ಬಂಟ್ವಾಳ: ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಬಿ.ಸಿ.ರೋಡು ಶಾಖಾ ಕಟ್ಟಡದ ನೆಲ ಅಂತಸ್ತಿನಲ್ಲಿ ಅನುಷ್ಠಾನಗೊಳಿಸಿದ ಬ್ಯಾಂಕಿನ ನೂತನ ಎಟಿಎಂ ಸೆ. 20ರಂದು ಉದ್ಘಾಟನೆಗೊಂಡಿತು.

ಬ್ಯಾಂಕಿನ ಉಪಾಧ್ಯಕ್ಷ ವಿನಯ ಕುಮಾರ್ ಎಟಿಎಂ ಉದ್ಘಾಟಿಸಿ ಮಾತನಾಡಿ, ನಮ್ಮ ಬ್ಯಾಂಕಿನ ಅಧ್ಯಕ್ಷರಾದ ಡಾ| ಎಂ.ಎನ್.ರಾಜೇಂದ್ರಕುಮಾರ್ ಅವರ ವಿಶೇಷ ಮುತುವರ್ಜಿಯಿಂದ ಅನುಷ್ಠಾನಗೊಂಡ ಈ ಎಟಿಎಂ ಸರ್ವರ ಆರ್ಥಿಕ ವ್ಯವಹಾರಗಳಿಗೆ ನೆರವಾಗಲಿದೆ. ಬ್ಯಾಂಕಿನ ಗ್ರಾಹಕರ ಪ್ರೋತ್ಸಾಹದ ಪರಿಣಾಮದಿಂದ ಬ್ಯಾಂಕ್ ಈ ಮಟ್ಟಕ್ಕೆ ಪ್ರಗತಿ ಹೊಂದಿದೆ ಎಂದರು.ದಕ್ಷಿಣ ಕನ್ನಡ ಕೃಷಿ ಅಭಿವೃದ್ಧಿ ಸಹಕಾರಿ ಸಂಘದ ಅಧ್ಯಕ್ಷ ರವೀಂದ್ರ ಕಂಬಳಿ ಮುಖ್ಯಅತಿಥಿಯಾಗಿ ಪಾಲ್ಗೊಂಡಿದ್ದರು. ಬ್ಯಾಂಕಿನ ನಿರ್ದೇಶಕರಾದ ಟಿ.ಜಿ.ರಾಜಾರಾಮ್ ಭಟ್, ಶಶಿಕುಮಾರ್ ರೈ ಬಿ, ಐಕಳ ಬಾವ ದೇವಿಪ್ರಸಾದ್ ಶೆಟ್ಟಿ ಬೆಳಪು, ಮೋನಪ್ಪ ಶೆಟ್ಟಿ ಎಕ್ಕಾರು, ಮುಖ್ಯಕಾರ್ಯನಿರ್ವಹಣಾಽಕಾರಿ ರವೀಂದ್ರ ಬಿ, ಜಿಎಂ ಗೋಪಿನಾಥ್ ಭಟ್, ಭೂ ಅಭಿವೃದ್ಧಿ ಬ್ಯಾಂಕ್ ರಾಜ್ಯ ನಿರ್ದೇಶಕ ರಾಜಶೇಖರ ಜೈನ್, ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಪ್ರಸಾದ್ ಕೌಶಲ್ ಶೆಟ್ಟಿ, ಸಹಕಾರಿ ಇಲಾಖೆಯ ಗೋಪಾಲ ಗೌಡ, ಬಿ.ಸಿ.ರೋಡು ಶಾಖಾ ವ್ಯವಸ್ಥಾಪಕಿ ಸೌಮ್ಯ, ವಿವಿಧ ಸಹಕಾರಿ ಸಂಘಗಳ ಅಧ್ಯಕ್ಷರು, ಸಿಇಒ ಪಾಲ್ಗೊಂಡಿದ್ದರು.

ಕಾರ್ಯಕ್ರಮಕ್ಕೆ ಮಾಜಿ ಸಚಿವ ಬಿ.ರಮಾನಾಥ ರೈ ಅವರು ಭೇಟಿ ನೀಡಿದರು. ಅಮ್ಟಾಡಿ ಸಿಎ ಬ್ಯಾಂಕ್ ಸಿಬಂದಿ ದಿನೇಶ್ ಅಮೀನ್ ಕಾರ್ಯಕ್ರಮ ನಿರ್ವಹಿಸಿದರು.