ಮಂಗಳೂರು, ಮಾ.26: ಮಂಗಳೂರಿನ ಕದ್ರಿ ಹಿಲ್ಸ್‍ನಲ್ಲಿರುವ ಮಹಿಳಾ ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆಹಾಗೂ ಕಾರ್ಕಳ ಪಾಲಿಟೆಕ್ನಿಕ್ ಆವರಣದಲ್ಲಿರುವ ಕೆ.ಜಿ.ಟಿ.ಟಿ.ಐ ವಿಸ್ತರಣಾ ಕೆಂದ್ರದಲ್ಲಿ ವಿವಿಧ ಅಲ್ಪಾವಧಿ ಕೌಶಲ್ಯ ತರಬೇತಿಗಳಿಗೆ ಎಸ್.ಸಿ/ ಎಸ್.ಟಿ ಅಭ್ಯರ್ಥಿಗಳಿಂದ ಅರ್ಜಿಆಹ್ವಾನಿಸಲಾಗಿದೆ.
ಮಂಗಳೂರು ಕದ್ರಿಯಲ್ಲಿರುವ ಕರ್ನಾಟಕ ಜರ್ಮನ್ ತಾಂತ್ರಿಕ ತರಬೇತಿ ಸಂಸ್ಥೆ (ಕೆ.ಜಿ.ಟಿ.ಟಿ.ಐ.)ಯಲ್ಲಿ ಸಿಸ್ಕೊ ಸರ್ಟಿಫೈಡ್ ನೆಟ್‍ವರ್ಕ್ ಅಸೋಸಿಯೇಟ್ (ಸಿ.ಸಿ.ಎನ್.ಎ), ಸಿಸ್ಕೊ ಐ.ಟಿ. ಎಸೆನ್ಸಿಯಲ್ಸ್, ಬೇಸಿಕ್ ವೆಲ್ಡಿಂಗ್, ಟಿಗ್ ವೆಲ್ಡಿಂಗ್, ಮಿಗ್ ವೆಲ್ಡಿಂಗ್, ರೆಫ್ರಿಜರೇಶನ್ ಮತ್ತು ಏರ್‍ಕಂಡೀಷನಿಂಗ್, ಟ್ಯಾಲಿ ERP/PRIME ಕೋರ್ಸುಗಳು ಲಭ್ಯವಿದೆ.
ಕಾರ್ಕಳದ ಸರ್ಕಾರಿ ಪಾಲಿಟೆಕ್ನಿಕ್ ಆವರಣದಲ್ಲಿರುವ ಕೆಜಿಟಿಟಿಐ ವಿಸ್ತರಣಾ ಕೇಂದ್ರದಲ್ಲಿ ಅಓಅ ಮಿಲ್ಲಿಂಗ್, ಅಓಅಟರ್ನಿಂಗ್, ಮಾಸ್ಟರ್‍ಕ್ಯಾಮ್, ಕ್ಯಾಟಿಯಾ, ಸಿಸ್ಕೂ ಸರ್ಟಿಪೈಡ್ ನೆಟ್‍ವರ್ಕ್ ಆಸೋಸಿಯೇಟ್, ಐಟಿ ಎಸ್ಸೆನ್ಸಿಯಲ್ಸ್ (ಹಾರ್ಡ್‍ವೇರ್ & ನೆಟ್‍ವರ್ಕಿಂಗ್) ಮತ್ತು ಟ್ಯಾಲಿ ಪ್ರೈಮ್ ಅಲ್ಪಾವಧಿ ಕೋರ್ಸ್‍ಗಳು ಲಭ್ಯವಿದೆ.
ಅರ್ಹ ಪರಿಶಿಷ್ಠ ಜಾತಿ ಮತ್ತು ಪರಿಶಿಷ್ಠ ಪಂಗಡದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಆಸಕ್ತ ಅಭ್ಯರ್ಥಿಗಳು ಮಂಗಳೂರು ಅಥವಾ ಕಾರ್ಕಳದಲ್ಲಿರುವ ಕೆಜಿಟಿಟಿಐ ಕಛೇರಿಯಿಂದ ಅರ್ಜಿ ಪಡೆದು ತರಬೇತಿಗೆ ಹೆಸರು ನೊಂದಾಯಿಸಬಹುದು.
ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ: 0824-2211477, 8277741731 ಸಂಪರ್ಕಿಸಬಹುದು ಎಂದು ಕೆ.ಜಿ.ಟಿ.ಟಿ.ಐ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.