ಮಂಗಳೂರು: ಮಂಗಳೂರಿನ ಕಣಚೂರು ಹಾಗೂ ಮಂಗಳಾ ಆಸ್ಪತ್ರೆಯ ವೈದ್ಯ ,ಮೂಲವ್ಯಾಧಿ ಕ್ಷಾರತಜ್ಞ ಹಾಗೂ ಬರಹಗಾರ ಡಾ ಸುರೇಶ ನೆಗಳಗುಳಿ ಇವರ ನೂತನ ಗಜಲ್ ಸಂಕಲನ "ಕುವಲಯ - ನೂರೆಂಟು ಗಜಲ್ ಗಳು" ಪುಸ್ತಕವು ದಿನಾಂಕ 7 ಸೆಪ್ಡೆಂಬರ್ 25 ರಂದು ಬೀದರ್ ನ ಸರಕಾರೀ ನೌಕರರ ಸಹಕಾರೀ ಸಭಾ ಭವನದಲ್ಲಿ ನಡೆದ ಕರ್ನಾಟಕ ರಾಜ್ಯ ದ್ವಿತೀಯ ಗಜಲ್ ಸಮ್ಮೇಳನದಲ್ಲಿ ಲೋಕಾರ್ಪಣೆಯಾಯಿತು.

ಖ್ಯಾತ ಗಜಲ್ ಕಾರ ಮಹಮ್ಮದ್ ಬಡ್ಡೂರು ಉದ್ಘಾಟಿಸಿದ ಈ ಸಮಾರಂಭದಲ್ಲಿ ಸಮ್ಮೇಳನಾಧ್ಯಕ್ಷ ಡಾ.ಕಾಶೀನಾಥ ಅಂಬಲಗೆ, ಅಧ್ಯಕ್ಷ ಶ್ರೀ ರಂಗಸ್ವಾಮಿ ಸಿದ್ದಯ್ಯ, ಸಂಘಟಕ ಸಂಜೀವ ಅತಿವಾಳೆ ಕಾರ್ಯದರ್ಶಿ ಮಹೀಪಾಲ ರೆಡ್ಡಿ ಸೇಡಂ, ಅಬ್ದುಲ್ ಹೈ ತೋರಣಗಲ್,ಬೀದರ್ ನಗರಾಭಿವೃದ್ಧಿ ಅಧ್ಯಕ್ಷ , ಬಸವರಾಜ ಜಾಬ ಶೆಟ್ಟಿ, ಗಜಲ್ ಗೋಷ್ಠಿ ಅಧ್ಯಕ್ಷ ವೈ ಎಮ್ ಯಾಕೊಳ್ಳಿ, ,ಸರಕಾರೀ‌ ನೌಕರರ ಸಂಘದ ಅಧ್ಯಕ್ಷ ಸೋಮಶೇಖರ ಬಿರಾದಾರ ಚಿದ್ರಿ, ಪೂರ್ವಧ್ಯಕ್ಷೆ ಪ್ರಭಾವತಿ ದೇಸಾಯಿ ಮತ್ತಿತರರು ಈ ಸಮಾರಂಭಕ್ಕೆ ಸಾಕ್ಷಿಯಾದರು.

ಖ್ಯಾತ ಕವಿ ಹಾಮ.ಸತೀಶ್, ಖ್ಯಾತ ಬರಹಗಾತಿ ರತ್ನಾ ಕೆ ಭಟ್ , ಕೇಂದ್ರ ಕನ್ನಡ ಸಾಹಿತ್ಯ ವೇದಿಕೆಯ ಹಸೀನಾ ಬೇಗಂ, ಎ ಕಮಲಾಪುರ ಸುರಪುರ ,ಸಿದ್ಧರಾಮ‌ ಹೊನಕಲ್ ,ಜ್ಯೋತಿ ಮಾಳಿ, ರತ್ನರಾಯ ಮಲ್ಲ, ವಿಜಯಕುಮಾರ್ ಗೌರ, ಅನ್ನಪೂರ್ಣ ಆರ್ ಹಿರೇಮಠ. ರೇಣುಕಾ‌ ತಾಯಿ ಸಂತಬಾ ರೇಮಾಜಿ, ಅರುಣ ಕೂಡ್ಲಿಗಿ ,ಆನಂದ ಬೋವಿ, ಅರುಣಾ ನಾಗೇಂದ್ರ, ಈಶ್ವರ ಮಮದಾಪೂರ,ಹಮೀದಾ ಬೇಗಂ ದೇಸಾಯಿ ,ರಾಠೋಡ್ ಮತ್ತಿತರರು ಉಪಸ್ಥಿತರಿದ್ದರು

ಈ ಸಂದರ್ಭದಲ್ಲಿ ಡಾ. ಸುರೇಶ ನೆಗಳಗುಳಿಯವರನ್ನು ಹಾರ ಶಾಲು ಸ್ಮರಣಿಕೆಗಳಿಂದ ಸನ್ಮಾನಿಸಲಾಯಿತು.