ಲೊರೆಟ್ಟೊ,ಬಂಟ್ವಾಳ : 14/12/2023  ರಂದು ಬಂಟ್ವಾಳ ತಾಲೂಕಿನ ಬಿ.ಸಿ.ರೋಡಿನ ಸ್ಪರ್ಶ ಕಲಾ ಮಂದಿರದಲ್ಲಿ ಯಮಾತೋ ಶೋಟೋಕಾನ್ ಕರಾಟೆ  ಅಸೋಸಿಯೆಶನ್ ಟ್ರಸ್ಟ್ (ರಿ) ಮಂಗಳೂರು ಇವರು ಆಯೋಜಿಸಿದ 2ನೇ ರಾಜ್ಯ ಮಟ್ಟದ ಅಹ್ವಾನಿತ ಕರಾಟೆ ಪಂದ್ಯಾಟದಲ್ಲಿ ಲೊರೆಟ್ಟೊ ಆಂಗ್ಲ ಮಾಧ್ಯಮ ಪ್ರೌಢ ಶಾಲೆ ಹಾಗೂ ಲೊರೆಟ್ಟೊ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಒಟ್ಟು 54 ವಿದ್ಯಾರ್ಥಿಗಳು ಭಾಗವಹಿಸಿ, 7ರಿಂದ 14 ವಯೋಮಿತಿಯ ವಿವಿಧ ಕಟಾ ಹಾಗೂ ಕುಮಿಟೆ ವಿಭಾಗದಲ್ಲಿ 18 ಚಿನ್ನ, 20 ಬೆಳ್ಳಿ , 14 ಕಂಚಿನ ಪದಕ ಹಾಗೂ ತಂಡ ಪ್ರಶಸ್ತಿಗಳನ್ನು ಗಳಿಸಿರುತ್ತಾರೆ.

ಲೊರೆಟ್ಟೊ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯಿನಿ ಭ| ಇಡೋಲಿನ್ ರೊಡ್ರಿಗಸ್, ಲೊರೆಟ್ಟೊ ಆಂಗ್ಲ ಮಾಧ್ಯಮ ಶಾಲೆಯ ಸಹ ಶಿಕ್ಷಕಿ ಅನಿತಾ ಪಾೈಸ್ , ಕರಾಟೆ ತರಗತಿಯ ಉಸ್ತುವಾರಿಗಳಾದ  ಪದ್ಮನಾಭ ಮಯ್ಯ, ಕ್ಲಾರಾ ಮೋರಸ್ ಹಾಗೂ ಕರಾಟೆ ತರಬೇತುದಾರರಾದ  ರೆನ್ಸಿ ಜೆರಾಲ್ಡ್ ಫೆರ್ನಾಂಡಿಸ್ ಪದಮಲೆ ಇವರು ಉಪಸ್ಥಿತರಿದ್ದರು.

ಈ ಯಶಸ್ಸಿಗೆ ಶ್ರಮಿಸಿದ ಎಲ್ಲಾ ವಿದ್ಯಾರ್ಥಿಗಳಿಗೆ ಹಾಗೂ ಕರಾಟೆ ತರಬೇತುದಾರರಿಗೆ  ಶಾಲಾ ಸಂಚಾಲಕರಾದ ವಂ|ಫಾ| ಫ್ರಾನ್ಸಿಸ್ ಕ್ರಾಸ್ತಾ, ಲೊರೆಟ್ಟೊ ಆಂಗ್ಲ ಮಾಧ್ಯಮ ಶಾಲೆಯ ಪ್ರಾಂಶುಪಾಲಾರಾದ ವಂ|ಫಾ| ಜೆಸನ್ ವಿಜಯ್ ಮೊನಿಸ್  ಶಾಲಾ ಸಿಬಂಧಿ ವರ್ಗ ಹಾಗೂ ಶಾಲಾ ಆಡಳಿತ ಮಂಡಳಿಯವರು ಅಭಿನಂದನೆಗಳನ್ನು ಸಲ್ಲಿಸಿದರು.