಂತ ಸಂಕುಸೂರೆ, ಸೈನಾ ಪಾಂಚೋಲಿ, ಆದಿದೇವ್ ವಿ ಪ್ರದೀಪ್, ಸಂಪತ್ ಕುಮಾರ್ ಯಾದವ್, ತೀರ್ಥೂ ಸಾಮದೇವ್ , ಯಜ್ಞಸಾಯಿ, ಸೈನಾ ಪಾಂಚೋಲಿ, ಸಾಯಿ ಸೂರ್ಯ, ಎಸ್ ಕಾರ್ತಿಕೇಯ, ಸರಯು, ಷಣ್ಮುಖ, ಪೃಥ್ವಿರಾಜ್, ಸೋನಾಕ್ಷಿ  ಇವರು ಅಹ್ಮದಾಬಾದ್ ನಲ್ಲಿ ಜರಗಲಿರುವ ರಾಷ್ಟ್ರಮಟ್ಟದ ಜೂನಿಯರ್ ಆಕ್ವಾಟಿಕ್ ಚಾಂಪಿಯನ್ ಶಿಪ್ ಗೆ ಆಯ್ಕೆಯಾಗಿದ್ದಾರೆ

ಇವರನ್ನು ಸಂತ ಅಲೋಶಿಸ್ ಸಮೂಹ ಸಂಸ್ಥೆಗಳ ರೆಕ್ಟರ್ ರವರೆಂಡ್ ಫಾದರ್. ಮೆಲ್ವಿನ್ ಜೋಸೆಫ್ ಪಿಂಟೊ , ಯುವ ಸಬಲೀಕರಣ ಇಲಾಖೆಯ ಉಪನಿರ್ದೇಶಕ ಪ್ರದೀಪ್ ಡಿಸೋಜಾ ಇವರು ಈಜು ಪಟುಗಳನ್ನು ಅಭಿನಂದಿಸಿದರು . ಇವರಿಗೆ ತರಬೇತುದಾರರಾದ ಅಭಿಲಾಶ್ ಮತ್ತು ಲೋಕರಾಜ್ ವಿ ಎಸ್ ವಿಟ್ಲ,ಅಲ್ಲೆನ್, ಆರೋಮಲ್, ಗಗನ್ ಜಿ ಪ್ರಭು, ಹಾಗೂ ಸಂಜಯ್ ಇವರು ತರಬೇತಿ ನೀಡಿದ್ದರು. ವಿ ಒನ್ ಆಕ್ವಾ ಸಂಸ್ಥೆಯ ನಿರ್ದೇಶಕರಾದ ನವೀನ್ ಮತ್ತು ಮತ್ತು ರೂಪ ಜಿ ಪ್ರಭು ಅವರು ಮಾರ್ಗದರ್ಶನ ನೀಡಿದ್ದರು.