ವರದಿ ರಾಯಿ ರಾಜ ಕುಮಾರ
ತೆಂಕಮಿಜಾರು ಗ್ರಾ. ಪಂ. ವ್ಯಾಪ್ತಿಯ ತೆಂಕಮಿಜಾರು ಹಾಗೂ ಬಡಗಮಿಜಾರು ಗ್ರಾಮಗಳ ಪ. ಜಾತಿ ಮತ್ತು ಪ. ಪಂಗಡಗಳ ಹಾಗೂ ವಿಕಲಚೇತನರ ಕುಂದು ಕೊರತೆ ಸಭೆ ಹಾಗೂ ವಿವಿಧ ಯೋಜನೆಗಳ ಸವಲತ್ತುಗಳ ವಿತರಣಾ ಕಾಯ೯ಕ್ರಮವು ದಶಂಬರ 6 ರಂದು ಅಶ್ವತ್ಥಪುರ ಸಂತೆಕಟ್ಟೆಯ ವಿವಿದೋದ್ದೇಶ ಸಭಾಂಗಣದಲ್ಲಿ ನಡೆಯಿತು.



ಶಾಸಕ ಉಮಾನಾಥ ಕೋಟ್ಯಾನ್ ಕಾಯ೯ಕ್ರಮವನ್ನು ಉದ್ಘಾಟಿಸಿ, ಫಲಾನುಭವಿಗಳಿಗೆ ಸವಲತ್ತುಗಳನ್ನು ವಿತರಿಸಿ ಶುಭ ಹಾರೈಸಿದರು. ತೆಂಕಮಿಜಾರು ಗ್ರಾ. ಪಂಚಾಯತ್ ಅಧ್ಯಕ್ಷೆ ಶಾಲಿನಿ ಕೆ. ಸಾಲ್ಯಾನ್ ಅಧ್ಯಕ್ಷತೆ ವಹಿಸಿ ಮಾತನಾಡಿ ಇಂದು ನಾವು ವಿವಿಧ ಯೋಜನೆಗಳ ಫಲಾನುಭವಿಗಳಿಗೆ ಸವಲತ್ತು ವಿತರಣೆ ಮಾಡಲಾಗಿದೆ. ಪಂಚಾಯತ್ ನ ಸ್ವಂತ ಸಂಪನ್ಮೂಲ ಶೇ 5ರ ನಿಧಿಯಲ್ಲಿ ಅಂಗವಿಕಲರ ಶ್ರೇಯೋಭಿವೃದ್ಧಿ ನಿಧಿಯಿಂದ 65 ಫಲಾನುಭವಿಗಳಿಗೆ ತಲಾ ಎರಡು ಸಾವಿರದಂತೆ 1.30 ಲಕ್ಷ, ಪ. ಜಾತಿ/ ಪ. ಪಂಗಡದ ಶೇ 25ರ ನಿಧಿಯ ರೂ. 1 ಲಕ್ಷ ವೆಚ್ಚದಲ್ಲಿ 23 ಫಲಾನುಭವಿಗಳಿಗೆ ಸಿಂಟೆಕ್ಸ್ ಟ್ಯಾಂಕ್, ರೂ.2 ಲಕ್ಷ ವೆಚ್ಚದಲ್ಲಿ 69 ವಿದ್ಯಾಥಿ೯ಗಳಿಗೆ ಸ್ಟಡಿ ಟೇಬಲ್ಸ್ ಹಾಗೂ 6 ಮಂದಿಗೆ ವೈದ್ಯಕೀಯ ವೆಚ್ಚಕ್ಕಾಗಿ ತಲಾ 5 ಸಾವಿರದಂತೆ 30 ಸಾವಿರದ ಚೆಕ್ ವಿತರಿಸಲಾಗಿದೆ. ಇನ್ನು ಬಾಕಿ ಉಳಿದವರಿಗೆ ಪಂಚಾಯತ್ ನಲ್ಲಿ ವಿತರಿಸಲಾಗುವುದು ಎಂದು ತಿಳಿಸಿದರು.
ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ನಾದಸ್ವರ ವಾದಕ ದಿನೇಶರನ್ನು ಸನ್ಮಾನಿಸಲಾಯಿತು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಕಲ್ಲಮುಂಡ್ಕೂರು ವಲಯದ ಮೇಲ್ವೀಚಾರಕಿ ಶುಭ ಇಲಾಖಾ ಮಾಹಿತಿ ನೀಡಿದರು.
ಪಂಚಾಯತ್ ಸದಸ್ಯರಾದ ರುಕ್ಮಿಣಿ, ಹರಿಪ್ರಸಾದ್ ಶೆಟ್ಟಿ, ಸಮಿತಾ, ದಿನೇಶ್ ಎಲ್.,ವಿದ್ಯಾನಂದ ಶೆಟ್ಟಿ, ಮಹೇಶ್, ನಿಶಾ, ಯೋಗಿನಿ, ಲಕ್ಷ್ಮೀ, ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ರೋಹಿಣಿ ಬಿ. ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಕಾಯ೯ದಶಿ೯ ರಮೇಶ್ ಬಂಗೇರಾ ಫಲಾನುಭವಿಗಳ ವಿವರ ನೀಡಿದರು. ರಾಕೇಶ್ ಭಟ್ ವಂದಿಸಿದರು.
.