ಮುಂಬೈ,ಫೆ 26:  ಖ್ಯಾತ ಹಿನ್ನೆಲೆ ಗಾಯಕ ಮತ್ತು ಗಜಲ್ ಮಾಂತ್ರಿಕ ಪಂಕಜ್ ಉದಾಸ್ (72) ದೀರ್ಘಕಾಲದ ಅನಾರೋಗ್ಯದ ಕಾರಣದಿಂದಾಗಿ ಸೋಮವಾರ ದಂದು ನಿಧನರಾಗಿದ್ದಾರೆ ತಿಳಿದು ಬಂದಿದೆ. ಪಂಕಜ್  ಉಧಾಸ್ ಅವರು ಕ್ಯಾನ್ಸರ್ ನಿಂದ ಬಳಲುತ್ತಿದ್ದು, ಕೆಲ ದಿನಗಳಿಂದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು  ಎನ್ನಲಾಗಿದೆ.

ಗುಜರಾತ್ ಮೂಲದ ಗಾಯಕನಿಗೆ 2006 ರಲ್ಲಿ ಪದ್ಮಶ್ರೀ ಪ್ರಶಸ್ತಿಯನ್ನು ನೀಡಲಾಯಿತು ಮತ್ತು ಬಾಲಿವುಡ್‌ನಲ್ಲಿ ಹಿಂದಿ ಮತ್ತು ಇತರ ಭಾಷೆಗಳಲ್ಲಿ ಅನೇಕ ಹಿಟ್ ಹಾಡುಗಳಿಂದ ಹೆಸರುವಾಸಿಯಾಗಿದ್ದಾರೆ.