ಲಂಡನ್ನಿನ ಚೆಲ್ಸಿಯಾ ಮತ್ತು ವೆಸ್ಟ್ ಮಿನಿಸ್ಟರ್ ಆಸ್ಪತ್ರೆಯ ಕಲಾ ಶಾಲೆಯ ಬ್ರಿಟಿಷ್ ಮತ್ತು ಪ್ಯಾಲೆಸ್ತೀನ್ ಮಕ್ಕಳ ರಚಿಸಿದ ಚಿತ್ರ ಫಲಕಗಳನ್ನು ಇಸ್ರೇಲ್ ಪರ ವಕೀಲರ ಪ್ರತಿಭಟನೆಯ ಕಾರಣ ತೆಗೆಯಲಾಗಿದೆ.

ಆಸ್ಪತ್ರೆಗೆ ಸೇರುವ ಮಕ್ಕಳ ವಿಶೇಷ ಆಸಕ್ತಿ ಬೆಳೆಸಲು ‌ಇಲ್ಲೊಂದು ಶಾಲೆ ಇದೆ. 17 ವರುಷಗಳ ಹಿಂದೆ ಲಂಡನ್ ಮತ್ತು ಪ್ಯಾಲೆಸ್ತೀನ್ ಮಕ್ಕಳು ರಚಿಸಿದ 21 ಸೆರಾಮಿಕ್ ಚಿತ್ರ ತಟ್ಟೆಗಳನ್ನು ಸ್ವೀಡನ್‌ನಲ್ಲಿ ಪ್ರದರ್ಶಿಸಲಾಗಿತ್ತು. 2012ರಿಂದ ಚೆ ಮತ್ತು ವೆಮಿ ಆಸ್ಪತ್ರೆಯ ಹೊರ ಮಕ್ಕಳ ರೋಗಿಗಳ ಕಾರಿಡಾರ್‌ನಲ್ಲಿ ಹಾಕಿತ್ತು.

ಯುಕೆಎಲ್ಎಫ್ಐ- ಬ್ರಿಟನ್ನಿನ ಇಸ್ರೇಲ್ ಪರ ವಕೀಲರ ಕೂಟವು ಕಾನೂನು ಕ್ರಮದ ಬೆದರಿಕೆ ಹಾಕಿ ಇದನ್ನು ತೆಗೆಸಿದೆ.