ಮಂಗಳೂರು: ಕ್ತಿನಗರದ ವಿಶ್ವ ಕೊಂಕಣಿ ಕೇಂದ್ರದ ಸಹಯೋಗದೊಂದಿಗೆ ಶ್ರೀ ಪೂರ್ಣಾನಂದ ಸೇವಾ ಪ್ರತಿಷ್ಠಾನ (ರಿ) ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಕುಡಾಳ್ ದೇಶಸ್ಥ ಆಧ್ಯ ಗೌಡ್ ಬ್ರಾಹ್ಮಣ ಸಂಘ (ರಿ), ಇವರ ಸಂಯುಕ್ತ ಆಶ್ರಯದಲ್ಲಿ ಕುಡಾಳ್ ದೇಶ್ಕರ್ ಸಮುದಾಯದ ಪದವಿ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ವಸತಿ ಸಹಿತ ನಾಲ್ಕು ದಿನಗಳ ಚಟುವಟಿಕೆ ಆಧಾರಿತ “ಪರಿಣತಿ” -2025' ವ್ಯಕ್ತಿತ್ವ ವಿಕಸನ ಮತ್ತು ಕೌಶಲ್ಯಾಭಿವೃದ್ಧಿ ಕಾರ್ಯಾಗಾರವನ್ನು ಆಯೋಜಿಸಲಾಗಿತ್ತು.
ಈ ಕಾರ್ಯಾಗಾರವನ್ನು ವಿಶ್ವ ಕೊಂಕಣಿ ಕೇಂದ್ರದ ಅಧ್ಯಕ್ಷರಾದ ಸಿಎ ನಂದ ಗೋಪಾಲ ಶೆಣೈ, ಇವರು ದೀಪ ಬೆಳಗಿಸಿ ಉದ್ಘಾಟಿಸಿದರು. ಹಾಗೂ ಶಿಬಿರಾರ್ಥಿಗಳನ್ನು ಉದ್ದೇಶಿಸಿ, "ಇಂದಿನ ಯುಗದಲ್ಲಿ ಶಿಕ್ಷಣದೊಂದಿಗೆ ಕೌಶಲ್ಯ ಚಟುವಟಿಕೆಯೂ ಅಗತ್ಯವಾಗಿದ್ದು ಇಂತಹ ತರಬೇತಿಯನ್ನು ಈ ಶಿಬಿರದಲ್ಲಿ ನೀಡಲಾಗುತ್ತದೆ. ಅಲ್ಲದೇ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (AI) ನಿಂದಾಗಿ ಉದ್ಯೋಗವೂ ಕಡಿಮೆಯಾಗಿದ್ದು, ಇದಕ್ಕೆ ಸರಿತೂಗುವ ಮನೋಸಾಮರ್ಥ್ಯವನ್ನು ಉಪಯೋಗಿಸಿಕೊಳ್ಳಬೇಕು ಎಂದು ನುಡಿದರು. ಗುರುಗಳ, ಹಿರಿಯರ ಮಾರ್ಗದರ್ಶನದಲ್ಲಿ, ಮಾತೃ ಸ್ಥಾನವನ್ನು ಮರೆಯದೆ ಆಲದ ಮರದಂತೆ ವಿಶಾಲವಾಗಿ ಬೆಳೆದು ಆತ್ಮವಿಶ್ವಾಸದಿಂದ ಜೀವನದಲ್ಲಿ ಮುನ್ನಡೆದು ಉಚ್ಚ ಸ್ಥಾನವನ್ನು ಗಳಿಸಬೇಕು ಎಂದು ಶುಭ ಹಾರೈಸಿದರು.
ವಿಶ್ವ ಕೊಂಕಣಿ ಕೇಂದ್ರದ ಉಪಾಧ್ಯಕ್ಷರಾದ ಡಿ. ರಮೇಶ ನಾಯಕ್ ಮೈರಾ, ಇವರು ಬಂದ ಅತಿಥಿ ಗಣ್ಯರನ್ನು ಸ್ವಾಗತಿಸುತ್ತಾ ಶಿಬಿರಾರ್ಥಿಗಳನ್ನು ಉದ್ದೇಶಿಸಿ "ವಿದ್ಯಾರ್ಥಿಗಳಿಗೆ ವ್ಯಕ್ತಿತ್ವ ಕೌಶಲ್ಯ, ತಂತ್ರಜ್ಞಾನಗಳ ಜ್ಞಾನ ದೊಂದಿಗೆ ಕೊಂಕಣಿ ಸಾಹಿತ್ಯ, ಶಿಕ್ಷಣ ಕಲೆ ಸಾಂಸ್ಕೃತಿಕ ಮೌಲ್ಯ, ಉಳಿಸಿ, ಬೆಳೆಸುವ ತರಬೇತಿಯನ್ನು ನೀಡಲಾಗುವುದು. ಪ್ರಗತಿ, ಸ್ಫೂರ್ತಿ, ಉನ್ನತಿ, ಪರಿಣತಿ ಹೀಗೆ 4 ಹಂತದಲ್ಲಿನ ಈ ಶಿಬಿರವು ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಸಹಾಯಕವಾಗುವುದು ಇದನ್ನೆಲಾ ಜೀವನದಲ್ಲಿ ಅಳವಡಿಸಿ ಉತ್ತಮವಾದ ಉದ್ಯೋಗ ಪಡೆದು ಸಮಾಜಕ್ಕೆ ಸೇವೆ ನೀಡಬೇಕು ಎಂದು ಭಾಗವಹಿಸಲು ಆಸಕ್ತಿ ಹೊಂದಿ ಬಂದಂಥ ಶಿಬಿರಾಥಿ೯ಗಳನ್ನು ಅಭಿನಂದಿಸಿದರು.
ಕೆಂಚಪಾಲ ಬಾಲಕೃಷ್ಣ ಪ್ರಭು, ಶೈಲಜಾ ಬಾಲಕೃಷ್ಣ ಪ್ರಭು, ರಾಮಕೃಷ್ಣ ಪ್ರಭು ಮಾರಿಬೆಟ್ಟು, ಸಂದೀಪ್ ಶೆಣೈ ವಗ್ಗ, ದೀಪಕ್ ಪ್ರಭು ವಗ್ಗ, ಶಿವಪ್ರಸಾದ್ ಉದ್ದಮಜಲು, ಶ್ರೀ ಪೂರ್ಣಾನಂದ ಸೇವಾ ಪ್ರತಿಷ್ಠಾನದ ಕಾರ್ಯದರ್ಶಿ ರವೀಂದ್ರ ನಾಯಕ್ ಕುಂಟಲ್ಪಾಡಿ, ಅನಂತ ಪ್ರಭು ಮರೋಳಿ, ಸಂಜೀವ ಸಾಮಂತ್ ಮರೋಳಿ, ವಿಶ್ವನಾಥ ಶೆಣೈ ಮರೋಳಿ, ಪುರೋಹಿತ ಸಂಘದ ಅಧ್ಯಕ್ಷರಾದ ಚಂದ್ರಹಾಸ್ ಭಟ್ ಇರುವೈಲು, ಗೋಪಾಲ್ ಸಾಮಂತ್ ಮೈರ, ಮೋಹನ್ ನಾಯಕ್ ಒಡ್ಡೂರು, ರಾಘವೇಂದ್ರ ಪ್ರಭು, ನಿಕಟಪೂರ್ವ ಅಧ್ಯಕ್ಷ ವಿಜಯ ಶೆಣೈ ಕೊಡಂಗೆ, ರಾಜೇಶ್ ಪ್ರಭು ಬನ್ನೂರು ಮುಂತಾದವರು ಉಪಸ್ಥಿತರಿದ್ದರು. ಈ ಕಾರ್ಯಾಗಾರವನ್ನು ಡಾ ವಿಜಯಲಕ್ಶ್ಮಿ ನಾಯಕ್ ಮಾರ್ಗದರ್ಶನದಲ್ಲಿ ಪ್ರಶಾಂತ ನಾಯಕ್, ಮಧುಸೂಧನ ಪ್ರಭು, ಪೂಜಾ ಪ್ರಭು, ಸ್ವಾತಿ ನಾಯಕ್ , ಮೇಘಾ ಶೆಣೈ ಡೆಚ್ಚಾರು ಇವರು ವಹಿಸಿಕೊಂಡಿರುವರು. ವಿಶ್ವ ಕೊಂಕಣಿ ಕೇಂದ್ರದ ಲಕ್ಷ್ಮಿ ಕಿಣಿ ಹಾಗೂ ವಿಘ್ಹೇಶ್ ಸಹಕರಿಸಿದರು.
ಈ ಸಂದರ್ಭದಲ್ಲಿ ವಿಶ್ವ ಕೊಂಕಣಿ ಕೇಂದ್ರದ ಕಾರ್ಯನಿರ್ವಹಣಾಧಿಕಾರಿ ಡಾ. ಬಿ. ದೇವದಾಸ್ ಪೈ, ಶಿಬಿರಾರ್ಥಿಗಳಿಗೆ ಕಾರ್ಯಾಗಾರದ ಉದ್ದೇಶ ಮತ್ತು ಅಭಿ ಶಿಕ್ಷಣ ನೀಡಿದರು. ಸುಜಾತಾ ರಮೇಶ ಸಾಮಂತ್ ಪ್ರಾರ್ಥಿಸಿದರು, ಶ್ರೀ ಪೂಣಾ೯ನಂದ ಸೇವಾ ಪ್ರತಿಷ್ಠಾನದ ಅಧ್ಯಕ್ಷರಾದ ಮುರಳಿಧರ ಪ್ರಭು ವಗ್ಗ ವಂದಿಸಿ, ಡಾ. ವಿಜಯಲಕ್ಷ್ಮಿ ನಾಯಕ್ ಕಾರ್ಯಕ್ರಮವನ್ನು ನಿರೂಪಿಸಿದರು.