ಸಚಿತ್ರ ವರದಿ: ರಾಯಿ ರಾಜ ಕುಮಾರ್ ಮೂಡುಬಿದಿರೆ

ಮೂಡುಬಿದಿರೆ: ನಮಗೆಲ್ಲ ತಿಳಿದಿರುವಂತೆ ಮೂಡುಬಿದಿರೆಯಲ್ಲಿ ಭಾರತದ ರಾಷ್ಟ್ರೀಯ ಹೆದ್ದಾರಿ 169 ಹಾದು ಹೋಗುತ್ತದೆ. ಇದು ಕರಾವಳಿ ಕರ್ನಾಟಕವನ್ನು ಮಹಾರಾಷ್ಟ್ರದ ಸೋಲಾಪುರದೊಂದಿಗೆ ಸಂಪರ್ಕಿಸುವ ಹಳೆಯ ರಾಷ್ಟ್ರೀಯ  ಹೆದ್ದಾರಿ 13ರ ಭಾಗವಾಗಿದೆ.

ಮಂಗಳೂರಿನಿಂದ ಪ್ರಾರಂಭವಾಗಿ ಮೂಡುಬಿದಿರೆ ಮೂಲಕ ಸಾಗುವ ಈ ಹೆದ್ದಾರಿಯ ಬದಿಗಳು- "ಅತ್ತದರಿ ಇತ್ತಪುಲಿ" - ಎಂಬಂತೆ ಅತ್ಯಂತ ಕಡಿದಾದ ಚರಂಡಿಯಿಂದ ಆವರಿಸಲ್ಪಟ್ಟಿದೆ.

ಸದಾ ಜನಜಂಗುಳಿ, ಶಾಲಾ ವಿದ್ಯಾರ್ಥಿ ಗಳಿಂದ ಕೂಡಿರುವ ಜೈನ ಪೇಟೆಯು ಬಡಗು ಬಸದಿ ತಿರುವು, ಕೊಂಡಿ  ರಸ್ತೆ ತಿರುವು , ಶಿರ್ತಾ ಡಿ ರಸ್ತೆ ತಿರುವು, ಜೈ ನ ಮಠ ತಿರುವು ಇತ್ಯಾದಿ ಅತ್ಯಂತ ಅಗಲ ಕಿರಿದಾದ ತಿರುವುಗಳಿಂದ ನಡೆದಾಡಲು ಅತ್ಯಂತ ಹೆಚ್ಚು ತ್ರಾಸ ಪಡುವ ಪ್ರದೇಶವಾಗಿದೆ. ಇಂತಹ ತೀವ್ರ ತಿರುವಿನ ಕಾರಣ ಸಾವಿರಾರು ಬಾರಿ ನಾಗರಿಕರು, ವಿದ್ಯಾರ್ಥಿಗಳು ಘಾಸಿಗೊಂಡ ಹಲವಾರು ಉದಾಹರಣೆಗಳು ಪ್ರತಿ ವರ್ಷವೂ ನಡೆಯುತ್ತಿರುತ್ತದೆ.

ಪ್ರತಿ ವರ್ಷ ನೂರಾರು ಮಂದಿ ಸಾರ್ವಜನಿಕರು, ವಿದ್ಯಾರ್ಥಿಗಳು ಈ ಪ್ರಕಾರ ಘಾಸಿಗೊಂಡು , ದುರ್ಘಟನೆಗಳು ಜರಗಿದರೂ, ಹಲವಾರು ಬಾರಿ ವಾಹನ ಅಪಘಾತಗಳು ಜರುಗಿ ಚಾಲಕರು ಕೈ ಕೈ ಮಿಲಾಯಿಸಿಕೊಂಡರೂ , ಹಲವಾರು ಬಾರಿ ರಾತ್ರಿ ಹೊತ್ತು ತಿರುವಿನ ಕಟ್ಟಡಗಳು ಮುಕ್ಕಾದರೂ, ಕೆಲವಾರು ಬಾರಿ ಗಂಟೆಗಟ್ಟಲೆ ಈ ಪ್ರದೇಶಗಳಲ್ಲಿ ಟ್ರಾ ಫಿಕ್ ಜಾಮ್ ಅಥವಾ ಸುಗಮ ಸಂಚಾರಕ್ಕೆ ಅಡೆತಡೆಯಾದರೂ ಕೂಡ ಸ್ಥಳೀಯ ಸ್ವ ಸರ್ಕಾರವಾದ ಪುರಸಭೆಯಾಗಲಿ, ಹೆದ್ದಾರಿ ಪ್ರಾಧಿಕಾರವಾಗಲಿ, ಈ ತನಕದ ಯಾವುದೇ ಸ್ಥಳೀಯ ಶಾಸಕರುಗಳೆ ಆಗಲಿ, ಸ್ಥಳೀಯ ಪುರಸಭಾ ಸದಸ್ಯರುಗಳೇ ಆಗಲಿ, ಅಧಿಕಾರಿ ವರ್ಗದವರೇ ಆಗಲಿ ಕಣ್ಣಿದ್ದು ಕುರುಡರಂತೆ ವರ್ತಿಸಿದ್ದಾರೆ. ನಾಗರಿಕರು ವಿದ್ಯಾರ್ಥಿಗಳು ರಸ್ತೆಯ ಬದಿಯಲ್ಲಿ ಸ್ಥಳವಿಲ್ಲದೆ ಚರಂಡಿಯಲ್ಲಿ ಎದ್ದು ಬಿದ್ದು ನಡೆದಾಡುತ್ತಿರುವುದನ್ನು ಕಂಡು ನಕ್ಕಿದ್ದು ಇರಬಹುದು. ಇನ್ನಾದರೂ ಸೂಕ್ತ ರೀತಿಯಲ್ಲಿ ಮುಚ್ಚಿದ ಚರಂಡಿಯನ್ನು ನಿರ್ಮಿಸುವ  ಮನಸ್ಸು ಇವರಿಗೆ ಬರಬಹುದೆಂದು ಆಶಿಸಬಹುದೇ ?