ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಟಾನ ಹಾಗೂ ಧವಳತ್ರಯ ಜೈನ ಕಾಶಿ ಟ್ರಸ್ಟ್ (ರಿ )ಶ್ರೀ ಜೈ ನ ಮಠ ವತಿಯಿಂದ ಉಚಿತ ನೇತ್ರ, ಕಿವಿ ಮೂಗು ಹಾಗೂ ದಂತ ತಪಾಸಣೆ ಶಿಬಿರ ಶ್ರೀ ಮಠ ದ ಭಟ್ಟಾರಕ ಸಭಾಭವನದಲ್ಲಿ ಬೆಳಿಗ್ಗೆ ಗಂಟೆ 10.00ಕ್ಕೆಡಾ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಟ್ಟಾಚಾರ್ಯ ವರ್ಯ ಪಂಡಿತಾಚಾರ್ಯ ವರ್ಯ ಸ್ವಾಮೀಜಿ ದೀಪ ಬೆಳಗಿಸಿ ಉದ್ಘಾಟಿಸಿದರು.

ಧವಳತ್ರಯ ಜೈನ ಕಾಶಿ ಟ್ರಸ್ಟ್ ಅರೋಗ್ಯ ಶಿಕ್ಷಣ ಭಾರತೀಯ ಕಲೆ ಸಂಸ್ಕೃತಿ ಸದಾ ಪ್ರೊಸ್ಸಾಹ ನೀಡುತ್ತಿದ್ದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಅರೋಗ್ಯ ಶಿಬಿರ ನಡೆಸಿ ಸುತ್ತ ಮುತ್ತಲಿನ ಜನರಿಗೆ ಜಾಗೃತಿ ಮೂಡಿಸಿ ಸಹಕಾರ ನೀಡುತ್ತಿರುದು ಶ್ಲಾಘನೀಯ ಎಂದು ತಿಳಿಸಿ 10 ಜನ ವೈದ್ಯರಿಗೆ ಶಾಲು ಸ್ಮರಣಿಕೆ ನೀಡಿ ಹರಸಿ ಆಶೀರ್ವಾದಿಸಿದರು. 

ಅತಿಥಿಗಳಾದ ಯಂ ಬಾಹುಬಲಿ ಪ್ರಸಾದ್, ಶಿಬಿರಗಳ ಪ್ರಯೋಜನ ಪಡೆಯುವಲ್ಲಿ ಹಿಂಜರಿಕೆ ಮಾಡಬಾರದು ಎಂದು ತಿಳಿಸಿದರು. ಅಡ್ವೋಕೇಟ್ ನೋಟರಿ ಶ್ವೇತಾ ಜೈನ್,  ಮಾತನಾಡಿ ಶಿಬಿರಗಳು ಹೆಚ್ಚು ಹೆಚ್ಚಾಗಿ ಆದಷ್ಟು ಸ್ವಸ್ಥ ಸಮಾಜ ನಿರ್ಮಾಣ ಸಾಧ್ಯ ಎಂದರು.  

ಬಸದಿ ಮುಕ್ತೇಸರ ಪಟ್ಣ ಶೆಟ್ಟಿ ಸುದೇಶ ಕುಮಾರ್,  ಉಪಸ್ಥಿತರಿದ್ದರು, ಸುಮಾರು ಹತ್ತು  ತಜ್ಞ ವೈದ್ಯರು ಉಚಿತ ಚಿಕಿತ್ಸೆ ಹಾಗೂ ಸಲಹೆ ನೀಡಿದರು. 

ನುರಿತ ಆಳ್ವಾಸ್ ಆಯುರ್ವೇದ ಆಸ್ಪತ್ರೆಯ ಶಾಲಾಕ್ಯ ತಂತ್ರ ವಿಭಾಗದ ವೈದ್ಯರಾದ ಡಾ.ರಶ್ಮಿ ಸುವರ್ಣ, ಕಿರಿಯ ವೈದ್ಯರಾದ ಡಾ. ಅನಘ ಕೆ ಪಿ, ಡಾ. ಅಭಿಷೇಕ್ ಟಿ ಆರ್, ಡಾ.ಸುನೀತಾ ಪಿ,ಡಾ. ಸ್ಪರ್ಶ ಎಸ್ ಕೆ, ಡಾ.ದೀಕ್ಷಾ, ಡಾ. ಜೀನು ಭಾಗಿಯಾಗಿದ್ದರು. ಡಾ.ರಶ್ಮಿ ಸುವರ್ಣ ಅವರು ಕಣ್ಣಿನ ಆರೋಗ್ಯದ ಬಗ್ಗೆ ಮಾಹಿತಿಯನ್ನು ಸಾರ್ವಜನಿಕರಿಗೆ ನೀಡಿದರು. ಉಚಿತ ಕಣ್ಣು ಕಿವಿ ಮೂಗು ಹಾಗೂ ದಂತ ತಪಾಸಣ ಶಿಬಿರವನ್ನು ಸಾರ್ವಜನಿಕರಿಗೆ ನೆರವೇರಿಸಲಾಯಿತು. ಉಚಿತವಾಗಿ ಒಸಡಿನ ಅನಾರೋಗ್ಯಕೆ ಚಿಕಿತ್ಸೆಯನ್ನು  ನೀಡಲಾಯಿತು.

ಶ್ರೀ ಮಠದ ವ್ಯವ ಸ್ಥಾಪಕ ಸಂಜಯಂತ ಕುಮಾರ್ ಸ್ವಾಗತಿಸಿದರು ಡಾ ಅಭಿಷೇಕ್ ವಂದಿಸಿದರು.